Spread the love

ಶಂಕರನಾರಾಯಣ: ದಿನಾಂಕ 10/08/2025(ಹಾಯ್ ಉಡುಪಿ ನ್ಯೂಸ್) ಕುಳುಂಜೆ ಗ್ರಾಮದ ಬಾಕುಡೆ ಎಂಬಲ್ಲಿ ಶೇಡಿಮನೆ ಹೊಳೆಯಿಂದ ಮರಳನ್ನು ಕಳ್ಳತನ ಮಾಡುತ್ತಿದ್ದ ಮೂವರು ವ್ಯಕ್ತಿಗಳನ್ನು ಶಂಕರನಾರಾಯಣ ಪೊಲೀಸ್ ಠಾಣೆಯ ಪಿಎಸ್ಐ ಯವರಾದ ಜಾವ ಯೂನೂಸ್ ಆರ್.ಗಡ್ಡೇಕರ ಅವರು ಬಂಧಿಸಿದ್ದಾರೆ.

ಶಂಕರನಾರಾಯಣ ಪೊಲೀಸ್ ಠಾಣೆಯ ಪಿಎಸ್ಐ ಯವರಾದ  ಜಾವ ಯೂನೂಸ್‌ ಆರ್‌, ಗಡ್ಡೇಕರ್‌, ಅವರಿಗೆ ದಿನಾಂಕ:09-08-2025ರಂದು ಬೆಳಿಗ್ಗೆ ಚರಣ , ಮಹೇಶ ಹಾಲಾಡಿ ಮತ್ತು ಸುಧೀರ ಎಂಬವರು ಕುಳುಂಜೆ ಗ್ರಾಮದ ಬಾಕುಡೆ ಎಂಬಲ್ಲಿ ಶೇಡಿಮನೆ ಹೊಳೆಯಿಂದ ಮರಳನ್ನು ಕಳ್ಳತನ ಮಾಡಿ ಅಕ್ರಮವಾಗಿ ಯಾವುದೇ ಪರವಾನಿಗೆ ಇಲ್ಲದೆ ಸಾಗಾಟ ಮಾಡಲು 3 ಟಿಪ್ಪರ ಲಾರಿಗಳಲ್ಲಿ ಮರಳನ್ನು ತುಂಬಿಸಿ ನಿಲ್ಲಿಸಿರುವುದಾಗಿ ಬಂದ ಮಾಹಿತಿಯಂತೆ ಕುಳುಂಜೆ ಗ್ರಾಮದ ಬಾಕುಡೆ ಎಂಬಲ್ಲಿಗೆ ಕೂಡಲೇ ಹೋಗಿ ದಾಳಿ ನಡೆಸಿ KA-21-B-3823 ನೇ ನಂಬ್ರದ ಟಿಪ್ಪರ್ ಲಾರಿ, KA-20-AB-1004 ನೇ ನಂಬ್ರದ ಟಿಪ್ಪರ್ ಲಾರಿ ಹಾಗೂ KA-21-A-8357 ನೇ ನಂಬ್ರದ ಟಿಪ್ಪರ್ ಲಾರಿಯನ್ನು ಹಾಗೂ 3 ಟಿಪ್ಪರ ಲಾರಿಯ ಬಾಡಿಯಲ್ಲಿ ತುಂಬಿಸಿದ ಸುಮಾರು 9 ಯುನಿಟ್ ಮರಳನ್ನು ಹಾಗೂ 3 ಟಿಪ್ಪರ ಲಾರಿಯನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.

ಆರೋಪಿಗಳು ಚರಣನ ಟಿಪ್ಪರ್ ಲಾರಿಯಲ್ಲಿ ಕುಳುಂಜೆ ಗ್ರಾಮದ ಬಾಕುಡೆ ಎಂಬಲ್ಲಿ ಶೇಡಿಮನೆ ಹೊಳೆಯಿಂದ ಮರಳನ್ನು ಕಳ್ಳತನ ಮಾಡಿ, ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ಸಾಗಾಟ ಮಾಡುವ ಉದ್ದೇಶದಿಂದ ಮರಳನ್ನು ತಮ್ಮ ಟಿಪ್ಪರ ಲಾರಿಯಲ್ಲಿ ತುಂಬಿಸಿ ಇಟ್ಟಿದ್ದಾರೆ ಎಂದು ದೂರು ದಾಖಲಿಸಿದ್ದಾರೆ.

ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ  ಕಲಂ: 303(2), 3(5) BNS-2023 ಮತ್ತು ಕಲಂ 42, 43, 44 KARNATAKA MINOR MINERAL CONSISTENT RULE-1994 ಹಾಗೂ ಕಲಂ: 4(1-A), 21(4) MMRD Act ರಂತೆ ಪ್ರಕರಣ ದಾಖಲಾಗಿದೆ.

error: No Copying!