
ಕೊಲ್ಲೂರು: ದಿನಾಂಕ 09/08/2025 (ಹಾಯ್ ಉಡುಪಿ ನ್ಯೂಸ್) ಗ್ರಾಮದ ನಿವಾಸಿಯೋರ್ವರು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊಲ್ಲೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.
ಬೈಂದೂರು ತಾಲೂಕು ಕೊಲ್ಲೂರು ಗ್ರಾಮದ ನಿವಾಸಿ ಮಧುಕರ (38) ಅವರು ದಿನಾಂಕ:07-08-2025 ರಂದು ತನ್ನ ದೊಡ್ಡಮ್ಮನ ಮಗ ನಟೇಶ್ (36) ಕೊಲ್ಲೂರಿನ ಸಂಪ್ರೆ ಎಂಬಲ್ಲಿಯ ಸೌಪರ್ಣಿಕ ನದಿಯಲ್ಲಿ ಜಾರಿ ಬಿದ್ದು ಹರಿಯುತ್ತಿದ್ದ ನದಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾನೆ ಎಂದು ದೂರು ನೀಡಿದ್ದಾರೆ.
ನಟೇಶ್ ಗಾಗಿ ಹುಡುಕಾಡಿದಾಗ ನಟೇಶ ರವರ ಮೃತ ಶರೀರ ಕೊಲ್ಲೂರಿನ ಮಾವಿನಕಾರು ಸೇತುವೆ ಬಳಿ ಬೆಳಿಗ್ಗೆ ನದಿಯಲ್ಲಿ ದೊರೆತಿದ್ದು ಕೊಲ್ಲೂರು ಠಾಣೆಯಲ್ಲಿ ಯುಡಿಆರ್ 16/2025 ರಂತೆ ಪ್ರಕರಣ ದಾಖಲಾಗಿರುತ್ತದೆ. ನಟೇಶ್ ರವರು ಸೌಪರ್ಣಿಕಾ ನದಿಯ ದಡದಲ್ಲಿ ನಿಲ್ಲಿಸಿದ ಅವರ ಕಾರಿನ ಬೀಗದ ಕೀ ಕಾರಿನಲ್ಲಿಯೇ ಇದ್ದು, ಇದನ್ನು ಅವರ ಮನೆಯ ಬಳಿ ನಿಲ್ಲಿಸಿದ್ದು ದಿನಾಂಕ 08/08/2025 ರಂದು ಬೆಳಿಗ್ಗೆ ಮಧುಕರ ರವರು ನಟೇಶ್ ರವರ ಕಾರಿನ ಒಳಗೆ ನೋಡಿದಾಗ ಕಾರಿನ ಒಳಗೆ ನಟೇಶ್ ರವರು ಬಳಸುತ್ತಿದ್ದ ಮೊಬೈಲ್ ಮತ್ತು ಒಂದು ಸಣ್ಣ ಚೀಟಿ ದೊರೆತ್ತಿದ್ದು,ಅದರಲ್ಲಿ ಮೊಬೈಲ್ ಪಾಸ್ ವರ್ಡ್ ಇದ್ದು, ತನ್ನ ಸಾವಿನ ರಹಸ್ಯ ಮೊಬೈಲ್ ಗ್ಯಾಲರಿಯಲ್ಲಿದೆ ಎಂಬಿತ್ಯಾದಿಯಾಗಿ ಬರೆದಿರುವುದನ್ನು ನೋಡಿ ಮೊಬೈಲ್ ಅನ್ನು ಒಪನ್ ಮಾಡಿ ನೋಡಿದಾಗ ಅದರಲ್ಲಿನ ವಿಡಿಯೋ ತುಣುಕುಗಳಲ್ಲಿ ಸಂತು ಮತ್ತು ನಾಗೇಶ ಯಾನೆ ದಳಿ-ನಾಗ ಇವರು ತನ್ನ ಬಗ್ಗೆ ಅಪ ಪ್ರಚಾರ ಮಾಡುತ್ತಿದ್ದು, ಇದರಿಂದ ಮನನೊಂದು ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಇದ್ದು. ನಟೇಶ್ ರವರ ಆತ್ಮಹತ್ಯೆಗೆ ಸಂತು ಯಾನೇ ಸಂತೋಷ್ ಮತ್ತು ದಳಿ-ನಾಗ ಇವರೇ ಕಾರಣರಾಗಿರುವುದಾಗಿ ಮಧುಕರ ಅವರು ನೀಡಿದ ದೂರಿನಂತೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಕಲಂ: 108 R/W 3(5) BNS ರಂತೆ ಪ್ರಕರಣ ದಾಖಲಾಗಿದೆ.