Spread the love

ಬ್ರಹ್ಮಾವರ: ದಿನಾಂಕ :01-08-2025(ಹಾಯ್ ಉಡುಪಿ ನ್ಯೂಸ್) ಓಝೋನ್ ಲಾಡ್ಜ್ ನಲ್ಲಿ  ಅಂದರ್ ಬಾಹರ್ ಜುಗಾರಿ ಆಡುತ್ತಿದ್ದ ಆರು ಜನರನ್ನು ಬ್ರಹ್ಮಾವರ ಪೊಲೀಸ್‌ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ಅಶೋಕ ಮಾಳಬಾಗಿ ಅವರು ಬಂಧಿಸಿದ್ದಾರೆ.

ಬ್ರಹ್ಮಾವರ ಪೊಲೀಸ್‌ ಠಾಣೆ ಉಪನಿರೀಕ್ಷಕರಾದ  ಅಶೋಕ ಮಾಳಬಾಗಿ  ಅವರಿಗೆ ದಿನಾಂಕ :31-07-2025 ರಂದು ವಾರಂಬಳ್ಳಿ ಗ್ರಾಮದ ಓಝೋನ್ ಲಾಡ್ಜ್ ‌ನ 2 ನೇ ಮಹಡಿಯ ರೂಮ್‌ ಒಂದರಲ್ಲಿ ಹಣವನ್ನು ಪಣವನ್ನಾಗಿಟ್ಟು ಅಂದರ್ ಬಾಹರ್ ಇಸ್ಪೀಟ್ ಜುಗಾರಿ ಆಟ ಆಡುತ್ತಿದ್ದಾರೆ ಎಂಬುದಾಗಿ ಬಂದ ಮಾಹಿತಿಯಂತೆ ಕೂಡಲೇ ದಾಳಿ ನಡೆಸಿದಾಗ ರೂಮಿನೊಳಗಡೆ 8 ಜನರಿದ್ದು, 2 ಟೇಬಲ್‌ಗಳ ಮೇಲೆ ಹಣವನ್ನು ಪಣವಾಗಿಟ್ಟು, ಇಸ್ಪೀಟು ಎಲೆಗಳನ್ನು ಹರಡಿಕೊಂಡು ಅಂದರ್-ಬಾಹರ್‌ ಜುಗಾರಿ ಆಟ ಆಡುತ್ತಿದ್ದವರಲ್ಲಿ ಇಬ್ಬರು ಸುರೇಶ್‌, ಸುಜಯ್‌ ಎಂಬವರು ಓಡಿ ಹೋಗಿದ್ದು, ಉಳಿದವರನ್ನು ಸಿಬ್ಬಂದಿಯವರು ಸುತ್ತುವರಿದು ಹಿಡಿದು ಹೆಸರು ವಿಳಾಸ ವಿಚಾರಿಸಿದಾಗ 1) ಗೋಪಾಲ, 2) ರಮೇಶ್,3) ಅಭಿಲಾಷ, 4) ವಿಕ್ರಮ್, 5)ರತ್ನಾಕರ ,6) ಮೊಹಮ್ಮದ್‌ ಹುಸೇನ್‌ ಎಂಬುದಾಗಿ ತಿಳಿಸಿರುತ್ತಾರೆ.

ದಾಳಿಯ ಸಮಯದಲ್ಲಿ ವಶಪಡಿಸಿಕೊಂಡ ಒಟ್ಟು ನಗದು ರೂಪಾಯಿ 2,38,000/-, ಆರೋಪಿತರ ಮೊಬೈಲ್‌ ಫೋನ್-5, ಇಸ್ಪೀಟು ಎಲೆಗಳು, ಫೈಬರ್‌ ಟೇಬಲ್‌ಗಳು, ಪ್ಲಾಸ್ಟಿಕ್‌ ಕುರ್ಚಿಗಳು ಇವುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ .

ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ  ಕಲಂ: 79, 80 KP ACT ರಂತೆ ಪ್ರಕರಣ ದಾಖಲಾಗಿದೆ.

error: No Copying!