Spread the love

ದಿನಾಂಕ:31-07-2025(ಹಾಯ್ ಉಡುಪಿ ನ್ಯೂಸ್) ಉಡುಪಿ :ನಗರಸಭೆಯ ಅಧಿವೇಶನದಲ್ಲಿ ಉಡುಪಿಯ ಶಾಸಕರು ಮತ್ತು ನಗರಸಭೆ ಅಧ್ಯಕ್ಷರು ಹಾಗೂ 31 ಬಿಜೆಪಿಯ ನಗರಸಭಾ ಸದಸ್ಯರನ್ನು ದಿಟ್ಟವಾಗಿ ಎದುರಿಸಿ ಕಾಂಗ್ರೆಸ್ ಪಕ್ಷದ ಶಕ್ತಿ ಏನೆಂಬುದನ್ನು ತೋರಿಸಿಕೊಟ್ಟದ್ದೇವೆ ಎಂದು ಉಡುಪಿ ನಗರಸಭಾ ಸದಸ್ಯ ಸುರೇಶ್ ಶೆಟ್ಟಿ ಬನ್ನಂಜೆ ಹೇಳಿದ್ದಾರೆ.

ನಿನ್ನೆ ನಡೆದ ಉಡುಪಿ ನಗರಸಭಾ ಅಧಿವೇಶನದಲ್ಲಿ ಬನ್ನಂಜೆ ರಾಷ್ಟ್ರೀಯ ಹೆದ್ದಾರಿಯ ಜಯಲಕ್ಷ್ಮಿ ಬಟ್ಟೆಯ ಮಳಿಗೆಗಾಗಿ ಡಿವೈಡರನ್ನು ಅಗಲಗೊಳಿಸಿದ್ದಕ್ಕೆ ಉಡುಪಿ ನಗರಸಭಾ ವ್ಯಾಪ್ತಿಯ ಶಾಸಕರಾಗಲಿ ಯಾವುದೇ ನಗರಸಭಾ ಸದಸ್ಯರಾಗಲಿ ಈ ಬಗ್ಗೆ ಬಾಯಿ ಮುಚ್ಚಿ ಕುಳಿತು ಕೊಂಡಿರುವಾಗ ಅದನ್ನು ಪ್ರತಿಭಟಿಸಿ ಅದರ ವಿರುದ್ಧವಾಗಿ ಹೇಳಿಕೆಯನ್ನು ನೀಡಿದ ಉಡುಪಿ ನಗರಸಭೆಯ ನಾಮ ನಿರ್ದೇಶಿತ ಸದಸ್ಯರು ಮತ್ತು ಉಡುಪಿ ಬ್ಲಾಕ್ ಕಾಂಗ್ರೆಸ್ ರಾಜೀವ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಇದರ ಅಧ್ಯಕ್ಷರಾದ ಶ್ರೀ ಸುರೇಶ್ ಶೆಟ್ಟಿ ಬನ್ನಂಜೆ ಅವರ ಹೇಳಿಕೆಯನ್ನು ವಿರೋಧಿಸಿ ಕ್ಷಮೆ ಯಾಚಿಸಬೇಕೆಂದು ಒತ್ತಾಯಿಸಿ ಪ್ರತಿಭಟಿಸಿದ ಎಲ್ಲರಿಗೂ ಎದುರಿಸಿ ಕ್ಷಮೆ ಯಾಚಿಸಲು ಸಾಧ್ಯವೇ ಇಲ್ಲ ಎಂಬ ದಿಟ್ಟ ನಿರ್ಧಾರವನ್ನು ಪಡೆದು ಅದಕ್ಕೆ ಬೆಂಬಲವಾಗಿ ನಿಂತ ವಿರೋಧ ಪಕ್ಷದ ನಾಯಕರಾದ ಶ್ರೀ ರಮೇಶ್ ಕಾಂಚನ್ ಶ್ರೀಮತಿ ಅಮೃತ ಕೃಷ್ಣಮೂರ್ತಿ ಮತ್ತು ಎಲ್ಲ ನಾಲ್ಕು ಜನ ನಾಮ ನಿರ್ದೇಶಿತ ಸದಸ್ಯರುಗಳಾದ ಶ್ರೀ ಸದಾನಂದ ಮಣಿಪಾಲ್ ಶ್ರೀ ಯಾದವ್ ಅಮೀನ್ ಮಲ್ಪೆ ಶ್ರೀ ಮಹಮ್ಮದ ಬೀಡಿನಗುಡ್ಡೆ ಶ್ರೀ ಪ್ರಣಂ ಕುಮಾರ್ ಕಸ್ತೂರ್ಬಾ ನಗರ ಇವರೆಲ್ಲ ಜೊತೆಗೂಡಿ ಬಿಜೆಪಿಯ ಸದಸ್ಯರ ವಿರುದ್ಧ ಅವರ ಪ್ರತಿಭಟನೆಗೆ ತಕ್ಕ ವಿರುದ್ಧ ಪ್ರತಿಭಟನೆಯನ್ನು ಮಾಡಿ ಸುರೇಶ್ ಶೆಟ್ಟಿ ಬನ್ನಂಜೆ ಅವರನ್ನು ಬೆಂಬಲಿಸಿ ನಗರಸಭಾ ಅಧಿವೇಶನದಿಂದ ಹೊರ ನಡೆದು ನಂತರ ನಗರಸಭಾ ಮಾಜಿ ಅಧ್ಯಕ್ಷರ ಉಪಸ್ಥಿತಿಯಲ್ಲಿ ರಾಜಿ ಪಂಚಾಯಿತಿಗೆ ನಡೆದು ಪುನರಪಿ ಎಲ್ಲರೂ ನಗರಸಭೆ ಅಧಿವೇಶನದಲ್ಲಿ ಭಾಗವಹಿಸಿರುತ್ತಾರೆ ಇದು ಕಾಂಗ್ರೆಸ್ ಪಕ್ಷದ ಶಕ್ತಿ ಎಂದೂ ಇದರಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರಮೇಶ್ ಕಾಂಚನ್ ರವರ ಕಾಂಗ್ರೆಸ್ ಪಕ್ಷದ ಸದಸ್ಯರ ಬಗ್ಗೆ ಕಾಳಜಿಯು ನಿಜವಾಗಿಯೂ ಮೆಚ್ಚ ತಕ್ಕದ್ದು ಇದು ಬಿಜೆಪಿ ಸದಸ್ಯರ ಹತಾಶೆ ಎಂದೇ ಹೇಳಬಹುದು ಎಂದು ಸುರೇಶ್ ಶೆಟ್ಟಿ ಬನ್ನಂಜೆ ಹೇಳಿದ್ದಾರೆ .

error: No Copying!