Spread the love

ಬ್ರಹ್ಮಾವರ: ದಿನಾಂಕ:28-07-2025(ಹಾಯ್ ಉಡುಪಿ ನ್ಯೂಸ್) ಸುಮಾರು 2 ವರ್ಷಗಳ ಕೆಳಗೆ ಅವೈಜ್ಞಾನಿಕವಾಗಿ ಕಾಂಕ್ರೀಟ್‌ ರಸ್ತೆ ಮಾಡಿದ್ದರಿಂದ ಮಳೆಗಾಲದಲ್ಲಿ ಮೇಲ್ಭಾಗದ ಚರಂಡಿ ಹಾಗೂ ರಸ್ತೆ ನೀರು ಚೇರ್ಕಾಡಿ ಗ್ರಾಮದ ನಿವಾಸಿ  ಶ್ರೀಮತಿ ವನಿತಾ  ಬ್ರಹ್ಮಾವರ ಎಂಬವರ ಹೈನುಗಾರಿಕ ಘಟಕಕ್ಕೆ ನುಗ್ಗಿದ ಪರಿಣಾಮ ಶ್ರೀಮತಿ ವನಿತಾ ರವರಿಗೆ ನಷ್ಟ ಉಂಟಾಗಿದ್ದು, ಈ ಬಗ್ಗೆ ಶ್ರೀಮತಿ ವನಿತಾ ರವರು ಚೇರ್ಕಾಡಿ ಗ್ರಾಮ ಪಂಚಾಯತ್‌ ಪಿ.ಡಿ.ಓ ಸುಭಾಸ್‌ ಇವರಲ್ಲಿ ಅರ್ಜಿ ನೀಡಿರುತ್ತಾರೆ.

ಪಿ.ಡಿ.ಓ ಸುಭಾಸ್ ನು ಶ್ರೀಮತಿ ವನಿತಾರವರ ಅರ್ಜಿಗೆ ಸ್ಪಂದಿಸದೇ ಇದ್ದು, ಈ ಬಾರಿಯ ಮಳೆಗಾಲದಲ್ಲಿ ಕೂಡ ನೀರು ಹೈನುಗಾರಿಕ ಘಟಕಕ್ಕೆ ನುಗ್ಗಿ ಶ್ರೀಮತಿ ವನಿತಾ ರವರಿಗೆ ನಷ್ಟ ಉಂಟಾಗಿದ್ದು, ದಿನಾಂಕ 25/07/2025 ರಂದು ಶ್ರೀಮತಿ ವನಿತಾ ರವರು ಚೇರ್ಕಾಡಿ ಗ್ರಾಮ ಪಂಚಾಯತ್‌ ಕಛೇರಿಗೆ ಹೋಗಿ ಅರ್ಜಿಯ ಬಗ್ಗೆ ವಿಚಾರಿಸಿದಾಗ ಸಿಟ್ಟಿಗೆದ್ದ ಆಪಾದಿತ ವ್ಯಕ್ತಿ “ಶ್ರೀಮತಿ ವನಿತಾ ರವರನ್ನು ಉದ್ದೇಶಿಸಿ ಪದೇ ಪದೇ ಬಂದು ತಲೆ ತಿನ್ನುತ್ತೀಯಲ್ಲ ಹೊರಗೆ ಹೋಗಿ “ ಎಂದು ಬೆದರಿಸಿ, ಅವಾಚ್ಯ ಶಬ್ದದಿಂದ ಜಾತಿ ಬಗ್ಗೆ ನಿಂದಿಸಿರುವುದಾಗಿ ಶ್ರೀಮತಿ ವನಿತಾ ರವರು ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ  ಕಲಂ: 351 (2), 352 BNS ಕಲಂ: 3 (1) (r) (s) The SC ST Act ರಂತೆ ಪ್ರಕರಣ ದಾಖಲಾಗಿದೆ.

error: No Copying!