
ದಿನಾಂಕ:26-07-2025(ಹಾಯ್ ಉಡುಪಿ ನ್ಯೂಸ್)
ಉಡುಪಿ:ಮಾನ್ಯ ಪಿಸಿಜೆ ಮತ್ತು ಜೆ.ಎಂ.ಎಫ್.ಸಿ ಉಡುಪಿ ನ್ಯಾಯಾಲಯದ ಸಿ.ಸಿ.ನಂಬ್ರ:
3527/24, 3509/24, 3508/24, 3497/24, 3504/24, 3503/24, 3501/24, 3500/24, 3498/24, 3497/24
ಹಾಗೂ ಉಡುಪಿ ಸಿ.ಜೆ.ಎಂ. ರವರ ಸಿಸಿ ನಂಬರ್: 1862/24 ರಲ್ಲಿ ಆರೋಪಿಯಾದ ವಿಜಯ್ ಕುಮಾರ್ ಯಾನೆ ಸುರೇಶ್ ಶೆಟ್ಟಿ, ವಾಸ: ಅವಲಹಳ್ಳಿ, ಬೆಂಗಳೂರು ಎಂಬಾತನು ಪ್ರಕರಣದ ಬಳಿಕ (2010 ರಿಂದ) ತಲೆಮಾರೆಸಿ ಕೊಂಡಿದ್ದು, ಬಳಿಕ ಮಾನ್ಯ ನ್ಯಾಯಾಲಯವು (Absconding Chargsheet) ಆತನಿಗೆ ಹಲವಾರು ಬಾರಿ ದಸ್ತಗಿರಿ ವಾರಾಂಟ್ ಹಾಗೂ ಪ್ರೋಕ್ಲಾಮೇಷನ್ ಹೊರಡಿಸಿದ್ದು ಆತನು ವಿಳಾಸ ಬಿಟ್ಟು ತಲೆಮಾರೆಸಿಕೊಂಡಿದ್ದು, ಈತನನ್ನು ದಿ. 22.07.2025 ರಂದು ಬೆಂಗಳೂರಿನ ಕೆ.ಆರ್. ಪುರಂ ನಲ್ಲಿ ಉಡುಪಿ ನಗರ ಠಾಣಾ ಎ.ಎಸ್.ಐ. ಹರೀಶ್ ಹಾಗೂ ಹೆಚ್. ಸಿ. ರಾಘವೇಂದ್ರ ರವರು ಪತ್ತೆ ಹಚ್ಚಿ ದಿನಾಂಕ: 23/07/2025 ರಂದು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ದಿನಾಂಕ 06/08/2025ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿರುತ್ತಾರೆ.
ಈ ಆರೋಪಿತನ ಮೇಲೆ
ಮಲ್ಪೆ, ಶಿರ್ವ, ಕುಂದಾಪುರ ಹಾಗೂ ಬೆಂಗಳೂರಿನ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳಿಗೆ ಸಂಬಂಧಪಟ್ಟು ತಲೆಮಾರೆಸಿಕೊಂಡ ಆರೋಪಿಯಾಗಿರುತ್ತಾನೆ ಎನ್ನಲಾಗಿದೆ.