
ಅರಟಾಳ : ದಿನಾಂಕ:25-07-2025(ಹಾಯ್ ಉಡುಪಿ ನ್ಯೂಸ್) ಮನುಷ್ಯನ ಕಣ್ಣು, ಕೈ, ಭಾವ, ಮನಸ್ಸು ಸ್ವಚ್ಛವಾಗಿರಬೇಕು. ಹಣತೆಯ ಜೊತೆಗೆ ಎಣ್ಣೆ, ಬತ್ತಿ, ಇದ್ದಾಗ ದೀಪ ಹೇಗೆ ಬೆಳಗುತ್ತದೆ, ಹಾಗೆ ಮನುಷ್ಯನ ಮನಸ್ಸು ಬೆಳಗಬೇಕು. ವರ್ಷದ ಹನ್ನೆರಡು ತಿಂಗಳಲ್ಲಿ ಅತಿ ಮುಖ್ಯವಾದದ್ದು ಶ್ರಾವಣ ಮಾಸ. ಶಾವಣ ಮಾಸದಲ್ಲಿ ಪ್ರವಚನ ಕೇಳುವುದರಿಂದ ಪುಣ್ಯವನ್ನು ಸಂಪಾದಿಸಿಕೊಳ್ಳಬಹುದು ಎಂದು ವಿಜಯಪುರದ ಶರಣಶ್ರೀ ಡಾ॥ ಭೀಮಾಶಂಕರ ಶರಣರು ಹೇಳಿದರು.
ಅವರು ಗುರುವಾರ ಗಾಮದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಶ್ರಾವಣ ಮಾಸದ ನಿಮಿತ್ಯ ಒಂದು ತಿಂಗಳ ಕಾಲ “ದಶಾವತಾರ ತೇಜ” ಕುರಿತು ಪ್ರವಚನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಪ್ರವಚನ ದೇವರ ಕುರಿತು ವಿಚಾರಧಾರೆಗಳನ್ನು ತಿಳಿಸುತ್ತವೆ. ಮಹಾತ್ಮರ ಜೀವನದ ದಾರಿಯನ್ನು ತಿಳಿಸುತ್ತವೆ. ಶ್ರಾವಣ ಬಂತು ಅಂದರೆ ಸಾಕು ದೇವಸ್ಥಾನಗಳಲ್ಲಿ ಪ್ರವಚನಗಳು ಪ್ರಾರಂಭವಾಗುತ್ತವೆ. ಶ್ರೀ ಕೃಷ್ಣ ಪರಮಾತ್ಮನ ಹತ್ತು ಅವತಾರಗಳ ಕುರಿತು ಪ್ರವಚನ ನೀಡಲಾಗುವುದು ಇದರ ಲಾಭವನ್ನು ಪಡೆದುಕೊಂಡು ಸನ್ಮಾರ್ಗದಲ್ಲಿ ನಡೆದರೆ ಜೀವನ ಪಾವನವಾಗುತ್ತದೆ. ಬದುಕು ಶರಣರಂತೆ ಶಾಂತಿ, ದೀಪದಂತೆ ಶಾಂತವಾಗಿ, ತಂಗಾಳಿಯಂತೆ ತಂಪಾಗಿದ್ದರೆ ಆ ಮನುಷ್ಯ ದೇವಸ್ವರೂಪ ಎಂದರು.
ಬಾಡಗಿ ಸಂಗಯ್ಯ ಸ್ವಾಮೀಜಿ ಮಾತನಾಡಿ, ಸಂತರ ಮನಸ್ಸು ಹೂವಿನ ಹಾಗೆ, ಯಾರ ಮನಸ್ಸಿಗೂ ನೋವು ಕೊಡುವವರಲ್ಲ, ಶ್ರಾವಣ ಮಾಸವೆಂದರೆ ಒಂದು ಪವಿತ್ರವಾದ ಮಾಸ, ಈ ಮಾಸದಲ್ಲಿ ದೇವರ ಸ್ಮರಣೆ ಮಾಡುವುದು ಜೀವನಕ್ಕೆ ಒಳ್ಳೆಯದು. ಯಾರು ಶಿವನ ಧ್ಯಾನ ಮಾಡುತ್ತಾರೆ ಅವರಂತ ಪುಣ್ಯಶಾಲಿಗಳು ಯಾರು ಇಲ್ಲ. ಭಿಮಾಶಂಕರ ಶರಣರು ದಶಾವತಾರದ ಕುರಿತು ಪ್ರವಚನ ನೀಡುವರು. ನಿಮ್ಮೂರಿನಲ್ಲಿ ವಿಷ್ಣುವಿನ ಹತ್ತು ಅವತಾರದ ಕುರಿತು ಕೇಳಿ ತಿಳಿದುಕೊಳ್ಳಬಹುದು ಎಂದರು.
ಬಾಡಗಿ ಸಂಗಯ್ಯ ಸ್ವಾಮೀಜಿ ಮಾತನಾಡಿ, ಸಂತರ ಮನಸ್ಸು ಹೂವಿನ ಹಾಗೆ, ಯಾರ ಮನಸ್ಸಿಗೂ ನೂವು ಕೊಡುವವರಲ್ಲ. ಶ್ರಾವಣ ಮಾಸವೆಂದರೆ ಒಂದು ಪವಿತ್ರವಾದ ಮಾಸ ಈ ಮಾಸದಲ್ಲಿ ದೇವರ ಸ್ಮರಣೆ ಮಾಡುವುದು ಜೀವನಕ್ಕೆ ಒಳ್ಳೆಯದು. ಯಾರು ಶಿವನ ಧ್ಯಾನ ಮಾಡುತ್ತಾರೆ ಅವರಂತ ಪುಣ್ಯಶಾಲಿಗಳು ಯಾರು ಇಲ್ಲ. ಭಿಮಾಶಂಕರ ಶರಣರು ದಶಾವತಾರದ ಕುರಿತು ಪ್ರವಚನ ನೀಡುವರು. ನಿಮ್ಮೂರಿನಲ್ಲಿ ವಿಷ್ಣುವಿನ ಹತ್ತು ಅವತಾರದ ಕುರಿತು ಕೇಳಿ ತಿಳಿದುಕೊಳ್ಳಬಹುದು ಎಂದರು.
ಶರಣಯ್ಯ ಸ್ವಾಮೀಜಿ ಮಾತನಾಡಿದರು. ದುಂಡನಗೌಡ ಪಾಟೀಲ, ಗ್ರಾಪಂ ಮಾಜಿ ಸದಸ್ಯ ರಾಮಪ್ಪ ಭಂಡಾರಿ, ಗೋಪಾಲ ಬಡಿಗೇರ, ಗಣಪತಿ ಭಂಡಾರಿ, ಸುಭಾಸ ಜಂಬಗಿ, ಬಸವರಾಜ ಭಂಡಾರಿ, ಕಲ್ಲಪ್ಪಗೌಡ ಪಾಟೀಲ, ವಾಸನಗೌಡ ಜಂಬಗಿ, ದಸರತ ಸಿಂಧೂರ, ಶಂಕರ ಮಾಳಿ, ಪ್ರಶಾಂತ ಖ್ಯಾಡಿ, ಭೀಮು ಭಂಡಾರಿ ಇದ್ದರು. ಕಾರ್ಯಕ್ರಮವನ್ನು ಚನ್ನಬಸು ಬಿರಾದಾರ ನಿರೂಪಿಸಿ, ಸದಾನಂದ ಮಾಡಗ್ಯಾಳ ಸ್ವಾಗತಿಸಿ ವಂದಿಸಿದರು.