
ಉಡುಪಿ: ದಿನಾಂಕ:25-07-2025 (ಹಾಯ್ ಉಡುಪಿ ನ್ಯೂಸ್) ಉಡುಪಿಯ ವ್ಯಕ್ತಿ ಯೋರ್ವರು ಬೆಂಗಳೂರಿನಲ್ಲಿ ನಡೆಸುತ್ತಿದ್ದ ಫುಡ್ ಟೆಕ್ ಪ್ರೈವೇಟ್ ಲಿಮಿಟೆಡ್ ಕಂಪೆನಿಯೊಂದು ಮಹಾರಾಷ್ಟ್ರ ದ ವ್ಯಾಪಾರಿಯೋರ್ವರಿಗೆ ಒಂದು ಕೋಟಿ ಹದಿಮೂರು ಲಕ್ಷ ರೂಪಾಯಿ ವಂಚನೆ ನಡೆಸಿದ್ದಾರೆಂದು ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಧನಶ್ರೀ ಮನೋಹರ್ ಖಾಲೇ ಎಂಬವರು 656 ಪುಣೆ ಸಿಟಿ, ಮಹಾರಾಷ್ಟ್ರ ನಿವಾಸಿ ಯಾಗಿದ್ದು ಅವರು Winwin Exim India ಎಂಬ ಎಕ್ಸ್‌ಪೋರ್ಟ್ ಇಮ್‌ಪೋರ್ಟ್ ಕಂಪೆನಿಯನ್ನು ಹೊಂದಿದ್ದು. 2022 ರಲ್ಲಿ ಅವರ ಸ್ನೇಹಿತರೊಬ್ಬರ ಮೂಲಕ ಆಪಾದಿತರಾದ 1.ಧನ್‌ರಾಜ್ ಹಿರಿಯಣ್ಣ ಕಿದಿಯೂರು ಡೈರೆಕ್ಟರ್ ಆಫ್ PWIP foodtech Private limited company̤, 2. ಅಭಿಷೇಕ್ ರೆಶ್ಮಿ Ex employ of PWIP company̤, 3. ಕಾರ್ತಿಕ್ ಎಮ್. Ex employ of PWIP company̤ ಇವರುಗಳು ನಡೆಸುತ್ತಿರುವ PWIP foodtech Private limited ಎಂಬ ಕಂಪೆನಿಯ ಬಗ್ಗೆ ತಿಳಿದುಕೊಂಡಿದ್ದರು ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಆಪಾದಿತರು ಇಂಡೆಂಟಿಂಗ್ ಏಜೆಂಟ್‌ಗಳಾಗಿ ರೈಸ್ ಎಕ್ಸ್‌ಪೋರ್ಟ್ ವ್ಯವಹಾರ ಮಾಡುತ್ತಿರುವ ಬಗ್ಗೆ ತಿಳಿದುಕೊಂಡ ಧನಶ್ರೀ ಮನೋಹರ ಖಾಲೇ ಅವರು ಕರ್ನಾಟಕದ ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ ನಲ್ಲಿರುವ ಆಪಾದಿತರ ಆಫೀಸ್‌ಗೆ ದಿನಾಂಕ 12/12/2022 ರಂದು ಭೇಟಿ ನೀಡಿ PWIP ಕಂಪೆನಿ ಜೊತೆ ಒಪ್ಪಂದ ಮಾಡಿಕೊಂಡು, ವ್ಯವಹಾರ ಮಾಡುತ್ತಿದ್ದರು.
2023 ರ ಜೂನ್ ತಿಂಗಳಲ್ಲಿ ಆರೋಪಿಗಳಿಗೆ ಧನಶ್ರೀ ಮನೋಹರ ಖಾಲೇ ರವರು 1.13 ಕೋಟಿ ಹಣವನ್ನು ಮುಂಗಡವಾಗಿ ಪಾವತಿಸಿರುತ್ತಾರೆ. 2023 ಜುಲೈ ತಿಂಗಳಲ್ಲಿ ಭಾರತ ಸರಕಾರ ಅಕ್ಕಿ ರಫ್ತು ನಿಷೇಧವನ್ನು ಘೋಷಿಸಿದ್ದು, ಆ ಬಳಿಕ ಆಪಾದಿತರ PWIP ಕಂಪೆನಿ ಈ ವರೆಗೆ ಧನಶ್ರೀ ಮನೋಹರ ಖಾಲೇ ರವರು ಪಾವತಿಸಿದ ಮುಂಗಡ ಹಣವನ್ನು ಹಿಂದಿರುಗಿಸದೇ ಅವರಿಗೆ ಅಕ್ಕಿಯನ್ನೂ ರಫ್ತು ಮಾಡದೇ ಧನಶ್ರೀ ಮನೋಹರ ಖಾಲೇ ರವರಿಗೆ ರೂಪಾಯಿ 1,13,00,000/- ರೂಪಾಯಿ ವಂಚಿಸಿ ನಂಬಿಕೆ ದ್ರೋಹ ಎಸಗಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಬಗ್ಗೆ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಕಲಂ: 406, 420 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.