
ಬ್ರಹ್ಮಾವರ: ದಿನಾಂಕ:23-07-2025(ಹಾಯ್ ಉಡುಪಿ ನ್ಯೂಸ್) ಬ್ರಹ್ಮಾವರ ತಾಲೂಕು ಹೋರಾಟ ಸಮಿತಿಯ ಸ್ಥಾಪಕಾಧ್ಯಕ್ಷರಾದ ಸತೀಶ್ ಪೂಜಾರಿ ಅವರು ಅನಾರೋಗ್ಯ ದಿಂದ ಇಂದು ಸಂಜೆ ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಸತೀಶ್ ಪೂಜಾರಿ ಅವರು ಬ್ರಹ್ಮಾವರ ತಾಲೂಕು ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಹಾಗೂ ಸಮಾಜ ಸೇವಕರಾಗಿ ದ್ದು ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಅವರ ನಿಧನದಿಂದಾಗಿ ಬ್ರಹ್ಮಾವರ ತಾಲೂಕು ಓರ್ವ ನಿಷ್ಟಾವಂತ ಸಮಾಜಸೇವಕ ನನ್ನು ಕಳೆದು ಕೊಂಡಂತೆ ಆಗಿದೆ.