
ಉಡುಪಿ: ದಿನಾಂಕ:18-07-2025(ಹಾಯ್ ಉಡುಪಿ ನ್ಯೂಸ್) ಅಪರಿಚಿತರು ಟೆಲಿಗ್ರಾಂ ಆ್ಯಪ್ ಮೂಲಕ ಲಿಂಕ್ ಕಳುಹಿಸಿ ಹೂಡಿಕೆ ಮಾಡಿದರೆ ಅಧಿಕ ಲಾಭದ ಆಮಿಷ ತೋರಿಸಿ 12 ಲಕ್ಷ ರೂಪಾಯಿ ವಂಚನೆ ನಡೆಸಿದ್ದಾರೆಂದು ಮಹಿಳೆಯೋರ್ವರು ಪೊಲೀಸರಿಗೆ ದೂರು ನೀಡಿದ್ದಾರೆ.
ಸುಹಾಸಿನಿ ಎಂಬವರ ನಂಬ್ರಕ್ಕೆ ಯಾರೋ ಅಪರಿಚಿತರು ವಾಟ್ಸಪ್ ಮೂಲಕ ಮೆಸೇಜ್ ಮಾಡಿದ್ದು, ಸುಹಾಸಿನಿ ರವರು ಅವರಿಂದ ಕೆಲಸ ಹುಡುಕುವ ಬಗ್ಗೆ ಮಾಹಿತಿ ಪಡೆದಿದ್ದು ನಂತರದಲ್ಲಿ G432 ಗೇಟ್ ಗ್ರೂಪ್ ಎಂಬ ಟೆಲಿಗ್ರಾಂ ಗ್ರೂಪ್ ಗೆ ಸೇರುವಂತೆ ಲಿಂಕ್ ಕಳುಹಿಸಿಕೊಟ್ಟಿದ್ದರು ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಅದನ್ನು ನಂಬಿದ ಸುಹಾಸಿನಿ ರವರು ಒಟ್ಟು 11,61,256/- ರೂಪಾಯಿ ಹೂಡಿಕೆ ಮಾಡಿದ್ದು, ಸುಹಾಸಿನಿರವರು ಹೂಡಿಕೆ ಮಾಡಿದ ಹಣವನ್ನಾಗಲಿ ಲಾಭಾಂಶವನ್ನಾಗಲಿ ನೀಡಿರುವುದಿಲ್ಲ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಕಲಂ: 66 (C), 66(D) IT Act ಮತ್ತು ಕಲಂ: 318(4) BNS ರಂತೆ ಪ್ರಕರಣ ದಾಖಲಾಗಿದೆ.