
ಉಡುಪಿ: ದಿನಾಂಕ:16-07-2025(ಹಾಯ್ ಉಡುಪಿ ನ್ಯೂಸ್) ಎನ್.ಸಿ.ಯೂತ್ ಸ್ಪೋರ್ಟ್ಸ್ & ಕಲ್ಚರಲ್ ಕ್ಲಬ್ (ರಿ) ಬಂಕೇರಕಟ್ಟ, ಅಂಬಲಪಾಡಿ. ಇದರ ಆಶ್ರಯದಲ್ಲಿ ಸ್ಥಳೀಯ ಸಂಘ ಸಂಸ್ಥೆಗಳ ಜಂಟಿ ಸಹಯೋಗದಲ್ಲಿ ಜುಲೈ 27 ರವಿವಾರದಂದು “ಆಟಿಡೊಂಜಿ ಕೂಟ” ಹಾಗೂ “ಕೆಸರ್ಡೊಂಜಿ ದಿನ ಎನ್.ಸಿ. ಯೂತ್ ಸ್ಪೋರ್ಟ್ಸ್ & ಕಲ್ಚರಲ್ ಕ್ಲಬ್ (ರಿ) ಬಂಕೇರಕಟ್ಟ ಅಂಬಲಪಾಡಿ ಇದರ ಆಶ್ರಯದಲ್ಲಿ “ಶ್ರೀ ನಾಗರಾಜ ಸೇವಾ ಸಮಿತಿ” ಬಂಕೇರಕಟ್ಟ ಅಂಬಲಪಾಡಿ “ಶ್ರೀ ನಾಗರಾಜ ಮಹಿಳಾ ಸೇವಾ ಸಮಿತಿ” ಬಂಕೇರಕಟ್ಟ ಅಂಬಲಪಾಡಿ “ಅಕ್ಷಯ ಮಹಿಳಾ ಮಂಡಳಿ” ಬಂಕೇರಕಟ್ಟ ಅಂಬಲಪಾಡಿ
“ಅಂಗನವಾಡಿ ಕೇಂದ್ರ ಬಂಕೇರಕಟ್ಟ” ಶ್ರೀ ಮಹಾಕಾಳಿ ಕ್ರಿಕೆಟರ್ಸ್ ಆಚಾರಿಗುಂಡಿ ಅಂಬಲಪಾಡಿ ಜಂಟಿ ಸಹಯೋಗದಲ್ಲಿ ” ಆಟಿಡೊಂಜಿ ಕೂಟ” ಹಾಗೂ ‘ಕೆಸರ್ಡೊಂಜಿ ದಿನ”, “ಆಟಿ ತಿಂಗಳ ಆಹಾರ ಪಧ್ಧತಿಯ ಪ್ರಾತ್ಯಕ್ಷಿಕೆ” ಮತ್ತು “ಕೆಸರು ಗದ್ದೆಯಲ್ಲಿ ಕ್ರೀಡಾ ಕೂಟ” ಇದೇ ಬರುವ ಜುಲೈ 27 ರವಿವಾರ ಬೆಳಿಗ್ಗೆ ಗಂಟೆ 10.30 ರಿಂದ ಬಂಕೇರಕಟ್ಟ ಅಂಬಲಪಾಡಿ ಅಂಗನವಾಡಿ ಕೇಂದ್ರದ ಬಳಿ ನಡೆಯಲಿದೆ.
ಕಾರ್ಯಕ್ರಮಗಳು: ಬೆಳಿಗ್ಗೆ 10.30ಘಂಟೆಗೆ ಉಧ್ಘಾಟನೆ ಮಧ್ಯಾಹ್ನ 12.30ಕ್ಕೆ ಸಾಮೂಹಿಕ ಸಹ ಭೋಜನ” ಮಧ್ಯಾಹ್ನ ಗಂಟೆ 2.00ರಿಂದ “ಕೆಸರು ಗದ್ದೆ ಕ್ರೀಡಾ ಕೂಟ”*
ಸಂಜೆ ಗಂಟೆ 5.30 “ಸಮಾರೋಪ” ನಡೆಯಲಿದ್ದು ಸಂಘಟಕರು ಸರ್ವರಿಗೂ ಆದರದ ಸ್ವಾಗತ ಕೊರಿದ್ದಾರೆ.