Spread the love

ಉಡುಪಿ: ದಿನಾಂಕ :16-07-2025(ಹಾಯ್ ಉಡುಪಿ ನ್ಯೂಸ್) ಹಾವಂಜೆ ಗ್ರಾಮದ ನಿವಾಸಿ ನಂದಾ ಎಂಬವರಿಗೆ ಉಡುಪಿ ಯ ಮೂವರು ವ್ಯಕ್ತಿಗಳಿಂದ ಜೀವ ಭಯವಿದೆ ಎಂದು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಕೊಳಲಗಿರಿ,ಹಾವಂಜೆ ಗ್ರಾಮದ ನಿವಾಸಿ ನಂದಾ (32) ಎಂಬವರು 1 ನೇ ಆರೋಪಿತ ವೈ ಟಿ ರಾಘವೇಂದ್ರ ನ ಉಡುಪಿಯ ಮೆಡಿಕೇರ್‌ ಬಿಲ್ಡಿಂಗ್‌ನಲ್ಲಿರುವ ಆಫೀಸಿನಲ್ಲಿ ಕರ್ತವ್ಯ ನಿರ್ವಹಿಸುವ ಸಮಯದಲ್ಲಿ 2017 ರಲ್ಲಿ ಆಗಾಗ ನಿಂದನೆ ಮಾಡುತ್ತಿದ್ದರು ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಅಲ್ಲದೇ ನಂದಾರವರಿಗೆ ಕರೆ ಮಾಡಿ ಮೆಡಿಕೇರ್‌ ಬಿಲ್ಡಿಂಗ್‌ನಲ್ಲಿರುವ ಆಫೀಸಿಗೆ ಬರುವಂತೆ ಹೇಳಿ ಸಂಜಯ್‌ ವಿರುದ್ಧ ದೂರು ಕೊಟ್ಟರೆ ಸರಿ ಇರುವುದಿಲ್ಲ, ನಿನ್ನ ವಿರುದ್ಧ ಉಡುಪಿಯ ಎಲ್ಲಾ ಪೊಲೀಸ್‌ ಠಾಣೆಗಳಲ್ಲಿ ಕೇಸ್‌ ಹಾಕುತ್ತೇನೆ ಎಂದು ಗದರಿಸಿರುತ್ತಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. 1 ನೇ ಆರೋಪಿತ ವೈ.ಟಿ ರಾಘವೇಂದ್ರ ನು 2 ನೇ ಆರೋಪಿತ ಮನೋಜ್ ಎಂಬವನಿಂದ ಮಣಿಪಾಲ ಪೊಲೀಸ್‌ ಠಾಣೆಯಲ್ಲಿ  ನಂದಾರವರ ವಿರುದ್ಧ ಸುಳ್ಳು ದೂರು ನೀಡಿ ವಿಚಾರಣೆಗೆಂದು ಠಾಣೆಗೆ ಕರೆಯಿಸಿ ತೊಂದರೆ ಮಾಡಿದ್ದಾನೆ ಎಂದು ದೂರಿದ್ದಾರೆ.

ಅಲ್ಲದೇ 1 ನೇ ಆರೋಪಿತ ವೈ ಟಿ ರಾಘವೇಂದ್ರ ನು 3 ನೇ ಆರೋಪಿತ ಸಂಜಯನಿಗೆ ಸಹಾಯ ಮಾಡಿ ತಲೆಮರೆಸಿಕೊಳ್ಳುವಂತೆ ಮಾಡಿದ್ದೂ ಅಲ್ಲದೇ 3 ನೇ ಆರೋಪಿತ ಸಂಜಯನ ವಿರುದ್ಧ ಕಂಪ್ಲೇಂಟ್‌ ಕೊಡದಂತೆ ನಂದಾರವರಿಗೆ ಒತ್ತಡ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ನಂದಾರವರಿಗೆ ಮೂರು ಜನ ಆರೋಪಿತರುಗಳಿಂದ ಜೀವ ಭಯ ಇರುವುದಾಗಿ ಪೊಲೀಸರಿಗೆ ದೂರು ನೀಡಿದ್ದಾರೆ.

ನಂದಾ ರವರು ನೀಡಿದ ದೂರಿನಂತೆ ಮಹಿಳಾ ಪೊಲೀಸ್‌ ಠಾಣೆಯಲ್ಲಿ  ಕಲಂ: 352, 351(2), ಜೊತೆಗೆ 3(5) ಬಿ ಎನ್ ಎಸ್ ಕಲಂ:3(1)( r), 3(1)(s), 3(2) (v-a) SC&ST Act ರಂತೆ ಪ್ರಕರಣ ದಾಖಲಾಗಿದೆ.

error: No Copying!