Spread the love

ದಿನಾಂಕ:05-07-2025(ಹಾಯ್ ಉಡುಪಿ ನ್ಯೂಸ್)

ಕೋಟ: ಇಲ್ಲಿನ ಕೋಟದ ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಮಣೂರು ಫ್ರೆಂಡ್ಸ್ , ಹಂದಟ್ಟು ಮಹಿಳಾ ಬಳಗ ಕೋಟ, ಗೀತಾನಂದ ಫೌಂಡೇಶನ್ ಮಣೂರು, ಅನ್ನಪೂರ್ಣ ನರ್ಸರಿ ಪೇತ್ರಿ, ಸಮುದ್ಯತಾ ಗ್ರೂಪ್ಸ್ ಕೋಟ, ಸುವರ್ಣ ಎಂಟರ್ಪ್ರೈಸಸ್  ಬ್ರಹ್ಮಾವರ ಇವರ ಸಹಭಾಗಿತ್ವದಡಿ 262ನೇ ಭಾನುವಾರ ಪರಿಸರಸ್ನೇಹಿ ಅಭಿಯಾನದ ಪ್ರಯುಕ್ತ ವಿಶಿಷ್ಟ ರೀತಿಯ ಮಹಿಳಾ ಹಸಿರು ಜೀವ ಅಭಿಯಾನ ಭಾನುವಾರ (ಜು.6ರಂದು )ಮಣೂರು ಪಡುಕರೆ ವ್ಯಾಪ್ತಿಯಲ್ಲಿ ಜರಗಲಿದೆ.

ವಿಶೇಷವಾಗಿ ಮಹಿಳಾ ಹಸಿರು ಜೀವ ಕಾರ್ಯಕ್ರಮದಲ್ಲಿ ಪಂಚವರ್ಣ ಮಹಿಳಾಮಂಡಲದ ಪದಾಧಿಕಾರಿಗಳು ಸದಸ್ಯರು ಈ ಗಿಡ ನೆಡುವ ನೀಡುವ ಕಾಯಕದಲ್ಲಿ  ಪಾಲ್ಗೊಂಡು ಸ್ಥಳೀಯ ಮನೆಗಳಿಗೆ ತೆರಳಿ ಈ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: No Copying!