Spread the love

ಕೋಟ: ದಿನಾಂಕ 05.07.2025 (ಹಾಯ್ ಉಡುಪಿ ನ್ಯೂಸ್) ಪಾರಂಪಳ್ಳಿ ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜೂಜಾಟ ನಡೆಸುತ್ತಿದ್ದ ವ್ಯಕ್ತಿ ಯನ್ನು ಕೋಟ ಪೊಲೀಸ್ ಠಾಣೆಯ ಪಿಎಸ್ಐಯವರಾದ  ಸುಧಾ ಪ್ರಭು ಅವರು ಬಂಧಿಸಿದ್ದಾರೆ.

ಕೋಟ ಪೊಲೀಸ್ ಠಾಣೆ ಪಿಎಸ್ಐ ಸುಧಾ ಪ್ರಭು ಅವರು ದಿನಾಂಕ :05-07-2025 ರಂದು ರೌಂಡ್ಸ್‌ ಕರ್ತವ್ಯದಲ್ಲಿರುವಾಗ  ಬ್ರಹ್ಮಾವರ ತಾಲೂಕು ಪಾರಂಪಳ್ಳಿ ಗ್ರಾಮದ ಆಟೋ ನಿಲ್ದಾಣದ ಬಳಿ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ಆಡುತ್ತಿರುವುದಾಗಿ ಬಂದ ಸಾರ್ವಜನಿಕರ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ತೆರಳಿದ್ದಾರೆ.

  ಸ್ಥಳದಲ್ಲಿ ಸಾರ್ವಜನಿಕರು ಗುಂಪು ಸೇರಿದ್ದು ಓರ್ವ ವ್ಯಕ್ತಿ 1 ರೂಪಾಯಿಗೆ 70 ರೂಪಾಯಿ ಎಂದು ಜೋರಾಗಿ ಕೂಗುತ್ತಿದ್ದು ಸಂಖ್ಯೆಗಳ ಮೇಲೆ ಸಾರ್ವಜನಿಕರು ಹಣವನ್ನು ಪಣವಾಗಿ ಕಟ್ಟು್ತಿದ್ದು ಕೂಡಲೇ ಪೊಲೀಸರು ದಾಳಿ ನಡೆಸಿದಾಗ ಉಳಿದವರು ಓಡಿ ಹೋಗಿದ್ದು  ಪಾಂಡೇಶ್ವರ ಗ್ರಾಮ, ಬ್ರಹ್ಮಾವರದ ನಿವಾಸಿ ದಿನೇಶ (38)  ಎಂಬವನನ್ನು ಪೊಲೀಸರು ಬಂಧಿಸಿ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತನ್ನ ಸ್ವಂತ ಲಾಭಕ್ಕೋಸ್ಕರ ಆಡುತ್ತಿದುದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎನ್ನಲಾಗಿದೆ.

ಆತನ ಪ್ಯಾಂಟ್‌ ಕಿಸೆಯಲ್ಲಿದ್ದ ಜುಗಾರಿ ಆಟಕ್ಕೆ ಬಳಸಿದ ಮಟ್ಕಾ ಚೀಟಿ, ಬಾಲ್‌ ಪೆನ್‌ ಹಾಗೂ ನಗದು  2040/-ರೂಪಾಯಿ ಹಾಗೂ ಅಲ್ಲದೇ ತಾನು ಉಪ್ಪಿನಕೋಟೆಯ ಸತೀಶ ಎಂಬವನು ತಿಳಿಸಿದಂತೆ ಅವನೊಂದಿಗೆ ಮಟ್ಕಾ ಜುಗಾರಿ ಆಟ ಆಡಿಸುತ್ತಿದ್ದು ಇದರಿಂದ ಬಂದ ಹಣವನ್ನು ಸತೀಶ ಎಂಬಾತನಿಗೆ ನೀಡುತ್ತಿದ್ದು ಆತನು ತನಗೆ ಕಮೀಷನ್‌ ನೀಡುತ್ತಿರುವುದಾಗಿ ತಿಳಿಸಿರುತ್ತಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಕೋಟ ಪೊಲೀಸ್‌ ಠಾಣೆಯಲ್ಲಿ  ಕಲಂ:112 BNS & 78(1)(111) KP Act ನಂತೆ ಪ್ರಕರಣ ದಾಖಲಾಗಿದೆ.

error: No Copying!