
ಬೈಂದೂರು: ದಿನಾಂಕ:04-07-2025(ಹಾಯ್ ಉಡುಪಿ ನ್ಯೂಸ್) ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಅಕ್ರಮವಾಗಿ ದಾಸ್ತಾನು ಇರಿಸಿದ್ದ ವ್ಯಕ್ತಿ ಯ ವಿರುದ್ಧ ಬೈಂದೂರು ವಲಯ ಆಹಾರ ನಿರೀಕ್ಷಕರಾದ ವಿನಯ್ ಕುಮಾರ ಅವರು ಪ್ರಕರಣ ದಾಖಲಿಸಿದ್ದಾರೆ.
ಬೈಂದೂರು ವಲಯ ಆಹಾರ ನಿರೀಕ್ಷಕರಾದ ವಿನಯ್ ಕುಮಾರ (49) ಅವರಿಗೆ ಬಿಜೂರು ಗ್ರಾಮದ ಹರಕೇರಿ ಎಂಬಲ್ಲಿ ಆರೋಪಿ ಮಜೀದ್ ಎಂಬವನ ಮನೆಯಲ್ಲಿ ಅಕ್ರಮವಾಗಿ ಉಚಿತ ಅನ್ನ ಭಾಗ್ಯ ಯೋಜನಗೆ ಸಂಬಂಧಿಸಿದ ಅಕ್ಕಿಯನ್ನು ದಾಸ್ತಾನು ಇರಿಸಿರುವ ಬಗ್ಗೆ ಮಾಹಿತಿ ದೊರೆತಿದೆ.
ಮಾಹಿತಿಯ ಮೇರೆಗೆ ದಿನಾಂಕ 02/07/2025 ರಂದು ಬೆಳಿಗ್ಗೆ ದಾಳಿ ನಡೆಸಿ ಆರೋಪಿಯು ಉಚಿತ ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದ ಅಕ್ಕಿಯನ್ನು ಕಾನೂನು ಬಾಹಿರವಾಗಿ ಯಾರಿಂದಲೋ ಖರೀದಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಉದ್ದೇಶದಿಂದ ಆರೋಪಿ ಮಜೀದ್ ತನ್ನ ಮನೆಯಲ್ಲಿ ಅಕ್ರಮವಾಗಿ ದಾಸ್ತಾನು ಇರಿಸಿದ ಒಟ್ಟು 21.10 ಕ್ವಿಂಟಾಲ್ ತೂಕದ ರೂಪಾಯಿ 71,740/- ಮೌಲ್ಯದ 22 ಪಾಲಿಥಿನ ಚೀಲ ಮತ್ತು 28 ಗೋಣಿ ಚೀಲ ಅಕ್ಕಿ ತುಂಬಿರುವ ಚೀಲಗಳನ್ನು ಸ್ವಾಧೀಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಕಲಂ: 3, 6, 7 Essential commodities act ರಂತೆ ಪ್ರಕರಣ ದಾಖಲಾಗಿದೆ.