Spread the love

ಉಡುಪಿ: ದಿನಾಂಕ:04-07-2025 (ಹಾಯ್ ಉಡುಪಿ ನ್ಯೂಸ್)

ಆದರ್ಶ ಆಸ್ಪತ್ರೆ ಉಡುಪಿ ಮತ್ತು ಆದರ್ಶ ಚಾರಿಟೇಬಲ್ ಟ್ರಸ್ಟ್ ನ ಆಶ್ರಯದಲ್ಲಿ ವೈದ್ಯರ ದಿನಾಚರಣೆಯ ಪ್ರಯುಕ್ತ ವೈದ್ಯರಿಗೆ ಸನ್ಮಾನ ಹಾಗೂ ಬೃಹತ್ ಉಚಿತ ವೈದ್ಯಕೀಯ ಶಿಬಿರವನ್ನು ದಿನಾಂಕ 06-07-2025 ನೇ ಭಾನುವಾರ ಬೆಳಿಗ್ಗೆ 9:00 ರಿಂದ ಮಧ್ಯಾಹ್ನ 1. ರವರೆಗೆ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ನಿಸ್ವಾರ್ಥ ,ದಕ್ಷ ಹಾಗೂ ಪ್ರಾಮಾಣಿಕ ಸೇವೆಯನ್ನು ಅನವರತ ಸಲ್ಲಿಸಿರುವ ವೈದ್ಯರುಗಳಾದ ಹಿರಿಯ ವೈದ್ಯಕೀಯ ತಜ್ಞರಾದ ಡಾ| ಎನ್. ಆರ್ ರಾವ್, ಡಾ |ನಾಗರತ್ನ ಬಿ ಶಾಸ್ತ್ರೀ , ಉಡುಪಿ ಜಿಲ್ಲಾ ಸರ್ವೇಕ್ಷಣಾಧಿಕಾರಿ, ಕುಟುಂಬ ಕಲ್ಯಾಣಾಧಿಕಾರಿ ಡಾ | ಶ್ರೀ ರಾಮರಾವ್, ಉಡುಪಿ ತಾಲೂಕು ಆರೋಗ್ಯಾಧಿಕಾರಿ ಡಾ | ವಾಸುದೇವ್ ಉಪಾಧ್ಯಾಯ, ತಾಲೂಕು ಮಲೇರಿಯ ನಿರ್ಮೂಲನ ಅಧಿಕಾರಿ ಡಾ |ಪ್ರಶಾಂತ್ ಭಟ್,ಬೈಲೂರಿನ ಡಾ|ಶಶಿಕಿರಣ್ ಆಚಾರ್ ಹಾಗೂ ಪಡುಬಿದ್ರಿಯ ಡಾ |ಭವಾನಿ ಶಂಕರ್ ಇವರುಗಳು ಸನ್ಮಾನಿಸಲ್ಪಡುವರು. ಈ ಸಭಾ ಕಾರ್ಯಕ್ರಮದ ಉದ್ಘಾಟಕರಾಗಿ ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಶ್ರೀ ಯಶಪಾಲ್ ಸುವರ್ಣ, ಕರ್ನಾಟಕ ಸರ್ಕಾರದಮಾಜಿ ಸಚಿವರಾದ ಶ್ರೀ ವಿನಯ್ ಕುಮಾರ್ ಸೊರಕೆ ,ಅಪರ ಜಿಲ್ಲಾಧಿಕಾರಿ ಶ್ರೀ ಅಭಿದ್ ಗದ್ಯಾಳ್, ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಯಾದ ಶ್ರೀ ಬಸವರಾಜ್ ಹುಬ್ಬಳ್ಳಿ ಜಾಗೂ ಆದರ್ಶ ಆಸ್ಪತ್ರೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶ್ರೀಮತಿ ವಿಮಲ ಚಂದ್ರಶೇಖರ್ ಅವರು ಉಪಸ್ಥಿತರಿರುವರು ಎಂದು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾಗಿರುವ ಡಾ|ಜಿ. ಎಸ್ .ಚಂದ್ರಶೇಖರ್ ಅವರು ತಿಳಿಸಿದ್ದಾರೆ.

ಈ ವೈದ್ಯಕೀಯ ಶಿಬಿರದಲ್ಲಿ ಭಾಗವಹಿಸುವ ಎಲ್ಲಾ ಸಾರ್ವಜನಿಕರಿಗೆ ತಜ್ಞ ವೈದ್ಯರಿಂದ ಉಚಿತ ಆರೋಗ್ಯ ತಪಾಸಣೆ, ರಕ್ತದ ಸಂಪೂರ್ಣ ಪರೀಕ್ಷೆ (CBC ), ರಕ್ತದ ಸಕ್ಕರೆ ಅಂಶ ಹಾಗೂ ಕೊಬ್ಬಿನ ಅಂಶ ,ಲಿವರ್ ಸ್ಕ್ಯಾನಿಂಗ್ ಪರೀಕ್ಷೆಗಳನ್ನು ಉಚಿತವಾಗಿ ಮಾಡಲಾಗುವುದು. ಅಷ್ಟೇ ಅಲ್ಲದೇ ವೈದ್ಯರ ಸಲಹೆಯ ಮೇರೆಗೆ ಅಗತ್ಯವೆಂದು ಕಂಡುಬರುವ ರೋಗಿಗಳಿಗೆ ಹೃದಯದ ಸ್ಕ್ಯಾನಿಂಗ್ (ಇಕೋ ) ಹಾಗೂ ಟಿ.ಎಂ.ಟಿ ಪರೀಕ್ಷೆಗಳನ್ನು ಉಚಿತವಾಗಿ ಮಾಡಲಾಗುವುದು. ಸಾರ್ವಜನಿಕರು ಅಪಾರ ಸಂಖ್ಯೆಯಲ್ಲಿ ಈ ಶಿಬಿರದಲ್ಲಿ ಭಾಗವಹಿಸಿ ಈ ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದು ಆದರ್ಶ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ | ಜಿ.ಎಸ್.ಚಂದ್ರಶೇಖರ್ ಅವರು ತಿಳಿಸಿರುತ್ತಾರೆ

error: No Copying!