
ಕೋಟ: ಇಲ್ಲಿನ ಕೋಟ ಪಡುಕರೆ ಸರಕಾರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ 1998- 99ರ ಸಾಲಿನ ಸ್ನೇಹ ಬಳಗವಾದ ಪುನರ್ ಮಿಲನ ಇದರ ಸಹಭಾಗಿತ್ವದಲ್ಲಿ ಜೂನ್ 28 ರಂದು ಸಾಮಾಜಿಕ ಕಳಕಳಿ ಯೋಜನೆಯಡಿ ವಿವಿಧ ಆಶ್ರಮಗಳಿಗೆ ನೆರವು ಕಾರ್ಯಕ್ರಮ ಹಮ್ಮಿಕೊಂಡಿತು.
ಈ ಹಿನ್ನೆಲೆಯಲ್ಲಿ ಬೆಳಕು ವೃದ್ಧಾಶ್ರಮ ಟ್ರಸ್ಟ್ ಕಾಡಬೆಟ್ಟು ಉಡುಪಿ. ಹಾಗೂ ಸಂತೆಕಟ್ಟೆಯ ಕೃಷ್ಣಾನುಗ್ರಹ ಸಂಸ್ಥೆ ಮತ್ತು ದತ್ತು ಸ್ವೀಕಾರ ಕೇಂದ್ರ, ಮಮತೆಯ ತೊಟ್ಟಿಲು ಮತ್ತು ಹೊಸ ಬದುಕು ಸಾಲಿಗ್ರಾಮ ಆಶ್ರಮಗಳಿಗೆ ಪುನರ್ ಮಿಲನ ಸ್ನೇಹಿತರು ಭೇಟಿ ನೀಡಿ, ಅಗತ್ಯದ ದಿನ ಬಳಕೆಯ ವಸ್ತುಗಳು ಹಾಗೂ 2 ತಿಂಗಳಿಗೆ ಆಗುವಷ್ಟು ದಿನಸಿ ಸಾಮಾನುಗಳನ್ನು ಆಶ್ರಮದ ಮುಖ್ಯಸ್ಥರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಸ್ನೇಹ ಬಳಗವಾದ ಪುನರ್ ಮಿಲನ ತಂಡದ ಸದಸ್ಯರುಗಳು ಉಪಸ್ಥಿತರಿದ್ದರು.