Spread the love

ಬ್ರಹ್ಮಾವರ: ಕುಂಜಾಲಿನ ಜಂಕ್ಷನ್ ನಲ್ಲಿ  ದನದ ರುಂಡ ಮತ್ತು ದೇಹದ ಭಾಗ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿಯನ್ನು ಬಂಧಿಸಿರುವ ಕುರಿತು ಉಡುಪಿ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಇಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಹರಿರಾಂ ಶಂಕರ್ ಅವರು ಮಾಹಿತಿ ನೀಡಿದರು.

IMG 20250630 175107 scaled Crime, Featured Story, Udupi

ಬಂಧಿತರನ್ನು .ರಾಮ(49), ಪ್ರಸಾದ್‌(21), ನವೀನ್‌(35), ಕೇಶವ ನಾಯ್ಕ್‌(50) ಸಂದೇಶ(35), ರಾಜೇಶ್ (28) ಎಂದು ಗುರುತಿಸಲಾಗಿದೆ.

ಎಸ್ಪಿ ಯವರು ನೀಡಿರುವ ಮಾಹಿತಿಯ ಪ್ರಕಾರ, ಆರೋಪಿ ಕೇಶವ ತನ್ನ ಮನೆಯಲ್ಲಿದ್ದ ದನವನ್ನು ರಾಮಣ್ಣನವರಿಗೆ ಮಾಂಸ ಮಾಡಲು ನೀಡಿದ್ದು ಅದರಂತೆ ಆರೋಪಿಗಳು ಮಾಂಸ ಮಾಡಿ ಅದರ ತ್ಯಾಜ್ಯವನ್ನು ಎಸೆಯಲು ಸ್ಕೂಟರ್ ನಲ್ಲಿ ರಾತ್ರಿ ತೆರಳುತ್ತಿದ್ದಾಗ ರಸ್ತೆಗೆ ಬಿದ್ದಿದೆ ಎಂದು ವಿವರಿಸಿದ್ದಾರೆ. ಈಗಾಗಲೇ ಆರು ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಊಹೆಯಾಧಾರಿತ ಪೋಸ್ಟ್ ಗಳನ್ನು ಮಾಡಿ ಕೋಮು ಸೌಹಾರ್ದ ಕೆಡಿಸುವ ಪ್ರಯತ್ನ ಮಾಡಬಾರದೆಂದು ಎಸ್ಪಿ ಎಚ್ಚರಿಸಿದ್ದು ಅಂತಹ ಕೃತ್ಯಗಳನ್ನು ಮಾಡಿದರೆ ಕ್ರಮಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.

error: No Copying!