
- ಮಲ್ಪೆ: ದಿನಾಂಕ:30-06-2025(ಹಾಯ್ ಉಡುಪಿ ನ್ಯೂಸ್) ಮೂಡುತೋನ್ಸೆ ಗ್ರಾಮದ ಮೂಡುಬೆಟ್ಟು ಎಂಬಲ್ಲಿ ನಡೆಯುತ್ತಿದ್ದ ಅಕ್ರಮ ಕೋಳಿ ಅಂಕ ಅಡ್ಡೆಗೆ ಮಲ್ಪೆ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ಅನಿಲ್ ಕುಮಾರ್ ಡಿ ಅವರು ದಾಳಿ ನಡೆಸಿ ಓರ್ವನನ್ನು ಬಂಧಿಸಿದ್ದಾರೆ.
- ಮಲ್ಪೆ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ಅನಿಲ್ ಕುಮಾರ್ ಡಿ ಅವರಿಗೆ ದಿನಾಂಕ 29/06/2025 ರಂದು ಮೂಡುತೋನ್ಸೆ ಗ್ರಾಮದ ಕಲ್ಯಾಣಪುರ ಮೂಡುಬೆಟ್ಟು ಎಂಬಲ್ಲಿ ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣವಾಗಿರಿಸಿ ಕೋಳಿ ಅಂಕ ನಡೆಸುತ್ತಿರುವುದಾಗಿ ಸಾರ್ವಜನಿಕ ಮಾಹಿತಿ ಬಂದ ಮೇರೆಗೆ ಕೂಡಲೇ ಮಾಹಿತಿ ಬಂದ ಸ್ಥಳಕ್ಕೆ ದಾಳಿ ನಡೆಸಿದ್ದಾರೆ.
- ದಾಳಿ ನಡೆಸಿದಾಗ ಕೆಲವರು ಓಡಿ ಹೋಗಿದ್ದು,ಒಬ್ಬ ವ್ಯಕ್ತಿಯನ್ನು ಹಿಡಿದು ವಿಚಾರಣೆ ನಡೆಸಿದಾಗ ಅವನು ತನ್ನ ಹೆಸರು ಸುದೀಪ್ ಎಂದು ತಿಳಿಸಿದ್ದು. ಓಡಿ ಹೋದವರ ಬಗ್ಗೆ ಕೇಳಿದಾಗ 1)ಉದಯ ಕೆಮ್ಮಣ್ಣು, 2) ಮಂಜುನಾಥ ಗರಡಿ ಮಜಲು, 3) ಕಾರ್ತಿಕ್ ಕೊಡವೂರು, 4) ಸುಕೇತ್ ಗರಡಿಮಜಲು, 5) ಸಂದೇಶ ಲಕ್ಷ್ಮೀನಗರ, 6) ಸುಜಿತ್ ಮೂಳೂರು ಎಂದು ತಿಳಿಸಿರುತ್ತಾನೆ ಎನ್ನಲಾಗಿದೆ.
- ಸ್ಥಳದಲ್ಲಿ ಕೋಳಿಯ ಕಾಲಿಗೆ ಕಟ್ಟಿದ ಬಾಳು (ಕತ್ತಿ), ನಗದು 860/- ರೂಪಾಯಿ, 1 ಜೀವಂತ ಹುಂಜ ಕೋಳಿ ಇವುಗಳನ್ನು ಮತ್ತು 4 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
- ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಕಲಂ:112 BNS , ಕಲಂ:87, 93 ಕೆಪಿ ಆಕ್ಟ್ &11(1)(A) ಪ್ರಾಣಿ ಹಿಂಸೆ ಕಾಯಿದೆ ಯಂತೆ ಪ್ರಕರಣ ದಾಖಲಾಗಿದೆ.