
ಕೋಟ: ದಿನಾಂಕ 28..06.2025 (ಹಾಯ್ ಉಡುಪಿ ನ್ಯೂಸ್) ತೆಕ್ಕಟ್ಟೆ ಫಿಶ್ ಮಾರ್ಕೆಟ್ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ನಡೆಸುತ್ತಿದ್ದ ವ್ಯಕ್ತಿ ಯನ್ನು ಕೋಟ ಪೊಲೀಸ್ ಠಾಣೆಯ ಪಿಎಸ್ಐ ಯವರಾದ ಶ್ರೀಮತಿ ಶುಧಾಪ್ರಭು ಅವರು ಬಂಧಿಸಿದ್ದಾರೆ.
ದಿನಾಂಕ:27-06-2025 ರಂದು ಕೋಟ ಪೊಲೀಸ್ ಠಾಣೆಯ ಪಿಎಸ್ಐ ಶ್ರೀಮತಿ ಶುಧಾ ಪ್ರಭು ಅವರು ರೌಂಡ್ಸ್ ಕರ್ತವ್ಯದಲ್ಲಿರುವಾಗ ತೆಕ್ಕಟ್ಟೆ ಗ್ರಾಮದ ತೆಕ್ಕಟ್ಟೆ ಫಿಶ್ ಮಾರ್ಕೇಟ್ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ಆಡುತ್ತಿರುವುದಾಗಿ ಸಾರ್ವಜನಿಕ ರಿಂದ ಬಂದ ಖಚಿತ ಮಾಹಿತಿ ಮೇರೆಗೆ ಕೂಡಲೇ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ತೆರಳಿ ನೋಡಿದಾಗ ಸಾರ್ವಜನಿಕರು ಗುಂಪು ಸೇರಿದ್ದು ಓರ್ವ ವ್ಯಕ್ತಿ 1 ರೂಪಾಯಿಗೆ 70 ರೂಪಾಯಿ ಎಂದು ಜೋರಾಗಿ ಕೂಗುತ್ತಿದ್ದು ಸಂಖ್ಯೆಗಳ ಮೇಲೆ ಸಾರ್ವಜನಿಕರು ಹಣವನ್ನು ಪಣವಾಗಿ ಕಟ್ಟುತ್ತಿದ್ದಿರುವುದು ಕಂಡು ಬಂದಿರುತ್ತದೆ ಎನ್ನಲಾಗಿದೆ.
ಅವರುಗಳು ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ಆಟದಲ್ಲಿ ನಿರತರಾಗಿದ್ದು ಪೊಲೀಸರು ದಾಳಿ ನಡೆಸಿದಾಗ ಉಳಿದವರು ಓಡಿ ಹೋಗಿದ್ದು ಮಟ್ಕಾ ಜುಗಾರಿ ನಡೆಸುತ್ತಿದ್ದ ಜಯರಾಮ ತೆಕ್ಕಟ್ಟೆ ಎಂಬಾತನನ್ನು ಬಂಧಿಸಿ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತನ್ನ ಸ್ವಂತ ಲಾಭಕ್ಕೋಸ್ಕರ ಮಟ್ಕಾ ಜುಗಾರಿ ಆಡುತ್ತಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎನ್ನಲಾಗಿದೆ.
ಆತನ ವಶದಲ್ಲಿದ್ದ ಜುಗಾರಿ ಆಟಕ್ಕೆ ಬಳಸಿದ ಮಟ್ಕಾ ಚೀಟಿ , ಬಾಲ್ ಪೇನ್ ನಗದು 1150/-ರೂಪಾಯಿ ಯನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಕಲಂ: 78 (111) KP Act ರಂತೆ ಪ್ರಕರಣ ದಾಖಲಾಗಿದೆ.