
ಬ್ರಹ್ಮಾವರ: ದಿನಾಂಕ:20-06-2025 (ಹಾಯ್ ಉಡುಪಿ ನ್ಯೂಸ್) ಕೊಕ್ಕರ್ಣೆ ಸಿಂಡಿಕೇಟ್ ರೈತರ ಸೇವಾ ಸಹಕಾರಿ ಸಂಘ ಕ್ಕೆ ಕಳ್ಳರು ನುಗ್ಗಿ ಕಳ್ಳತನ ನಡೆಸಿರುವ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ.
ಬ್ರಹ್ಮಾವರ,ಹೇರೂರು ಗ್ರಾಮದ ನಿವಾಸಿ ಅಭಿಷೇಕ್ (26) ಎಂಬವರು ಸಿಂಡಿಕೇಟ್ ರೈತರ ಸೇವಾ ಸಹಕಾರಿ ಸಂಘ ನಿ. ಕೊಕ್ಕರ್ಣೆ ಇದರ ಪ್ರಭಾರ ಆಡಳಿತ ನಿರ್ದೇಶಕರಾಗಿದ್ದು, ಅವರ ಸಂಘದ ಪ್ರಧಾನ ಕಛೇರಿಯು ಪೆಜಮಂಗೂರು ಗ್ರಾಮದ ಕೊಕ್ಕರ್ಣೆ ಹಣಾರಬೆಟ್ಟುನಲ್ಲಿ ಡೋರ್ ನಂ. 3-315 ರಲ್ಲಿ ಇದೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಕಛೇರಿಗೆ ದಿನಾಂಕ 18/06/2025 ರಂದು ಸಂಜೆ 6:00 ಗಂಟೆಯಿಂದ ದಿನಾಂಕ 19/06/2025 ರಂದು ಬೆಳಿಗ್ಗೆ 08:58 ಗಂಟೆಯ ಮಧ್ಯೆ ಬೀಗ ಹಾಕಿದ್ದ ಸಮಯ ಯಾರೋ ಕಳ್ಳರು ಕಛೇರಿಯ ಮುಖ್ಯದ್ವಾರದ ಬೀಗವನ್ನು ಯಾವುದೋ ಆಯುಧವನ್ನು ಬಳಸಿ ಮುರಿದು ಒಳ ಪ್ರವೇಶಿಸಿ ಕಛೇರಿಯ ಟೇಬಲ್, ಡ್ರಾವರ್ ಗಳನ್ನು ಹುಡುಕಾಡಿ ಡ್ರಾವರ್ ನಲ್ಲಿದ್ದ ಕಛೇರಿಯ 7,000/- ಮೌಲ್ಯದ ಒಪ್ಪೋ Mobile Phone & Airtel SIM ನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಕಲಂ: 305, 333(1), 331(4) BNS ರಂತೆ ಪ್ರಕರಣ ದಾಖಲಾಗಿದೆ.