Spread the love

ಶಂಕರನಾರಾಯಣ: ದಿನಾಂಕ:14-06-2025(ಹಾಯ್ ಉಡುಪಿ ನ್ಯೂಸ್) ಸಿದ್ಧಾಪುರ ಗ್ರಾಮದ ಪರಿಶಿಷ್ಟ ಜಾತಿಗೆ ಸೇರಿದ ಯುವತಿಯೋರ್ವಳನ್ನು ಯುವಕನೋರ್ವ ಮದುವೆಯಾಗುವುದಾಗಿ ನಂಬಿಸಿ ಪ್ರೀತಿ ಮಾಡಿ ವಂಚಿಸಿದ ಕಾರಣ ನೊಂದ ಯುವತಿ ಆತ್ಮಹತ್ಯೆ ಗೆ ಯತ್ನಿಸಿದ ಘಟನೆ ನಡೆದಿದೆ.

ಕುಂದಾಪುರ ತಾಲೂಕು ಸಿದ್ಧಾಪುರ ಗ್ರಾಮದ ನಿವಾಸಿ ಅರುಣ (25) ಎಂಬವರು ಪರಿಶಿಷ್ಟ ಜಾತಿಗೆ ಸೇರಿದ್ದು  ಅರುಣರವರ ತಂಗಿ ಅನುಷಾ (23) ರವರು ಸಿದ್ದಾಪುರದ ಗಿರಿಜ ಸಿಲ್ಕ್ ನಲ್ಲಿ 2 ವರ್ಷಗಳಿಂದ ಕೆಲಸಮಾಡಿಕೊಂಡಿರುತ್ತಾಳೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಆಪಾದಿತ ಹಳ್ಳಿಹೊಳೆ ಭರತ್ ಎಂಬಾತನು ಅರುಣರವರ ಪಿಕಫ್ ವಾಹನಕ್ಕೆ ಸುಮಾರು 6 ತಿಂಗಳ ಹಿಂದೆ ಚಾಲಕನಾಗಿ ಕೆಲಸಕ್ಕೆ ಬಂದಿದ್ದು ಆತನು ಪ್ರತಿದಿನ ಅರುಣರವರ ಮನೆಗೆ ಹೋಗಿ ವಾಹನವನ್ನು ತೆಗೆದುಕೊಂಡು ಬಾಡಿಗೆಗೆ ಹೋಗುತ್ತಿದ್ದನು ಎಂದಿದ್ದಾರೆ, ಆಪಾದಿತ ಭರತ್ ಆ ಸಮಯದಲ್ಲಿ ಸುಮಾರು 2 ತಿಂಗಳುಗಳಿಂದ ಅರುಣರವರ ತಂಗಿ ಅನುಷಾಳನ್ನು ಪ್ರೀತಿ ಮಾಡುತ್ತಿರುವ ವಿಷಯ ಅರುಣರವರ ಮನೆಯವರಿಗೆ ತಿಳಿದಿರುತ್ತದೆ ಎಂದಿದ್ದಾರೆ.

ಭರತನು ಕೆಲವೊಮ್ಮೆ ಅನುಷಾಳನ್ನು ಸಿದ್ದಾಪುರದಿಂದ ಆತನ ಬೈಕ್ ನಲ್ಲಿ ತಾರೆಕೊಡ್ಲು ಬಸ್ ನಿಲ್ದಾಣಕ್ಕೆ ತಂದು ಬಿಟ್ಟು ಹೋಗುತ್ತಿದ್ದನು, ಅರುಣರವರ ಮನೆಯವರು ಅನುಷಾಳಲ್ಲಿ ಭರತನ ಬಗ್ಗೆ ಕೇಳಿದಾಗ ಆತನು ತನ್ನನ್ನು ಮದುವೆ ಆಗುತ್ತೇನೆ ಎಂಬುದಾಗಿ ತಿಳಿಸಿರುತ್ತಾನೆ ಎಂಬುದಾಗಿ ಹೇಳಿರುತ್ತಾಳೆ ಎಂದು ದೂರಿನಲ್ಲಿ ತಿಳಿಸಿದ್ದಾರೆ, ಭರತನಿಗೆ ಅನುಷಾಳು ಪರಿಶಿಷ್ಟ ಜಾತಿ ಎಂಬುದು ತಿಳಿದಿರುತ್ತದೆ, ಹಾಗೂ ದಿನಾಂಕ 12/06/2025 ರಂದು ಮದುವೆ ಬಗ್ಗೆ ವಿಚಾರಿಸಿದ್ದು ದಿನಾಂಕ 09/06/2025 ರಂದು ಸಂಜೆ 6:00 ಗಂಟೆಗೆ ಭರತನು ನಿನ್ನನ್ನು ಮದುವೆಯಾಗುವುದಿಲ್ಲ ಎಂಬುದಾಗಿ ಹೇಳಿ ತನ್ನನ್ನು ತಾರೆಕೊಡ್ಲು ಬಸ್ ನಿಲ್ದಾಣದ ಬಳಿ ಬಿಟ್ಟು ಹೋಗಿದ್ದು ಆದುದರಿಂದ ಅನುಷಳು ದಿನಾಂಕ 11/06/2025 ರಂದು ಇಲಿಗೆ ಹಾಕುವ ವಿಷದ ಟ್ಯೂಬ್ ಸೇವಿಸಿರುತ್ತೇನೆ ಎಂಬುದಾಗಿ ತಿಳಿಸಿದ್ದು, ಅರುಣರವರು ಕೂಡಲೇ ಅವರ ಕಾರಿನಲ್ಲಿ ಅಮ್ಮ ಹಾಗೂ ಚಿಕ್ಕಮ್ಮನೊಂದಿಗೆ ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಯ ಬಗ್ಗೆ ದಾಖಲಿಸಿದ್ದು ಅಲ್ಲಿನ ವೈದ್ಯಾಧಿಕಾರಿಯವರು ಚಿಕಿತ್ಸೆಯನ್ನು ನೀಡಿ ಐಸಿಯು ಘಟಕದಲ್ಲಿ ಇರಿಸಿರುತ್ತಾರೆ ಎನ್ನಲಾಗಿದೆ.

ಭರತನು ಅನುಷಾಳನ್ನು ಪರಿಶಿಷ್ಟ ಜಾತಿಯೆಂದು ತಿಳಿದೂ ಪ್ರೀತಿಸಿ, ಮದುವೆಯಾಗುವುದಾಗಿ ನಂಬಿಸಿ ಅವಳಿಗೆ ಮೋಸಮಾಡಿರುವುದರಿಂದ ಅನುಷಾಳು ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನ ನಡೆಸಿದ್ದಾಳೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣೆಯಲ್ಲಿ   ಕಲಂ: 3(1) (r )(s) SC/ST Act & 318 BNS ರಂತೆ ಪ್ರಕರಣ ದಾಖಲಾಗಿದೆ.

error: No Copying!