
ಮುಂಬೈ: ದಿನಾಂಕ 13-06-2025(ಹಾಯ್ ಉಡುಪಿ ನ್ಯೂಸ್) ಕರಿಷ್ಮಾ ಕಪೂರ್ ಮಾಜಿ ಪತಿ ಉದ್ಯಮಿ ಸಂಜಯ್ ಕಪೂರ್ ಹ್ರದಯಾಘಾತದಿಂದ ನಿಧನರಾಗಿದ್ದಾರೆ.ಅವರಿಗೆ 53 ವರ್ಷ ವಯಸ್ಸಾಗಿತ್ತು.
ಇಂಗ್ಲೆಂಡಿನಲ್ಲಿ ವಾಸವಾಗಿದ್ದ ಸಂಜಯ್ ಕಪೂರ್ ಗಾರ್ಡ್ಸ್ ಪೋಲೋ ಕ್ಲಬ್ ನಲ್ಲಿ ಪೋಲೋ ಆಡುತ್ತಿದ್ದಾಗ ಇದ್ದಕ್ಕಿದ್ದಂತೆಯೇ ಕುಸಿದು ಬಿದ್ದರೆನ್ನಲಾಗಿದೆ.ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಆಸ್ಪತ್ರೆಯಲ್ಲಿ ಅವರನ್ನು ಪರೀಕ್ಷಿಸಿದ ವೈದ್ಯರು ಸಂಜಯ್ ಹ್ರದಯಾಘಾತದಿಂದ ಮ್ರತಪಟ್ಟಿದ್ದಾರೆಂದು ಘೋಷಿಸಿದರು.
ಖ್ಯಾತ ಕೈಗಾರಿಕೋದ್ಯಮಿಯಾಗಿದ್ದ ಸಂಜಯ್ ಕಪೂರ್ ಮತ್ತು ನಟಿ ಕರಿಷ್ಮಾ ಕಪೂರ್ 2003ರಲ್ಲಿ ವಿವಾಹವಾಗಿದ್ದರು.ಅವರಿಗೆ ಸಮೈರಾ ಮತ್ತು ಕಿಯಾರಾ ಎಂಬ ಇಬ್ಬರು ಮಕ್ಕಳಿದ್ದಾರೆ.ಸಂಸಾರದಲ್ಲಿ ಬಿರುಕು ಉಂಟಾಗಿ 2016 ರಲ್ಲಿ ವಿಚ್ಛೇಧನ ಪಡೆದರು. ಬಳಿಕ ಸಂಜಯ್ ಕಪೂರ್ ಪ್ರಿಯಾ ಸಚ್ ದೇವ್ ಎಂಬವರನ್ನು ವಿವಾಹವಾದರು.