
ಬೆಂಗಳೂರು: ದಿನಾಂಕ:10-06-2025(ಹಾಯ್ ಉಡುಪಿ ನ್ಯೂಸ್) ಕಳೆದ 24 ಘಂಟೆಗಳಲ್ಲಿ ರಾಜ್ಯದಲ್ಲಿ 67 ಮಂದಿಗೆ ಕೊರೋನ ಪಾಸಿಟಿವ್ ಧ್ರಢಪಟ್ಟಿದೆ.ಈ ಮೂಲಕ ರಾಜ್ಯದಲ್ಲಿ ಮತ್ತೆ ಕೊರೊನಾ ಆತಂಕ ಹೆಚ್ಚಾಗುತ್ತಿದೆ.
ರಾಜ್ಯದಲ್ಲಿ ಇಂದು ಕೊರೋನಾದಿಂದ ಇಬ್ಬರು ಮ್ರತಪಟ್ಟಿದ್ದಾರೆಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಜನರು ಆತಂಕ ಪಡುವ ಪರಿಸ್ಥಿತಿ ಬಂದಿಲ್ಲವಾದರೂ ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸಬೇಕು ಎಂದು ಸರ್ಕಾರ ಮನವಿ ಮಾಡಿದೆ.