
ಕುಂದಾಪುರ: ದಿನಾಂಕ :05-06-2025(ಹಾಯ್ ಉಡುಪಿ ನ್ಯೂಸ್ ) ಕಸಬಾ ಗ್ರಾಮದ ಕೋಡಿ ಚಕ್ರೇಶ್ವರಿ ದೇವಸ್ಥಾನದ ಸಮೀಪ ಮಾದಕ ವಸ್ತುವನ್ನು ಮಾರಾಟ ಮಾಡಲು ಬಂದಿದ್ದ ಇಬ್ಬರು ವ್ಯಕ್ತಿಗಳನ್ನು ಕುಂದಾಪುರ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ನಂಜಾನಾಯ್ಕ್ ಎನ್ ಅವರು ಬಂಧಿಸಿದ್ದಾರೆ.
ಕುಂದಾಪುರ ಪೊಲೀಸ್ ಠಾಣೆ ಪೊಲೀಸ್ ಉಪನಿರೀಕ್ಷಕರಾದ ನಂಜಾ ನಾಯ್ಕ ಎನ್ ಅವರು ದಿನಾಂಕ 04/06/2025 ರಂದು ಠಾಣೆಯಲ್ಲಿರುವಾಗ, ಕುಂದಾಪುರ ಕಸಬಾ ಗ್ರಾಮದ ಕೋಡಿ ಚಕ್ರೇಶ್ವರಿ ದೇವಸ್ಥಾನದ ಸಮೀಪ ಇಬ್ಬರು ವ್ಯಕ್ತಿಗಳು ಮಾದಕ ವಸ್ತುವನ್ನು ಮಾರಾಟ ಮಾಡಲು ಬಂದಿರುವುದಾಗಿ ಮಾಹಿತಿ ದಾರರಿಂದ ಬಂದ ಮಾಹಿತಿ ಮೇರೆಗೆ ನಂಜಾ ನಾಯ್ಕ ರವರು ಮೇಲಾಧಿಕಾರಿಯವರಿಗೆ ಮಾಹಿತಿ ನೀಡಿ ಕೂಡಲೇ ಠಾಣಾ ಸಿಬ್ಬಂದಿಯವರೊಂದಿಗೆ ಕುಂದಾಪುರ ಕಸಬಾ ಗ್ರಾಮದ ಕೋಡಿ ಚಕ್ರೇಶ್ವರಿ ದೇವಸ್ಥಾನದ ಸಮೀಪದ ಜಂಕ್ಷನ್ ಬಳಿ ಹೋದಾಗ ಅಲ್ಲಿಂದ 20 ಮೀಟರ್ ದೂರದಲ್ಲಿ ಇಬ್ಬರು ವ್ಯಕ್ತಿಗಳು ನಿಂತಿದ್ದು ಅವರುಗಳು ಪೊಲೀಸರನ್ನು ನೋಡಿ ಓಡಲು ಪ್ರಯತ್ನಿಸಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ನಂಜಾ ನಾಯ್ಕ ಅವರು ಸಿಬ್ಬಂದಿಯವರ ಸಹಾಯದಿಂದ ಅವರನ್ನು ಹಿಡಿದು ಕೂಲಂಕುಶವಾಗಿ ವಿಚಾರಣೆ ನಡೆಸಿದಾಗ ತಮ್ಮ ಹೆಸರು ಮುದಾಸ್ಸಿರ್ ಹಾಗೂ ಅಡೆನ್ ಲೋಬೋ ಎಂಬುವುದಾಗಿ ಹಾಗೂ MDMA ಎಂಬ ಮಾದಕ ವಸ್ತುವನ್ನು ಮಾರಾಟ ಮಾಡಲು ಬಂದಿರುವುದಾಗಿ ತಿಳಿಸಿದ್ದು ಅವರಿಬ್ಬರನ್ನೂ ಬಂಧಿಸಿದ್ದು ಆಪಾದಿತರ ವಶದಲ್ಲಿದ್ದ ಒಟ್ಟು 124.72 ಗ್ರಾಂ MDMA (ಅಂದಾಜು ಮೌಲ್ಯ-2.49.440/-) ಎಂಬ ಮಾದಕ ವಸ್ತು, P Oracle ಎಂಬ ಪ್ಲಾಸ್ಟೀಕ್ ಬಾಕ್ಸ್-1, ಇನ್ಸುಲಿನ್ ಸಿರಿಂಜ್-9, ENER-MECH ಎಂಬ ಕಪ್ಪು ಬ್ಯಾಗ್-1, Fresh ಎಂಬ ಪ್ಲಾಸ್ಟೀಕ್ ಬಾಕ್ಸ್-1, ವೇಯಿಂಗ್ ಮೇಶಿನ್-2, 20 ಸಣ್ಣ ಸಣ್ಣ ಸ್ಟೀಲ್ ಡಬ್ಬ ಮತ್ತು 2 ಸ್ಟೀಲ್ ಚಮಚ ಇರುವ ಪ್ಲಾಸ್ಟೀಕ್ ಬಾಕ್ಸ್-1, 36-ಪ್ಲಾಸ್ಟೀಕ್ ಜಿಪ್ ಲಾಕ್ ಕವರ್, Allen Solly Exclusive ಮೆಟಲ್ ಬಾಕ್ಸ್-1, ನಗದು 4540/ ರೂ, ಡ್ರಾಗನ್ ಚೂರಿ-1, OPPO ಮೊಬೈಲ್-1, Samsung ಮೊಬೈಲ್-2 ಸ್ವತ್ತುಗಳನ್ನು ಮುಂದಿನ ಕ್ರಮಕ್ಕಾಗಿ ಸ್ವಾಧೀನಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 8 C, 21 C, 22 C, r/w 29 NDPS Act ರಂತೆ ಪ್ರಕರಣ ದಾಖಲಾಗಿದೆ.