Spread the love

ಮಲ್ಪೆ: ದಿನಾಂಕ 03-06-2025(ಹಾಯ್ ಉಡುಪಿ ನ್ಯೂಸ್) ಮಲ್ಪೆ -ಪಡುಕರೆ ದಕ್ಕೆ ಪರಿಸರದ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ನಡೆಸುತ್ತಿದ್ದ ವ್ಯಕ್ತಿಯನ್ನು ಮಲ್ಪೆ ಪೊಲೀಸ್‌ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ  ರವಿ ಬಿ ಕೆ ಅವರು ಬಂಧಿಸಿದ್ದಾರೆ.

ಮಲ್ಪೆ ಪೊಲೀಸ್‌ ಠಾಣೆ ಪೊಲೀಸ್ ಉಪ ನಿರೀಕ್ಷಕರಾದ ರವಿ ಬಿ ಕೆ ಅವರು ದಿನಾಂಕ 02-06-2025 ರಂದು ಠಾಣಾ ವ್ಯಾಪ್ತಿಯಲ್ಲಿ ರೌಂಡ್ಸ್‌ ಕರ್ತವ್ಯದಲ್ಲಿರುವಾಗ ಬೆಳಿಗ್ಗೆ  ಮಲ್ಪೆ ಕೊಳ ಬೀಟ್‌  ಸಿಬ್ಬಂದಿಯ ಮಾಹಿತಿ ಬಂದ ಮೇರೆಗೆ ಮಲ್ಪೆ ಬಾಪುತೋಟ ಎಂಬಲ್ಲಿ ಪಡುಕೆರೆ-ಮಲ್ಪೆ ರಸ್ತೆಯ 1ನೇ ಟಿ ದಕ್ಕೆಯ ರಸ್ತೆಯ ಬದಿಯಲ್ಲಿರುವ ಗೂಡಂಗಡಿ ಬಳಿ ಸಾರ್ವಜನಿಕ ಸ್ಥಳದಲ್ಲಿ ಯಾರೋ ಒಬ್ಬ ಆಸಾಮಿ ಕಾನೂನು ಬಾಹಿರವಾಗಿ ಮಟ್ಕಾ ಜುಗಾರಿ ಆಟ ಆಡಿಸುತ್ತಿರುವುದಾಗಿ ಮಾಹಿತಿ ನೀಡಿದ ಮೇರೆಗೆ ಪೊಲೀಸ್ ವರಿಷ್ಠಾಧಿಕಾರಿಗಳ ಸೂಚನೆಯಂತೆ ಮಟ್ಕಾ ಜುಗಾರಿ ಆಟ ಆಡುವಲ್ಲಿಗೆ ಇಲಾಖಾ ಸಿಬ್ಬಂದಿಗಳೊಂದಿಗೆ ಮಲ್ಪೆ ಬಾಪುತೋಟ ಎಂಬಲ್ಲಿ ಪಡುಕೆರೆ-ಮಲ್ಪೆ 1ನೇ ಟಿ ದಕ್ಕೆಯ ಬಳಿ ನಿಂತು ನೋಡಿದಾಗ ಸಾರ್ವಜನಿಕ ಖಾಲಿ ಸ್ಥಳದಲ್ಲಿ ಮಟ್ಕಾ ಜುಗಾರಿ ಆಟ ನಡೆಸುತ್ತಿರುವುದು ಕಂಡು ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿದಾಗ ಸಮವಸ್ತ್ರದಲ್ಲಿದ್ದ  ಪೊಲೀಸರನ್ನು ಕಂಡು ಮಟ್ಕಾ ಜುಗಾರಿ ಆಡುತ್ತಿದ್ದವರು ಓಡಿ ಹೋಗಿದ್ದು ಅವರಲ್ಲಿ ಮಟ್ಕಾ ಚೀಟಿ ಪಡೆದು ಹಣ ಸಂಗ್ರಹಿಸುತ್ತಿದ್ದವನನ್ನು ಹಿಡಿದು ವಿಚಾರಿಸಿದಾಗ ಆತನ ಹೆಸರು ಪ್ರಕಾಶ್‌ (43) ಎಂಬುದಾಗಿ ತಿಳಿಸಿದ್ದಾನೆ ಎನ್ನಲಾಗಿದೆ.

ಆತನಿಂದ ಮಟ್ಕಾ ಜುಗಾರಿ ಆಟಕ್ಕೆ ಬಳಸಿದ ಒಟ್ಟು 860 /-ರೂಪಾಯಿ ,ಮಟ್ಕಾ ನಂಬ್ರ ಬರೆದ ಚೀಟಿ-1 ಹಾಗೂ ಬಾಲ್ ಪೆನ್ನು -1 ವಿವೋ ಮೊಬೈಲ್ ಸೆಟ್-1,ಐ ಫೋನ್‌ ಮೊಬೈಲ್‌ ಸೆಟ್-1 ನ್ನು  ಸ್ವಾಧೀನಪಡಿಸಿಕೊಂಡು ನಂತರ ಆತನನ್ನು ವಿಚಾರಿಸಿದಾಗ ತಾನು ಅಂಬಾಗಿಲಿನ ಲೀಯೋ ಎಂಬವರ ಸೂಚನೆಯಂತೆ ಮಟ್ಕಾ ಬರೆಯುತ್ತಿದ್ದು, ಮಟ್ಕಾ ಹಣ ಮತ್ತು ಚೀಟಿಯನ್ನು ಲಿಯೋ ಇವರ ಮೇನೆಜರ್‌ ರತ್ನಾಕರ ಅಮೀನ ರವರು ಪಡೆದುಕೊಂಡು ಹೋಗುತ್ತಾರೆ. ನಾನು ಈ ಮಟ್ಕಾ ವ್ಯವಹಾರವನ್ನು ಲೀಯೋ ಮತ್ತು ರತ್ನಾಕರ ರವರ ನಿರ್ದೆಶನದಂತೆ ಮಾಡುತ್ತಿರುವುದಾಗಿದೆ ಎಂದು ಹೇಳಿಕೆ ನೀಡಿದ್ದಾನೆ ಎನ್ನಲಾಗಿದೆ.

ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆಯಲ್ಲಿ  ಕಲಂ:112 BNSS & 78(i)(iii)KP Act ರಂತೆ ಪ್ರಕರಣ ದಾಖಲಾಗಿದೆ.

error: No Copying!