
- ಶಂಕರನಾರಾಯಣ: ದಿನಾಂಕ :31/05/2025 (ಹಾಯ್ ಉಡುಪಿ ನ್ಯೂಸ್) ಸಿದ್ದಾಪುರ ಗ್ರಾಮದ ಕೆಳ ಪೇಟೆ ಎಂಬಲ್ಲಿ ಅಕ್ರಮವಾಗಿ ದನಗಳನ್ನು ವಧೆ ಮಾಡಲು ತಯಾರಿ ನಡೆಸಿದ್ದ ಇಬ್ಬರನ್ನು ಶಂಕರನಾರಾಯಣ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಶಂಭುಲಿಂಗಯ್ಯ ಎಮ್.ಇ, ಅವರು ಬಂಧಿಸಿದ್ದಾರೆ .
- ಶಂಕರನಾರಾಯಣ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ (ತನಿಖೆ) ಶಂಭುಲಿಂಗಯ್ಯ ಎಮ್ಇ ಅವರಿಗೆ ದಿನಾಂಕ:29-05-2025 ರಂದು ಸಿದ್ದಾಪುರ ಗ್ರಾಮದ ಕೆಳಪೇಟೆ ಎಂಬಲ್ಲಿ ಅಕ್ರಮವಾಗಿ ದನಗಳನ್ನು ಕಟ್ಟಿರುವುದಾಗಿ ಮಾಹಿತಿ ಬಂದಂತೆ ಕೂಡಲೇ ದಾಳಿ ನಡೆಸಿದ್ದಾರೆ .
- ದಾಳಿ ನಡೆಸಿದ ಸಮಯ ಸ್ಥಳದಲ್ಲಿ ಕೋಡುಗಳಿರುವ ನಸು ಕೆಂಪು ಮತ್ತು ಬಿಳಿ ಮಿಶ್ರಿತ ಬಣ್ಣದ ಗಂಡು 1, ಬಿಳಿ ಬಣ್ಣದ ಗಂಡು ದನ-1, ಕಪ್ಪು ಬಿಳಿ ಮಿಶ್ರಿತ ಗಂಡು ದನ-1, ಮತ್ತು ನಸು ಕೆಂಪು ಮತ್ತು ಬಿಳಿ ಮಿಶ್ರಿತ ಗಂಡು ದನ-1 ಆಗಿದ್ದು , ದನಗಳನ್ನು ಯಾವುದೇ ಪರವಾನಿಗೆ ಇಲ್ಲದೇ ವಧೆ ಮಾಡುವ ಉದ್ದೇಶದಿಂದ ಕಳ್ಳತನ ಮಾಡಿಕೊಂಡು ಬಂದು ಅವುಗಳಿಗೆ ಮೇವು, ನೀರು ನೀಡದೇ ಹಿಸಾಂತ್ಮಕವಾಗಿ ಬಿಗಿದು ಮರಕ್ಕೆ ಕಟ್ಟಿ, ದನಗಳನ್ನು ಹತ್ಯೆ ಮಾಡಿ ಮಾಂಸಮಾಡಿ ಗಿರಾಕಿಗಳಿಗೆ ಮಾರಾಟ ಮಾಡುವ ಉದ್ದೇಶದಿಂದ ಆರೋಪಿಗಳಾದ ರವಿಚಂದ್ರನ್ ಹಾಗೂ ಆತನ ಅಣ್ಣ ನಾಗರಾಜ ಎಂಬವ ದನಗಳನ್ನು ಹಿಸಾಂತ್ಮಕವಾಗಿ ಕಟ್ಟಿ ಹಾಕಿರುತ್ತಾರೆ ಎಂದು ದೂರಿನಲ್ಲಿ ದಾಖಲಿಸಿದ್ದಾರೆ.
- ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಕಲಂ: 4,5,7,12 ಕರ್ನಾಟಕ ಗೋ ಹತ್ಯಾ ನಿಷೇಧ ಕಾಯ್ದೆ ಮತ್ತು ಕಲಂ: 11(1) (ಡಿ) ಪ್ರಾಣಿ ಹಿಂಸಾ ಪ್ರತಿಬಂಧಕ ತಡೆ ಕಾಯ್ದೆ 1960 ಹಾಗೂ ಕಲಂ: 112, 303(2) BNS ರಂತೆ ಪ್ರಕರಣ ದಾಖಲಾಗಿದೆ.