
ಮಲ್ಪೆ: ದಿನಾಂಕ: 27-05-2025(ಹಾಯ್ ಉಡುಪಿ ನ್ಯೂಸ್) ಗ್ರಾಹಕರ ಸೋಗಿನಲ್ಲಿ ಬಾಡಿಗೆಗೆ ಕಾರನ್ನು ಪಡೆದು ಕೊಂಡ ಮೂವರು ಆಪಾದಿತರು ಕಾರಿನ ಮಾಲೀಕನಿಗೆ ಕಾರನ್ನು ವಾಪಾಸು ನೀಡದೆ ಹಣಕ್ಕಾಗಿ ಬೇಡಿಕೆ ಇಟ್ಟು ಬ್ಲ್ಯಾಕ್ಮೇಲ್ ಮಾಡಿ ಬೆದರಿಕೆ ಹಾಕಿದ್ದಾರೆ ಎಂದು ವ್ಯಕ್ತಿ ಯೋರ್ವರು ಪೊಲೀಸರಿಗೆ ದೂರು ನೀಡಿದ್ದಾರೆ.
ಕೊಡವೂರು ನಿವಾಸಿ ಇಕ್ಬಾಲ್ ಹೆಚ್ ಐ ಅವರು ಲಘ ವಾಹನಗಳ ಬಾಡಿಗೆ ನೀಡುವ ವ್ಯವಹಾರ ಮಾಡಿಕೊಂಡಿದ್ದು, ಅದರಂತೆ 9 ತಿಂಗಳ ಹಿಂದೆ ಗ್ರಾಹಕನೋರ್ವ ನಿಗೆ ಟೋಯೋಟ ಇಟಿಯೋಸ್ ಲಿವಾ ಜಿ ಡಿ ಕಾರನ್ನು ಬಾಡಿಗೆಗೆ ನೀಡಿದ್ದು ಅಪಾದಿತ ಗ್ರಾಹಕನು ಇಕ್ಬಾಲ್ ರಿಗೆ ಕಾರನ್ನು ವಾಪಾಸು ನೀಡದೆ ಬಾಡಿಗೆ ಹಣವನ್ನೂ ನೀಡದೆ ಮತ್ತು ಕಾರನ್ನು ನೀಡದೆ ನಿಮ್ಮ ಕಾರನ್ನು 2 ನೇ ಅಪಾದಿತನಾದ ಹರ್ಷದ್ ಎಂಬವನಿಗೆ ನೀಡಿರುವುದಾಗಿ ಬೆದರಿಕೆ ಹಾಕುವ ರೀತಿಯಲ್ಲಿ ಮಾತನಾಡಿರುತ್ತಾನೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
2 ನೇ ಅಪಾದಿತ ಹರ್ಷ ದ್ ನಲ್ಲಿ ಇಕ್ಬಾಲ್ ರವರು ವಿಚಾರಿಸಿದಾಗ ಕಾರು ತನ್ನ ಬಳಿ ಇರುವುದಿಲ್ಲ ಎಂಬುದಾಗಿ ತಿಳಿಸಿರುತ್ತಾನೆ ಎಂದೂ ,ಸ್ವಲ್ಪ ದಿನಗಳ ಬಳಿಕ 3 ನೇ ಅಪಾದಿತ ಆಶಿಲ ಎಂಬ ವ್ಯಕ್ತಿ ಇಕ್ಬಾಲ್ ರಿಗೆ ಪೋನ್ ಮಾಡಿ ನಿಮ್ಮ ಕಾರು ಬೇಕಾದಲ್ಲಿ ತಾನು ಹೇಳುವ ಬ್ಯಾಂಕ್ ಖಾತೆಗೆ ಒಂದು ಲಕ್ಷದ ಐವತ್ತು ಸಾವಿರ ರೂಪಾಯಿ ಹಾಕಬೇಕು ಇಲ್ಲವಾದಲ್ಲಿ ಕಾರಿನ ಬಿಡಿ ಭಾಗವನ್ನು ಗುಜರಿ ಅಂಗಡಿಗೆ ಮಾರಾಟ ಮಾಡುವುದಾಗಿ ಪೋನ್ ಮುಖಾಂತರ ಬೆದರಿಕೆ ಹಾಕಿರುತ್ತಾನೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಅಪಾದಿತರಾದ 1 ರಿಂದ 3 ನೇಯವರು ಸೇರಿಕೊಂಡು ಇಕ್ಬಾಲ್ ರವರಿಗೆ ನಂಬಿಕೆ ದ್ರೋಹ ಮಾಡಿ ವಂಚಿಸಿ ಬೆದರಿಕೆ ಹಾಕಿದ್ದಾರೆ ಎಂದು ನ್ಯಾಯಾಲಯದಲ್ಲಿ ನೀಡಿರುವ ಖಾಸಗಿ ಪ್ರಕರಣದಂತೆ ಮಲ್ಪೆ ಠಾಣೆಯಲ್ಲಿ ಕಲಂ:61,316,318,351(3) BNS ರಂತೆ ಪ್ರಕರಣ ದಾಖಲಾಗಿದೆ.