Spread the love

ಹಿರಿಯಡ್ಕ: ದಿನಾಂಕ:14-05-2025 (ಹಾಯ್ ಉಡುಪಿ ನ್ಯೂಸ್) ಬೆಳ್ಳಂಪಳ್ಳಿ ಗ್ರಾಮದ ನಿವಾಸಿ ಮಾಲತಿ ಎಂಬವರ ಮನೆಗೆ ಹಗಲಿನಲ್ಲೇ ಕಳ್ಳರು ನುಗ್ಗಿ ಕಳ್ಳತನ ನಡೆಸಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

ಉಡುಪಿ,ಬೆಳ್ಳಂಪಳ್ಳಿ ಗ್ರಾಮದ ನಿವಾಸಿ ಮಾಲತಿ (45) ಎಂಬವರು ನರ್ಸ್‌ ಕೆಲಸ ಮಾಡುತ್ತಿದ್ದು ಬೆಳಿಗ್ಗೆ 8:30 ಗಂಟೆಗೆ ಹೋಗಿ ಸಂಜೆ 5:20 ಕ್ಕೆ ಮನೆಗೆ ಬರುವುದಾಗಿದೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ದಿನಾಂಕ 13/05/2025 ರಂದು  ಬೆಳಿಗ್ಗೆ ಮನೆಗೆ ಬೀಗ ಹಾಕಿ ಕೆಲಸಕ್ಕೆ ಹೋಗಿದ್ದು ಮಧ್ಯಾಹ್ನ 2:00 ಗಂಟೆಗೆ ಮಾಲತಿರವರ ಗಂಡ ಮಾಲತಿರವರು ಕೆಲಸ ಮಾಡುತ್ತಿದ್ದ ಆಸ್ಪತ್ರೆಗೆ ಬಂದು ಯಾರೋ ಕಳ್ಳರು ಮನೆಯ ಬೀಗ ಮುರಿದು ಗೋದ್ರೇಜ್‌ ನಲ್ಲಿದ್ದ ಚಿನ್ನ ಮತ್ತು ನಗದನ್ನು ಕಳ್ಳತನ ಮಾಡಿಕೊಂಡು ಹೋಗಿರುವುದಾಗಿ ತಿಳಿಸಿದ್ದು ಕೂಡಲೆ ಮಾಲತಿರವರು ಮನೆಗೆ ಬಂದು ನೋಡಿದಾಗ ಯಾರೋ ಕಳ್ಳರು ಮನೆಯ ಮುಂಭಾಗದ ಬಾಗಿಲಿನ ಚಿಲಕವನ್ನು ಒಡೆದು ಮನೆಯ ಒಳಗೆ ಪ್ರವೇಶಿಸಿ ಮನೆಯ ಒಳಗಿದ್ದ ಗೋದ್ರೇಜ್‌ನ ಬಾಗಿಲು ಮತ್ತು ಲಾಕರ್‌ನ್ನು ಒಡೆದು ಅದರಲ್ಲಿದ್ದ 35,000/- ರೂಪಾಯಿ ನಗದು ಹಣ ಹಾಗೂ 41 ಗ್ರಾಂ ತೂಕದ ಚಿನ್ನಾಭರಣಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಬಗ್ಗೆ ಹಿರಿಯಡ್ಕ ಪೊಲೀಸ್‌ ಠಾಣೆಯಲ್ಲಿ  ಕಲಂ:331(3),305(a) BNS ರಂತೆ ಪ್ರಕರಣ ದಾಖಲಾಗಿದೆ

error: No Copying!