Spread the love
  • ಕುಂದಾಪುರ:  ದಿನಾಂಕ:13-05-2025(ಹಾಯ್ ಉಡುಪಿ ನ್ಯೂಸ್) ಗಂಡ ಹಾಗೂ ಗಂಡನ ಮನೆಯವರು ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿದ್ದಾರೆ ಎಂದು ನವ ವಿವಾಹಿತ ಮಹಿಳೆಯೋರ್ವರು ಪೊಲೀಸರಿಗೆ ದೂರು ನೀಡಿದ್ದಾರೆ.
  • ಕುಂದಾಪುರ,ಬೀಜಾಡಿ ಗ್ರಾಮದ ನಿವಾಸಿ ಸಫಾ(21)  ಎಂಬವರು ದಿನಾಂಕ 10/11/2024 ರಂದು ಮುಸ್ಲಿಂ ಸಂಪ್ರದಾಯದಂತೆ ಆರೋಪಿ 1 ಮಹಮ್ಮದ್ ನೆಭಿಲ್ ಎಂಬವರೊಂದಿಗೆ ಭಟ್ಕಳ Donger Palli ಎಂಬಲ್ಲಿ ವಿವಾಹವಾಗಿರುತ್ತಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
  • ಮದುವೆಯ ನಂತರ ಗಂಡನ ಜೊತೆ ಭಟ್ಕಳದಲ್ಲಿ ವಾಸವಿದ್ದು ದಿನಾಂಕ 20/11/2024 ರಂದು ಸಂಜೆ  ಆರೋಪಿ 2. ಇಸ್ಮಾಯಿಲ್ ಮತ್ತು 3. ಶರಪುನನೇಶ ರವರು ಸೇರಿ ಸಫಾ ರವರಿಗೆ ಅವಾಚ್ಯವಾಗಿ ಬೈದು ಕೈಯಿಂದ ಹೊಡೆದು ನಿನ್ನ ಮನೆಗೆ ಹೋಗು ಎಂದು ಬೈದಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
  • ನಂತರ ಒಂದು ತಿಂಗಳ ಬಳಿಕ ದಿನಾಂಕ 20/12/2024 ರಂದು ಸಫಾ ರವರು ತನ್ನ ಗಂಡನೊಂದಿಗೆ ಬೀಜಾಡಿಯಲ್ಲಿರುವ ತನ್ನ ತಂದೆ ಮನೆಗೆ ಬಂದಿದ್ದು ಆಗ ಗಂಡನು ಅವಾಚ್ಯವಾಗಿ ಬೈದಿದ್ದು ಆಗ ಸಫಾ ರವರ ತಂದೆ ಬುದ್ದಿವಾದ ಹೇಳಿರುತ್ತಾರೆ ಎಂದಿದ್ದಾರೆ.
  • ದಿನಾಂಕ 02/01/2025 ರಂದು ಆರೋಪಿ  ಗಂಡ ಮಹಮ್ಮದ್ ನೆಭಿಲ್ ನು  ಸಫಾರವರನ್ನು ಭಟ್ಕಳದಲ್ಲಿರುವ ತನ್ನ ಮನೆಯಲ್ಲಿ ಬಿಟ್ಟು ವಿದೇಶಕ್ಕೆ ಹೋಗಿರುತ್ತಾನೆ ಎಂದಿದ್ದಾರೆ. ಆ ಸಮಯ ಆರೋಪಿ 2 ಮತ್ತು 3 ನೇಯವರು ಅವಾಚ್ಯ ಶಬ್ದಗಳಿಂದ ಬೈದು ಹಿಂಸೆ ನೀಡಿರುತ್ತಾರೆ ಎಂದಿದ್ದಾರೆ. ದಿನಾಂಕ 30/01/2025 ರಂದು ಸಫಾರವರು ತನ್ನ ಗಂಡನೊಂದಿಗೆ ವಿದೇಶಕ್ಕೆ ಹೋಗಿದ್ದು ಅಲ್ಲಿಯೂ 1 ನೇ ಆರೋಪಿ ಗಂಡನು ಪದೇ-ಪದೇ ಸಫಾರವರಿಗೆ ಬೈದು ಮಾನಸಿಕ ಹಿಂಸೆ ನೀಡಿರುತ್ತಾನೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
  • ಸಫಾರವರು ನೀಡಿದ ದೂರಿನಂತೆ ಕುಂದಾಪುರ ಪೊಲೀಸ್‌ ಠಾಣೆಯಲ್ಲಿ  ಕಲಂ:85, 352, 115(2) R/W 3(5) BNS ರಂತೆ ಪ್ರಕರಣ ದಾಖಲಾಗಿದೆ.
     
error: No Copying!