
ಜೀ ಕನ್ನಡ ಕಾಮಿಡಿ ಕಿಲಾಡಿಗಳು ಸೀಸನ್ -3 ರ ವಿನ್ನರ್ ಉಡುಪಿ ಜಿಲ್ಲೆಯ ಕೆಮ್ಮಣ್ಣು,ಹೂಡೆ ನಿವಾಸಿ ಸಾಂತೂರು ರಾಕೇಶ್ ಪೂಜಾರಿ ಅವರು ಇಂದು ಬೆಳಗಿನ ಜಾವ 2-00ಘಂಟೆಯ ಸುಮಾರಿಗೆ ಕಾರ್ಕಳ ಸಮೀಪದ ನಿಟ್ಟೆಯಲ್ಲಿ ಹ್ರದಯಾಘಾತದಿಂದ ನಿಧನರಾಗಿದ್ದಾರೆ.
ತನ್ನ ಸ್ನೇಹಿತನ ಮನೆಯಲ್ಲಿ ಮೆಹೆಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು ಹಠಾತ್ ಕುಸಿದು ಬಿದ್ದಿದ್ದು ಅವರನ್ನು ಕೂಡಲೇ ಕಾರ್ಕಳ ದ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.ಆದರೆ ಅದಾಗಲೇ ಅವರು ವಿಧಿವಶರಾಗಿದ್ದಾರೆ ಎನ್ನಲಾಗಿದೆ.