
ಕುಂದಾಪುರ:ದಿನಾಂಕ :07-05-2025 (ಹಾಯ್ ಉಡುಪಿ ನ್ಯೂಸ್) ಕೋಟೇಶ್ವರ ಗ್ರಾಮದ ಕೊಂಬಾರ ರೆಸಾರ್ಟ್ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ನಡೆಸುತ್ತಿದ್ದ ವ್ಯಕ್ತಿಯನ್ನು ಕುಂದಾಪುರ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ನಂಜಾನಾಯ್ಕ ಎನ್ ಅವರು ಬಂಧಿಸಿದ್ದಾರೆ.
ಕುಂದಾಪುರ ಪೊಲೀಸ್ ಠಾಣೆ ಪೊಲೀಸ್ ಉಪ ನಿರೀಕ್ಷಕರಾದ ನಂಜಾನಾಯ್ಕ ಎನ್ ಅವರು ದಿನಾಂಕ:05-05-2025ರಂದು ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿ ಇರುವಾಗ ಕೋಟೇಶ್ವರ ಗ್ರಾಮದ ಬೀಟ್ ಸಿಬ್ಬಂದಿಯವರಾದ ಆಲಿಂಗರಾಯ ಕಾಟೆರವರು ಕುಂದಾಪುರ ತಾಲೂಕು ಕೋಟೇಶ್ವರ ಗ್ರಾಮದ ಎಂ ಕೋಡಿಯಿಂದ ಹಳೆ ಅಳಿವೆಗೆ ಹೋಗುವ ರಸ್ತೆಯ ಕೊಂಬಾರ ಎಂಬ ರೆಸಾರ್ಟ್ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ಆಡುತ್ತಿರುವುದಾಗಿ ಮಾಹಿತಿ ನೀಡಿದ್ದು, ಕೂಡಲೇ ನಂಜಾನಾಯ್ಕ ಎನ್ ಅವರು ಸಿಬ್ಬಂದಿಯವರೊಂದಿಗೆ ಮಾಹಿತಿ ಬಂದ ಸ್ಥಳಕ್ಕೆ ದಾಳಿ ನಡೆಸಿದಾಗ ಅಲ್ಲಿ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಸಾರ್ವಜನಿಕರನ್ನು ಸೇರಿಸಿಕೊಂಡಿದ್ದು, ಸಾರ್ವಜನಿಕರಿಂದ ಹಣವನ್ನು ಪಣವಾಗಿ ಸ್ವೀಕರಿಸಿಕೊಂಡು ಮಟ್ಕಾ ನಂಬ್ರ ಬರೆದು ಕೊಡುತ್ತಿದ್ದು ಮಟ್ಕಾ ಜುಗಾರಿ ಆಟ ನಡೆಸುತ್ತಿದ್ದ ವ್ಯಕ್ತಿಯಾದ ಸುರೇಶ ಎಂಬುವವನನ್ನು ಬಂಧಿಸಿ ವಶಕ್ಕೆ ಪಡೆದುಕೊಂಡಿದ್ದಾರೆ .
ಆತನನ್ನು ವಿಚಾರಣೆ ನಡೆಸಿದಾಗ ಆತನಿಗೆ ಮಟ್ಕಾ ಜುಗಾರಿ ಸಂಗ್ರಹಿಸಲು ಸಂದೇಶ ಎಂಬವ ತಿಳಿಸಿದ್ದು ಉಳಿದವರು 00 ಯಿಂದ 99 ವರೆಗಿನ ನಂಬರ್ ಗೆ ಹಣವನ್ನು ಪಣವಾಗಿ ಇಟ್ಟು ಮಟ್ಕಾ ಜುಗಾರಿ ಆಟ ಆಡುತ್ತಿರುವುದಾಗಿ ತಿಳಿಸಿದ್ದಾನೆ ಎನ್ನಲಾಗಿದೆ.
ಆಪಾದಿತ ಸುರೇಶನು ಸಂಗ್ರಹಿದ ಮೊತ್ತವನ್ನು ಸಂದೇಶನು ಪಡೆದುಕೊಂಡು ಹೋಗುತ್ತಿರುವುದಾಗಿಯೂ ತನಗೆ ಕಮೀಶನ್ ನೀಡುತ್ತಿರುವುದಾಗಿ ಸುರೇಶ ತಿಳಿಸಿದ್ದು ಸುರೇಶ ನನ್ನು ಬಂಧಿಸಿ ದಸ್ತಗಿರಿ ಮಾಡಿ ಮಟ್ಕಾ ಜುಗಾರಿ ಆಟಕ್ಕೆ ಬಳಸಿದ ನಗದು ರೂ 4640/- ರೂಪಾಯಿ ಹಾಗೂ ಮಟ್ಕಾ ಸಂಖ್ಯೆ ಬರೆದ ಚೀಟಿ-8, ಮಟ್ಕಾ ಬರೆಯಲು ಉಪಯೋಗಿಸಿದ ಬಾಲ್‌ಪೆನ್ನು-1 ಹಾಗೂ 2 OPPO ಕಂಪನಿಯ ಮೊಬೈಲ್ ಪೋನ್ ಅಂದಾಜು ಮೌಲ್ಯ 10,000 /- ರೂಪಾಯಿ ಮತ್ತು ಮೊಬೈನಲ್ಲಿದ್ದ ಮಟ್ಕಾ ಚೀಟಿಯ ಸ್ಕ್ರೀನ್ ಶಾಟ್ ಪ್ರತಿ -8 ಸ್ವಾಧೀನಪಡಿಸಿಕೊಂಡಿದ್ದು ಈ ಬಗ್ಗೆ ಆಪಾದಿತರಾದ 1)ಸುರೇಶ ತೆಕ್ಕಟ್ಟೆ ಗ್ರಾಮ ಕುಂದಾಪುರ ತಾಲೂಕು 2)ಸಂದೇಶ 3)ಶಂಕರ ಕುಂಭಾಶಿ 4) ಜಯರಾಮ್ ತೆಕ್ಕಟ್ಟೆ 5) ಶ್ರೀನಿವಾಸ ಕುಂಭಾಶಿ 6) ವಿನಾಯಕ ಕುಂಭಾಶಿ 7) ಗಣೇಶ್ ಸಾಲಿಗ್ರಾಮ 8) ರಾಜು ಕೋಟ 9) ಸಿಓ ರಾಜು ಕುಂಭಾಶಿ 10) ಬಾಬು ತೆಕ್ಕಟ್ಟೆ ಇವರ ವಿರುದ್ದ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಕಲಂ:112 BNS & 78(I) (III) KP ACT ನಂತೆ ಪ್ರಕರಣ ದಾಖಲಾಗಿದೆ.