Spread the love

ಉಡುಪಿ:ದಿನಾಂಕ:05-05-2025(ಹಾಯ್ ಉಡುಪಿ ನ್ಯೂಸ್) ಗಂಡ ಹಾಗೂ ಗಂಡನ ಮನೆಯವರು ವರದಕ್ಷಿಣೆ ರೂಪದಲ್ಲಿ ಹೊಸ ಅಪಾರ್ಟ್ ಮೆಂಟ್ ಕೊಡಿಸಬೇಕೆಂದು, ಹೆಚ್ಚಿನ ವರದಕ್ಷಿಣೆ ಗಾಗಿ ಬೇಡಿಕೆ ಇಟ್ಟು ಬೆದರಿಕೆ ಹಾಕಿದ್ದಾರೆ ಎಂದು ಮಹಿಳೆಯೋರ್ವರು ಪೊಲೀಸರಿಗೆ ದೂರು ನೀಡಿದ್ದಾರೆ.

ಉಡುಪಿ, ಆತ್ರಾಡಿ ನಿವಾಸಿ ಶಿಲ್ಪಾ (29)  ಎಂಬವರ ವಿವಾಹವು ಬಾಲಕ್ರಷ್ಣ ಎಂಬವರೊಂದಿಗೆ ದಿನಾಂಕ: 26/01/2023 ರಂದು ಹಿಂದು ಧರ್ಮದ ಸಂಪ್ರದಾಯದಂತೆ ಗುರು ಹಿರಿಯರ ಸಮ್ಮುಖದಲ್ಲಿ ಉಡುಪಿ ಓಂತಿಬೆಟ್ಟು ಆರ್ ಎಸ್ ಬಿ ಸಭಾಭವನದಲ್ಲಿ ನಡೆದಿತ್ತು ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಶಿಲ್ಪಾ ಅವರು ತಿಳಿಸಿದ್ದಾರೆ.

ಮದುವೆಯ ಸಂಪೂರ್ಣ ಖರ್ಚು ವೆಚ್ಚ ಸುಮಾರು 25 ಲಕ್ಷ ರೂ ವನ್ನು ಶಿಲ್ಪಾರವರ ಮನೆಯವರೇ ಭರಿಸಿ ಮದುವೆ ನಡೆದಿರುತ್ತದೆ ಎಂದಿದ್ದಾರೆ. ಮದುವೆಯ ನಂತರ ಶಿಲ್ಪಾರವರು ತನ್ನ ಗಂಡನ ಮನೆಯಾದ ಅಲೆವೂರಿನಲ್ಲಿ ಒಟ್ಟಿಗೆ ವಾಸ ಮಾಡಿಕೊಂಡಿದ್ದರು ಎಂದಿದ್ದಾರೆ .

ಶಿಲ್ಪಾರವರಿಗೆ ಮದುವೆಯ ಸಮಯ 25 ಪವನ್ ತೂಕದ ಬಂಗಾರದ ಆಭರಣ ಹಾಕಿದ್ದು ಇವುಗಳನ್ನು 2 ನೇ ಆರೋಪಿ ಮನೋರಮಾ ಬ್ಯಾಂಕ್ ಲಾಕರ್ ನಲ್ಲಿ ಇಟ್ಟಿದ್ದು ಮದುವೆಗೆ ಬಂದ ಉಡುಗೊರೆಗಳು ಮತ್ತು ಬೆಳ್ಳಿಯ ಕೆಲವು ವಸ್ತುಗಳನ್ನು ಅವರ ಮನೆಯಲ್ಲಿಯೇ ಇಟ್ಟುಕೊಂಡಿದ್ದರು ಎಂದಿದ್ದಾರೆ. ಆರೋಪಿ ಗಂಡ ಬಾಲಕ್ರಷ್ಣ ಮತ್ತು 2 ನೇ ಆರೋಪಿ ಮನೋರಮಾರವರು ಶಿಲ್ಪಾ ರವರನ್ನು ಉದ್ದೇಶಿಸಿ ಟೀಕಿಸುತ್ತಿದ್ದರು ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ದೂರಿ ಕೊಂಡಿದ್ದಾರೆ.

ಹೊಸ ಅಪಾರ್ಟ್ ಮೆಂಟ್ ಹಾಗೂ ಹೆಚ್ಚಿನ ಚಿನ್ನಾಭರಣ ಖರೀದಿಸಿ ಕೊಡುವಂತೆ ಆರೋಪಿಗಳು ಬೇಡಿಕೆ ಇಟ್ಟಿರುತ್ತಾರೆ ಹಾಗೂ  ಬೆದರಿಕೆ ಹಾಕುತ್ತಿದ್ದಾರೆ ಎಂದು ಶಿಲ್ಪಾ ರವರು ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಬಗ್ಗೆ ಉಡುಪಿ ಮಹಿಳಾ ಪೊಲೀಸ್‌ ಠಾಣೆಯಲ್ಲಿ  ಕಲಂ: 85 ಜೊತೆಗೆ 3(5) BNS ನಂತೆ ಪ್ರಕರಣ ದಾಖಲಾಗಿದೆ.

error: No Copying!