
ಕೋಟ: ದಿನಾಂಕ 06-05-2025(ಹಾಯ್ ಉಡುಪಿ ನ್ಯೂಸ್) ತೆಕ್ಕಟ್ಟೆ ಫಿಶ್ ಮಾರ್ಕೆಟ್ ಬಳಿ ಕ್ರಿಕೆಟ್ ಬೆಟ್ಟಿಂಗ್ ಅಕ್ರಮ ದಂಧೆಗೆ ಹಣ ಸಂಗ್ರಹಿಸುತ್ತಿದ್ದ ವ್ಯಕ್ತಿಯೋರ್ವನನ್ನು ಕೋಟ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ರಾಘವೇಂದ್ರ.ಸಿ ಅವರು ಬಂಧಿಸಿದ್ದಾರೆ.
ಕೋಟ ಪೊಲೀಸ್ ಠಾಣೆ , ಪೊಲೀಸ್ ಉಪ ನಿರೀಕ್ಷಕರಾದ ರಾಘವೇಂದ್ರ.ಸಿ ಅವರಿಗೆ ದಿನಾಂಕ:03-05-2025 ರಂದು ರಾತ್ರಿ ಕುಂದಾಪುರ ತಾಲ್ಲೂಕು ತೆಕ್ಕಟ್ಟೆ ಗ್ರಾಮದ ತೆಕ್ಕಟ್ಟೆ ಫಿಶ್ ಮಾರ್ಕೇಟ್ ಸಮೀಪದಲ್ಲಿ ಕೆಲಮಂದಿ ಯುವಕರು ಜೊತೆಯಾಗಿ ಸೇರಿಕೊಂಡು ಬೆಂಗಳೂರಿನ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ RCB (ರಾಯಲ್ ಚಾಲೆಂಜ್ ಬೆಂಗಳೂರು) ಮತ್ತು CSK ( ಚೆನೈ ಸೂಪರ್ ಕಿಂಗ್ಸ್)ತಂಡಗಳ ನಡುವೆ ನಡೆಯುವ IPL T20 ಕ್ರಿಕೆಟ್ ಮ್ಯಾಚ್‌ಗೆ ಸಂಬಂಧಪಟ್ಟು, ಸಾವರ್ಜನಿಕರಿಂದ ಹಣ ಸಂಗ್ರಹ ಮಾಡುತ್ತಾ ಕ್ರಿಕೆಟ್ ಬೆಟ್ಟಿಂಗ್ ಅಕ್ರಮ ದಂಧೆಯಲ್ಲಿ ತೊಡಗಿಕೊಂಡಿರುವ ಬಗ್ಗೆ ಸಾರ್ವಜನಿಕ ರಿಂದ ಮಾಹಿತಿ ಬಂದ ಮೇರೆಗೆ ಕೂಡಲೇ ಸಿಬ್ಬಂದಿಗಳೊಂದಿಗೆ ಮಾಹಿತಿ ಬಂದ ಸ್ಥಳಕ್ಕೆ ತೆರಳಿದ್ದಾರೆ.
ಮಾಹಿತಿ ಬಂದ ಸ್ಥಳದಲ್ಲಿ ಗಮನಿಸಿದಾಗ ಕುಂದಾಪುರ ತಾಲ್ಲೂಕು ತೆಕ್ಕಟ್ಟೆ ಗ್ರಾಮದ ಫಿಶ್ ಮಾರ್ಕೇಟ್ ಸಮೀಪ ಮೊಬೈಲ್ ಪೋನ್ ಹಿಡಿದುಕೊಂಡು RCB ಮತ್ತು CSK ಎಂದು ಹೇಳಿ PARKER ಎಂಬ ಕ್ರಿಕೆಟ್ ಬೆಟ್ಟಿಂಗ್ ವೆಬ್‌ಸೈಟ್ ಮುಖಾಂತರ ಅಕ್ರಮವಾಗಿ ಕ್ರಿಕೇಟ್ ಬೆಟ್ಟಿಂಗ್ ಆಡುತ್ತಿದ್ದ ಆರೋಪಿತ ಗಂಗಾದರ್.ಎಂ, ಕಿನಾರೆ ಬೀಚ್ ರೋಡ್, ಕುಂದಾಪುರ ಎಂಬವನನ್ನು ಬಂಧಿಸಿದ್ದಾರೆ ಹಾಗೂ ಬೆಟ್ಟಿಂಗ್ ಗೆ ಬಳಸಿದ 2 ಮೊಬೈಲ್ ಪೋನ್ ಹಾಗೂ ನಗದು ರೂಪಾಯಿ 3,750/- ಅನ್ನು ಸ್ವಾದೀನಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಕಲಂ: 112 BNS & 78 KP Act ನಂತೆ ಪ್ರಕರಣ ದಾಖಲಾಗಿದೆ.