
- ಹೆಬ್ರಿ: ನಾಲ್ಕೂರು ಗ್ರಾಮದ ನಿವಾಸಿ ಜಯಂತಿ ಎಂಬವರು ತನ್ನ ಗಂಡನನ್ನು ಕತ್ತಿಯಿಂದ ಕಡಿದು ಕೊಂದಿದ್ದಾರೆ ಎಂದು ಕ್ರಿಷ್ಣ ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ.
- ಬ್ರಹ್ಮಾವರ ತಾಲೂಕು ,ನಾಲ್ಕೂರು ಗ್ರಾಮದ ನಿವಾಸಿ ಕ್ರಿಷ್ಣ (54) ಎಂಬವರ ಮನೆಯ ಪಕ್ಕದಲ್ಲಿ ಕ್ರಿಷ್ಣ ರವರ ತಮ್ಮ ಗಣಪತಿ ಮನೆ ಮಾಡಿ ವಾಸಮಾಡಿಕೊಂಡಿದ್ದು ಗಣಪತಿ ಮದ್ಯಪಾನ ಮಾಡುವ ಅಭ್ಯಾಸ ಹೊಂದಿದ್ದು ಪ್ರತಿದಿನ ಕುಡಿದು ಬಂದಾಗ ಮನೆಯಲ್ಲಿ ಹೆಂಡತಿಯೊಂದಿಗೆ ಗಲಾಟೆ ಮಾಡುತ್ತಿದ್ದು, ದಿನಾಂಕ 30/04/2025 ರಂದು ತನ್ನ ಮನೆಯ ಪಕ್ಕದ ತಂಗಿ ವೀಣಾಳ ಜಾಗದಲ್ಲಿ ಬಾವಿ ತೋಡುವ ಕೆಲಸವಾಗುತ್ತಿದ್ದು, ಈ ಕೆಲಸಕ್ಕೆ ಕ್ರಿಷ್ಣ ರವರ ಅಕ್ಕನ ಮಗನಾದ ಫೃಥ್ವಿರಾಜ್‌ನು ಕ್ರಿಷ್ಣ ರವರು ಹಾಗೂ ಕೆಲಸದವರೊಂದಿಗೆ ಕೆಲಸ ಮಾಡಿಕೊಂಡಿರುವ ಸಮಯ ಪಕ್ಕದಲ್ಲಿ ಇದ್ದ ಗಣಪತಿರವರ ಮನೆಯಲ್ಲಿ ಗಣಪತಿ ಹಾಗೂ ಆತನ ಹೆಂಡತಿ ಜಯಂತಿ ನಡುವೆ ಗಲಾಟೆಯಾಗುತ್ತಿತ್ತು ಎಂದು ಕ್ರಿಷ್ಣ ರವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
- ಮದ್ಯಾಹ್ನ ಕ್ರಷ್ಣ ರವರು ಹಾಗೂ ಕೆಲಸದವರು ಕೆಲಸ ಮುಗಿಸಿ ಊಟಕ್ಕೆ ಮನೆಗೆ ಹೋಗಿದ್ದು ಫೃಥ್ವಿರಾಜನು ಗಣಪತಿ ಮನೆಗೆ ಹೋಗಿದ್ದು ಸ್ವಲ್ಪ ಸಮಯದ ನಂತರ ಗಣಪತಿ ಮನೆಯ ಕಡೆಯಿಂದ ಜೋರಾದ ಬೊಬ್ಬೆ ಶಬ್ದ ಕೇಳಿ, ಕ್ರಷ್ಣ ರವರು ಗಣಪತಿ ಮನೆಯ ಕಡೆ ಓಡಿ ಬಂದಾಗ ಮನೆಯ ಹಿಂಭಾಗ ನೆಲ್ಲಿಕಟ್ಟೆ ಬಳಿ ಗಣಪತಿ ಕುತ್ತಿಗೆ ಬಳಿ ಕಡಿದ ಗಾಯವಾಗಿ ಬಿದ್ದುಕೊಂಡಿದ್ದು ಫೃಥ್ವಿರಾಜನು ಜಯಂತಿಯ ಕೈಯಲ್ಲಿ ಇದ್ದ ಕತ್ತಿಯನ್ನು ಕಸಿದುಕೊಂಡು ಬಿಸಾಡಿದ್ದು ಅದಾಗಲೇ ಗಣಪತಿ ಮೃತ ಪಟ್ಟಿರುತ್ತಾನೆ ಎನ್ನಲಾಗಿದೆ .
- ದಿನಾಂಕ 30/04/2025 ರಂದು ಕುಡಿಯಲು ಹೋಗುವ ಸಲುವಾಗಿ ಹೆಂಡತಿಯಲ್ಲಿ ಹಣ ಕೇಳಿದ ವಿಚಾರದಲ್ಲಿ ಗಣಪತಿ ಹಾಗು ಜಯಂತಿ ಮಧ್ಯ ಗಲಾಟೆಯಾಗಿ ಹೆಂಡತಿ ಜಯಂತಿ ಕತ್ತಿಯಿಂದ ಗಣಪತಿ ಕುತ್ತಿಗೆ ಕಡಿದು ಕೊಲೆ ಮಾಡಿದ್ದಾಳೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
- ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಕಲಂ: 103 BNS ರಂತೆ ಪ್ರಕರಣ ದಾಖಲಾಗಿದೆ.