
- ಪಡುಬಿದ್ರಿ: ದಿನಾಂಕ: 05-05-2025 (ಹಾಯ್ ಉಡುಪಿ ನ್ಯೂಸ್) ಗಂಡ ಹಾಗೂ ಗಂಡನ ಮನೆಯವರು ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದಾರೆ ಎಂದು ಮಹಿಳೆಯೋರ್ವರು ಪೊಲೀಸರಿಗೆ ದೂರು ನೀಡಿದ್ದಾರೆ.
- ಕಾಪು ಹೆಜಮಾಡಿ ಗ್ರಾಮದ ನಿವಾಸಿ ಸುಮಯ್ಯ ಬಾನು (26) ಎಂಬವರು ದಿನಾಂಕ :11/02/2016 ರಂದು ಕಾಫು ತಾಲೂಕು ಬೆಳಪು ಗ್ರಾಮದ ವಿನಯನಗರ ವಾಸಿ ದಿ.ಸುಲೈಮಾನ್ ಎಂಬವರ ಮಗ ಆರೀಪ್ ಎಂಬವನನ್ನು ಕೊಪ್ಪಲಂಗಡಿಯ ಕಮ್ಯೂನಿಟಿ ಹಾಲ್‌ನಲ್ಲಿ ಗುರುಹಿರಿಯರ ಸಮಕ್ಷಮ ಮದುವೆಯಾಗಿದ್ದು, ಬೆಳಪು ಬದ್ರಿಯಾ ಮಸೀದಿಯಲ್ಲಿ ಮುಸ್ಲಿಂ ಸಂಪ್ರದಾಯದಂತೆ ನೊಂದಣಿ ಮಾಡಿಕೊಂಡಿರುತ್ತಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
- ನಂತರ ಸುಮಯ್ಯ ಬಾನುರವರು ಗಂಡ, ಗಂಡನ ತಾಯಿ ಹಾಜಿರ, ತಂಗಿ ಉಮಿನ ಹಾಗೂ ರುಬಿನ, ತಮ್ಮ ಹರ್ಷಾದ್ ಇವರೊಂದಿಗೆ ವಾಸವಾಗಿದ್ದು, ಗಂಡ ವಿಧೇಶದಲ್ಲಿ ಉದ್ಯೋಗದಲ್ಲಿ ಇದ್ದು, ಗಂಡನ ತಾಯಿ ಹಾಜಿರ, ತಂಗಿ ಉಮಿನ ಹಾಗೂ ರುಬಿನ, ತಮ್ಮ ಹರ್ಷಾದ್ ಇವರಿಗೆ ಆರೀಪ್ ನೊಂದಿಗೆ ಮದುವೆಯಾಗಿದ್ದು ಇಷ್ಟ ಇಲ್ಲದೆ ಇದ್ದು ದರಿಂದ ಸುಮಯ್ಯ ಬಾನು ರವರ ಗಂಡನ ಮನೆಯವರು ಸುಮಯ್ಯ ಬಾನು ರವರಿಗೆ ಯಾವಾಗಲೂ ಬೈಯ್ಯುತ್ತಿದ್ದು, ನಂತರ ಸುಮಯ್ಯ ಬಾನುರವರ ಗಂಡ ಊರಿಗೆ ಬಂದ ಸಮಯದಲ್ಲಿ ಸುಮಯ್ಯ ಬಾನು ರವರು ಗಂಡನಿಗೆ ವಿಚಾರ ತಿಳಿಸಿದಾಗ ಸುಮಯ್ಯ ಬಾನು ರವರಿಗೆ ಸುಮಯ್ಯ ಬಾನುರವರ ಗಂಡ ಕೂಡಾ ಕೈಯಿಂದ ಹಾಗೂ ಬೆಲ್ಟ್ ನಿಂದ ಹೊಡೆದು ಹೆದರಿಸುತ್ತಿದ್ದು, ಎಲ್ಲವನ್ನೂ ಸುಮಯ್ಯ ಬಾನು ರವರು ಸಹಿಸಿಕೊಂಡಿದ್ದು, ನಂತರ ಅದೇ ರೀತಿ ಸುಮಯ್ಯ ಬಾನು ರವರ ಗಂಡ ಹಾಗೂ ಗಂಡನ ಮನೆಯವರು ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುವುದನ್ನು ಮುಂದುವರಿಸಿದ್ದು ಇದರಿಂದ ನೊಂದ ಸುಮಯ್ಯ ಬಾನು ಲವರು ಶಿರ್ವ ಪೊಲೀಸ್ ಠಾಣೆಯಲ್ಲಿ, ವಿನಯನಗರ ಬದ್ರಿಯ ಮಸೀದಿಯಲ್ಲಿ, ಮಂಗಳೂರು ಪಾಂಡೇಶ್ವರ ಮಹಿಳಾ ಠಾಣೆಯಲ್ಲಿ, ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಗಂಡನ ಹಾಗೂ ಗಂಡನ ಮನೆಯವರ ಮೇಲೆ ದೂರು ನೀಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
- ಅಲ್ಲಿ ಎಲ್ಲಾ ಕಡೆ ಸುಮಯ್ಯ ಬಾನು ರವರ ಗಂಡ ಹಾಗೂ ಗಂಡನ ಮನೆಯವರಿಗೆ ಸುಮಯ್ಯ ಬಾನುರವರಿಗೆ ಮುಂದಕ್ಕೆ ತೊಂದರೆ ನೀಡದಂತೆ ಎಚ್ಚರಿಗೆ ನೀಡಿದ್ದರು ಎಂದಿದ್ದಾರೆ. ಅಲ್ಲದೆ ನೋಟರಿ ಲಾಯರ್ ಮುಖಾಂತರ ಸುಮಯ್ಯ ಬಾನು ರವರಿಗೆ ಹಾಗೂ ಸುಮಯ್ಯ ಬಾನು ರವರ ಮಕ್ಕಳಿಗೆ ಮುಂದಕ್ಕೆ ಯಾವುದೇ ತೊಂದರೆ ಕೊಡುವುದಿಲ್ಲ ಎಂಬುದಾಗಿಯೂ, ಮುಂದಕ್ಕೆ ಖರ್ಚಿಗೆ ಹಣ ಕೊಡುವಂತೆ ಸಾಕ್ಷಿದಾರರ ಸಮಕ್ಷಮ ಅಗ್ರಿಮೆಂಟ್ ಕೂಡಾ ಮಾಡಿಸಿದ್ದು , ಆದರೂ ಕೂಡಾ ಸುಮಯ್ಯ ಬಾನುರವರಿಗೆ ಸುಮಯ್ಯ ಬಾನುರವರ ಗಂಡ ಹಾಗೂ ಗಂಡನ ಮನೆಯವರು ಅದೇ ರೀತಿ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುವುದನ್ನು ಮುಂದುವರಿಸಿದ್ದರು ಎಂದಿದ್ದಾರೆ.
- ನಂತರ 5 ವರ್ಷಗಳಿಂದ ಗಂಡನೊಂದಿಗೆ ಇತರ ಕಡೆಗಳಲ್ಲಿ ಬಾಡಿಗೆ ಮನೆಯಲ್ಲಿ ವಾಸ ಇದ್ದು ಆ ಸಮಯದಲ್ಲಿ ಸುಮಯ್ಯರವರಿಗೆ ಗಂಡನೊಂದಿಗೆ ಜೀವನ ನಡೆಸಲು ಆಗದೇ ಇದ್ದುದರಿಂದ ದಿನಾಂಕ 22/04/2025 ರಂದು ಸುಮಯ್ಯರವರ ತಂದೆ ಮನೆಗೆ ಮಕ್ಕಳೊಂದಿಗೆ ಬಂದು ಮನೆಯಲ್ಲಿ ಇದ್ದಾಗ ಸಂಜೆ ವೇಳೆ ಸುಮಯ್ಯ ರವರ ಗಂಡ ಆರೀಪನು ಸುಮಯ್ಯರವರ ತಂದೆ ಮನೆಗೆ ಕುಡಿದು ಬಂದಿದ್ದು ಅದನ್ನು ಸುಮಯ್ಯರವರು ಕೇಳಿದ್ದಕ್ಕೆ ಕೋಪಗೊಂಡು ಸುಮಯ್ಯರವರಿಗೆ ಕೈಯಿಂದ ಹೊಡೆಯಲು ಹೋಗಿದ್ದು ಆಗ ತಡೆಯಲು ಬಂದ ಸುಮಯ್ಯರವರ ತಂದೆ ಹಾಗೂ ತಾಯಿಯವರಿಗೆ ಕೈಯಿಂದ ದೂಡಿ ನಿಮಗೆ ಬುದ್ದಿ ಕಲಿಸುತ್ತೇನೆ ಎಂದು ಹೊರಟು ಹೋಗಿರುತ್ತಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
- ಸುಮಯ್ಯರವರು ಮದುವೆಯಾಗಿ 9 ವರ್ಷಗಳಾಗಿದ್ದು ಮುಂದಕ್ಕೆ ಸರಿಯಾಗಬಹುದು ಎಂದು ಭಾವಿಸಿ ಈ ವರೆಗೆ ಗಂಡ ಹಾಗೂ ಗಂಡನ ಮನೆಯವರ ಮೇಲೆ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ದೂರು ನೀಡದೇ ಇದ್ದು, ಇಷ್ಟು ವರ್ಷ ಗಳಾದರೂ ಸರಿಯಾಗದೇ ಇದ್ದುದರಿಂದ ಅವಾಚ್ಯ ಶಬ್ದಗಳಿಂದ ಬೈದು, ಜೀವ ಬೆದರಿಕೆ ಒಡ್ಡಿ, ಕೈಗಳಿಂದ ಹಾಗೂ ಬೆಲ್ಟ್‌ನಿಂದ ಹಲ್ಲೆ ಮಾಡಿ, ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿದ ಸುಮಯ್ಯ ರವರ ಗಂಡ ಆರೀಪ್ ಹಾಗೂ ಗಂಡನ ತಾಯಿ ಹಾಜಿರ, ತಂಗಿ ಉಮಿನ ಹಾಗೂ ರುಬಿನ, ತಮ್ಮ ಹರ್ಷಾದ್ ಇವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
- ಸುಮಯ್ಯ ರವರು ನೀಡಿದ ದೂರಿನಂತೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಕಲಂ: 115(2), 118(1), 85, 352, 351(2) ಜೊತೆಗೆ 3(5) BNS ರಂತೆ ಪ್ರಕರಣ ದಾಖಲಾಗಿದೆ.