
ಕುಂದಾಪುರ: ದಿನಾಂಕ:30-04-2025 (ಹಾಯ್ ಉಡುಪಿ ನ್ಯೂಸ್) ಹಳೆಯ ಅಪರಾಧ ಪ್ರಕರಣವೊಂದರಲ್ಲಿ ಆರೋಪಿಯಾಗಿರುವ ಕಾವ್ರಾಡಿ ನಿವಾಸಿಯೋರ್ವನು ನ್ಯಾಯಾಲಯಕ್ಕೆ ಹಾಜರಾಗದೆ ವಿದೇಶಕ್ಕೆ ಪರಾರಿಯಾಗಿದ್ದು ಇದೀಗ ದೇಶಕ್ಕೆ ವಾಪಾಸಾಗುತ್ತಿದ್ದಂತೆ ಕುಂದಾಪುರ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಕುಂದಾಪುರ,ಕಂಡ್ಲೂರು ಕಾವ್ರಾಡಿ ನಿವಾಸಿ ಮುಸೀನ್ ಸಾಹೇಬ್(29) ಎಂಬಾತನು ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಅಪರಾಧ ಪ್ರಕರಣವೊಂದರಲ್ಲಿ ಕಲಂ: 143, 147, 148, 341, 332, 323, 353, 504, 506, 307 ಜೊತೆಗೆ 149 ಐಪಿಸಿ ಮತ್ತು ಕಲಂ 4(1ಎ) MMRD (Mines And Minerals Regulation of Development) Act 1957&3(1), 43(2) Karnataka Mineral Consistent Rules 1994 ಕಾಯ್ದೆ. ಪ್ರಕರಣದ 20 ನೇ ಆರೋಪಿತನಾಗಿದ್ದು, ಪ್ರಸ್ತುತ ಈ ಪ್ರಕರಣವು ಮಾನ್ಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಕುಂದಾಪುರ ಇಲ್ಲಿ ಎಸ್.ಸಿ ನಂ: 514/2023 ರಂತೆ ವಿಚಾರಣೆಯಲ್ಲಿದೆ ಎಂದು ಪೊಲೀಸರು ದೂರಿನಲ್ಲಿ ತಿಳಿಸಿದ್ದಾರೆ.
ಆರೋಪಿ ಮುಸೀನ್ ಸಾಹೇಬ್ ನು ದಿನಾಂಕ 27/04/2017 ರಂದು ಷರತ್ತಿಗೊಳಪಟ್ಟು ಜಾಮೀನು ಪಡೆದುಕೊಂಡಿರುತ್ತಾನೆ ಎನ್ನಲಾಗಿದೆ .ಆ ಬಳಿಕ ದಿನಾಂಕ 29/11/2022ರ ನಂತರ ಪ್ರಕರಣದ ವಿಚಾರಣೆ ಯ ಸಮಯ ಆರೋಪಿಯು ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದು, ನ್ಯಾಯಾಲಯವು ಆರೋಪಿಯ ವಿರುದ್ದ ದಸ್ತಗಿರಿ ವಾರೆಂಟು ಹೊರಡಿಸುತ್ತಿದ್ದು, ಒಟ್ಟು 13 ಸಲ ದಸ್ತಗಿರಿ ವಾರೆಂಟನ್ನು ಹೊರಡಿಸಿದ್ದು, ಆರೋಪಿತ ತಲೆಮರೆಸಿಕೊಂಡಿದ್ದ ಕಾರಣ ದಸ್ತಗಿರಿಗೆ ಅನಾನುಕೂಲವಾಗಿರುತ್ತದೆ ಎಂದು ಪೊಲೀಸರು ದೂರಿನಲ್ಲಿ ದಾಖಲಿಸಿದ್ದಾರೆ.
ಆರೋಪಿತ ಮುಸೀನ್ ಸಾಹೇಬ್ ನು ಹೊರದೇಶಕ್ಕೆ ಹೋಗಿರಬಹುದಾಗಿ ಸಂಶಯ ಇದ್ದುದರಿಂದ ಆತನ ವಿರುದ್ದ ಎಲ್.ಓ.ಸಿ. ಯನ್ನು ತೆರೆಸಲಾಗಿರುತ್ತದೆ. ಅದರಂತೆ ಆರೋಪಿ ಮುಸೀನ್ ಸಾಹೇಬ್ ನು ದಿನಾಂಕ 28/04/2025 ರಂದು ಬೆಳಗಿನ ಜಾವ ಆರೋಪಿ ಮುಸೀನ್ ಗೋವಾ ರಾಜ್ಯದ ದಾಬೋಲಿಮ್ ಏರ್ ಪೋರ್ಟ್ ಗೆ ಬಂದಿಳಿದಿದ್ದುದಾಗಿ ಪೊಲೀಸರಿಗೆ ಮಾಹಿತಿ ಬಂದಿದ್ದು, ಅದರಂತೆ ದಿನಾಂಕ 28/04/2025 ರಂದು ಠಾಣಾ ಸಿಬ್ಬಂದಿಯವರು ಗೋವಾ ರಾಜ್ಯದ ದಾಬೋಲಿಮ್ ಏರ್ ಪೋರ್ಟ್ ಪೊಲೀಸ್ ಠಾಣೆಗೆ ತೆರಳಿ ಆರೋಪಿ ಮುಸೀನ್ ಸಾಹೇಬ್ ನನ್ನು ಮಧ್ಯಾಹ್ನ ವಶಕ್ಕೆ ಪಡೆದುಕೊಂಡು ಜೊತೆಯಲ್ಲಿ ಕರೆ ತಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಆರೋಪಿ ಮುಸೀನ್ ಸಾಹೇಬ್ ಈತನು 1 ನೇ ಎ.ಸಿ.ಜೆ ಮತ್ತು ಜೆ.ಎಮ್.ಎಫ್.ಸಿ ನ್ಯಾಯಾಲಯದಲ್ಲಿ ಪಡೆದುಕೊಂಡ ಜಾಮೀನಿನ ಷರತ್ತುಗಳನ್ನು ಉಲ್ಲಂಘಿಸಿ ಮಾನ್ಯ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಎಂದು ಪೊಲೀಸರು ದೂರು ದಾಖಲಿಸಿದ್ದಾರೆ.
ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಲಂ: 269 BNS ರಂತೆ ಪ್ರಕರಣ ದಾಖಲಾಗಿದೆ.