Spread the love

ಹಿರಿಯಡ್ಕ: ದಿನಾಂಕ :28-04-2025(ಹಾಯ್ ಉಡುಪಿ ನ್ಯೂಸ್) ಪೆರ್ಣಂಕಿಲ ರಸ್ತೆಯಲ್ಲಿ ಅಕ್ರಮ ಮರಳು ಸಾಗಣೆ ಮಾಡುತ್ತಿದ್ದ ಟಿಪ್ಪರ್ ವಾಹನವೊಂದನ್ನು ಹಿರಿಯಡ್ಕ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಪುನಿತ್‌ ಕುಮಾರ್‌  ಅವರು ವಶಪಡಿಸಿಕೊಂಡಿದ್ದಾರೆ.

ಹಿರಿಯಡ್ಕ ಪೊಲೀಸ್‌ ಠಾಣೆ ಪೊಲೀಸ್ ಉಪ ನಿರೀಕ್ಷಕರಾದ ಪುನೀತ್ ಕುಮಾರ್ ಅವರು ದಿನಾಂಕ 28/04/2025 ರಂದು ಸಂಜೆ ಠಾಣೆಯಲ್ಲಿರುವಾಗ ಉಡುಪಿ ತಾಲೂಕು, ಅಂಜಾರು ಗ್ರಾಮದ ಪಡ್ಡಂ ಓಂತಿಬೆಟ್ಟು –ಪೆರ್ಣಂಕಿಲ ರಸ್ತೆಯಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿರುವ ಬಗ್ಗೆ ಮಾಹಿತಿ ದಾರರಿಂದ ಮಾಹಿತಿ ಬಂದ ಮೇರೆಗೆ ಪುನೀತ್ ಕುಮಾರ್ ರವರು ಠಾಣೆಯ ಸಿಬ್ಬಂದಿಯವರೊಂದಿಗೆ  ಬಾಲಾಜಿ ಆಯಿಲ್‌ ಮಿಲ್‌ನಿಂದ ಸುಮಾರು 300 ಆಡಿ ದೂರ ಹೋದಾಗ ಪಡ್ಡಂ ಎಂಬಲ್ಲಿ ರಸ್ತೆ ಬದಿಯಲ್ಲಿ KA-21-A-4909 ನೇ 407 ಟಿಪ್ಪರ್‌ ವಾಹನವೊಂದು ನಿಂತಿರುವುದು ಕಂಡು ಬಂದಿದೆ ಎನ್ನಲಾಗಿದೆ, ಆ  ವಾಹನದಲ್ಲಿ ಸುಮಾರು 1½ ಯುನಿಟ್‌ನಷ್ಟು ಮರಳು ಲೋಡ್‌ ಆಗಿದ್ದು,  ಮರಳಿನ ಅಂದಾಜು ಮೌಲ್ಯ ರೂ 7500/- ರೂಪಾಯಿ ಆಗಬಹುದು.ವಾಹನದಲ್ಲಿ ಯಾವುದೇ ದಾಖಲಾತಿಗಳು ಕಂಡು ಬಂದಿರುವುದಿಲ್ಲ. ಹಾಗೂ ವಾಹನಕ್ಕೆ ಸಂಬಂಧಿಸಿದವರು ಯಾರೂ ಸ್ಥಳದಲ್ಲಿ ಹಾಜರಿರಲಿಲ್ಲ ಎನ್ನಲಾಗಿದೆ.

ಯಾರೋ ಆರೋಪಿಗಳು ಯಾವುದೇ ಪರವಾನಿಗೆ ಇಲ್ಲದೇ ಅಕ್ರಮ ಲಾಭಗಳಿಸುವ ಉದ್ದೇಶಗೋಸ್ಕರ ಅಕ್ರಮವಾಗಿ ಮರಳನ್ನು ಎಲ್ಲಿಂದಲೋ ಕಳವು ಮಾಡಿ ಸ್ವಂತ ಲಾಭಕ್ಕಾಗಿ ಮಾರಾಟ ಮಾಡುವ ಉದ್ಧೇಶದಿಂದ KA-21 A-4909 ನಂಬರ್‌ನ 407 ವಾಹನದಲ್ಲಿ ಮರಳನ್ನು ಸಾಗಾಟ ಮಾಡಿರುವುದು ಹಾಗೂ ಆರೋಪಿಗಳು ಲಘುವ್ಯವಸ್ಥಿತ ಅಪರಾಧದಲ್ಲಿ ತೊಡಗಿರುವುದು ಕಂಡುಬಂದಿರುವುದರಿಂದ ಆರೋಪಿತರು ಕೃತ್ಯಕ್ಕೆ ಬಳಸಿದ್ದ KA-21 A-4909 ನೇ ಟೆಂಪೋ ಅಂದಾಜು ಮೌಲ್ಯ 3 ಲಕ್ಷ ರೂ ಮತ್ತು ಮರಳನ್ನು ಸ್ಥಳದಲ್ಲಿ  ಸ್ವಾಧೀನ ಪಡಿಸಿಕೊಂಡಿದ್ದಾರೆ.

ಈ ಬಗ್ಗೆ ಹಿರಿಯಡ್ಕ ಪೊಲೀಸ್‌ ಠಾಣೆಯಲ್ಲಿ  ಕಲಂ: 303(2), 112 BNS ACT 4(1-a) 21(4) MMRD Act ರಂತೆ ಪ್ರಕರಣ ದಾಖಲಾಗಿದೆ.

error: No Copying!