
ಗಂಗೊಳ್ಳಿ: ದಿನಾಂಕ: 28-04-2025(ಹಾಯ್ ಉಡುಪಿ ನ್ಯೂಸ್) ಗಂಡ ಹಾಗೂ ಗಂಡನ ಮನೆಯವರು ವರದಕ್ಷಿಣೆ ಹಣಕ್ಕಾಗಿ ತಡರಾತ್ರಿ ಮನೆಯಿಂದ ಹೊರಹಾಕಿ ದೈಹಿಕ, ಮಾನಸಿಕ ಹಿಂಸೆ ನೀಡಿದ್ದಾರೆ ಎಂದು ಮಹಿಳೆಯೋರ್ವರು ಪೊಲೀಸರಿಗೆ ದೂರು ನೀಡಿದ್ದಾರೆ.
ಕುಂದಾಪುರ ತಾಲೂಕು ,ಹಂಗಳೂರು ಗ್ರಾಮದ ನಿವಾಸಿ ಸುನೀತಾ (26) ಅವರು ದಿನಾಂಕ 28/12/2023 ರಂದು ಮೊವಾಡಿಯ ನಿವಾಸಿಯಾದ ಪ್ರಾಕ್ಸನ್ ಡಾಯಸ್ ಎಂಬವನನ್ನು ಪಡುಕೋಣೆ ಚರ್ಚಿನಲ್ಲಿ ಕ್ರಿಸ್ಚಿಯನ್ ಸಂಪ್ರದಾಯದಂತೆ ಮದುವೆಯಾಗಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ನಂತರದ ದಿನಗಳಲ್ಲಿ ಸುನೀತಾ ರವರ ಗಂಡ ಪ್ರತಿ ದಿನವು ಕುಡಿದು ಬಂದು ಜಗಳ ಮತ್ತು ಹಿಂಸೆಯನ್ನು ನೀಡಿದ್ದು. ಮದುವೆಯಾದ 2 ತಿಂಗಳ ನಂತರ ಸುನೀತಾ ರವರ ಗಂಡ ವಿದೇಶಕ್ಕೆ ಕೆಲಸದ ನಿಮಿತ್ತ ಹೋಗಿದ್ದ ಸಮಯ ಸುನೀತಾ ರವರ ಅತ್ತೆ ಆಲಿಸ್ ಡಾಯಸ್ ಮತ್ತು ನಾದಿನಿಯಾದ ಪ್ಲಾವಿಯಾ ಅಲ್ಮೈಡಾ ಅವರು ಸುನೀತಾ ರವರು ಮನೆಯ ಎಲ್ಲಾ ಕೆಲಸವನ್ನು ಮಾಡುವುದಿಲ್ಲ ಹಾಗೂ ನಿನ್ನ ಮನೆಯಿಂದ ಏನು ತಂದಿಲ್ಲವೆಂದು ಹೇಳಿ ವಿಪರೀತ ಮಾನಸಿಕ ಕಿರುಕುಳ ಹಾಗೂ ಮಾನಸಿಕ ಹಿಂಸೆ ನೀಡಿ, ದಿನಾಂಕ 05/11/2024 ರಂದು ರಾತ್ರಿ 12:30 ಗಂಟೆಗೆ ಸುನೀತಾ ರವರು ಕುಂದಾಪುರ ತಾಲೂಕಿನ ತ್ರಾಸಿ ಗ್ರಾಮದ ಮೊವಾಡಿಯ ಡಾಯಸ್ ಹೌಸ್ ಎಂಬಲ್ಲಿನ ತನ್ನ ಗಂಡನ ಮನೆಯಲ್ಲಿರುವಾಗ ಆಲಿಸ್ ಡಾಯಸ್ ಮತ್ತು ಪ್ಲಾವಿಯಾ ಅಲ್ಮೈಡಾ ಸುನೀತಾ ರವರನ್ನು ಮನೆಯಿಂದ ಹೊರಗೆ ಹಾಕಿರುತ್ತಾರೆ ಹಾಗೂ ಸುನೀತಾರವರಿಗೆ ಗಂಡ ಪ್ರಾಕ್ಸನ್ ಡಾಯಸ್‌ರವರು ಕರೆ ಮಾಡಿ ನೀನು ನಿನ್ನ ತವರು ಮನೆಯಿಂದ ಏನು ತೆಗೆದುಕೊಂಡು ಬಂದಿದ್ದೀಯಾ? ನಿನ್ನ ಮನೆಯವರು ನನಗೆ ಏನು ಕೊಟ್ಟಿದ್ದಾರೆ ಎಂದು ಚುಚ್ಚು ಮಾತನಾಡಿ ಹಿಂಸಿಸಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಹಾಗೂ ಸುನೀತಾ ರವರ ಗಂಡ ದಿನಾಂಕ 14/02/2025 ರಂದು ವಿದೇಶದಿಂದ ವಾಪಾಸ್ಸು ಬಂದಿದ್ದು, ದಿನಾಂಕ 17/02/2025 ರಂದು ಸುನೀತಾ ರವರ ಗಂಡ ಸುನೀತಾ ರವರು ತವರು ಮನೆಯ ರೂಮನಲ್ಲಿರುವಾಗ ಸುನೀತಾ ರವರಿಗೆ ಹೊಡೆದಿರುತ್ತಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಕಲಂ: 85, 115(2), 352,3(5) BNS ರಂತೆ ಪ್ರಕರಣ ದಾಖಲಾಗಿದೆ.