Spread the love

ಉಡುಪಿ: ದಿನಾಂಕ : 24/04/2025 ( ಹಾಯ್ ಉಡುಪಿ ನ್ಯೂಸ್) ಗಂಡ ಹಾಗೂ ಗಂಡನ ಮನೆಯವರು ವರದಕ್ಷಿಣೆ ಯಾಗಿ ಹೆಚ್ಚಿನ ಹಣ, ವಾಹನಕ್ಕೆ  ಬೇಡಿಕೆ ಇಟ್ಟು ಮನೆಯಿಂದ ಹೊರ ಹಾಕಿ ಹಲ್ಲೆ ಮಾಡಿದ್ದಾರೆ ಎಂದು ಮಹಿಳೆ ಯೋರ್ವರು ಪೊಲೀಸರಿಗೆ ದೂರು ನೀಡಿದ್ದಾರೆ.

ಉಡುಪಿ ಕಡೆಕಾರ್‌  ನಿವಾಸಿ ರಕ್ಷಾ (27) ಎಂಬವರ ಹಾಗೂ 1ನೇ ಆರೋಪಿ ಪ್ರಜ್ವಲ್ ಎಂಬವನ ವಿವಾಹ ಕಿದಿಯೂರು ಶೇಷಶಯನ ಹಾಲ್‌ನಲ್ಲಿ ದಿನಾಂಕ -22-04-2024 ರಂದು ಗುರು ಹಿರಿಯರ ಸಮ್ಮುಖದಲ್ಲಿ ನಡೆದಿದ್ದು, ವಿವಾಹದ ಸಂಪೂರ್ಣ ಖರ್ಚನ್ನು ರಕ್ಷಾರವರ ಮನೆಯವರೇ ಭರಿಸಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಮದುವೆಯಾಗಿ 5-6 ತಿಂಗಳ ಸಮಯ ರಕ್ಷಾರವರು ಗಂಡನ ಮನೆಯಲ್ಲಿ ವಾಸವಾಗಿದ್ದು ಆ ಸಂದರ್ಭದಲ್ಲಿ ಪ್ರಜ್ವಲ್‌ (40), 2. ಭವಾನಿ, (74), 3.ಸೌಮ್ಯ, (36) 4.ಲಜಿತ್‌ (38) ಇಷ್ಟು ಜನ ಆರೋಪಿತರು ರಕ್ಷಾ ರವರನ್ನು ಹೀಯಾಳಿಸಿ, ನಿಂದಿಸಿ ಮನೆಯ ಎಲ್ಲಾ ಕೆಲಸಗಳನ್ನು  ರಕ್ಷಾ ರವರಿಂದಲೇ ಮಾಡಿಸಿ ರಕ್ಷಾರವರ ಮೇಲೆ ದರ್ಪ ತೋರಿಸಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಯಾವುದೆ ವಿಚಾರವನ್ನು  ರಕ್ಷಾರವರು 2 ನೇ ಆರೋಪಿ ಭವಾನಿ ಮತ್ತು 3ನೇ ಆರೋಪಿ ಸೌಮ್ಯ ರವರಲ್ಲಿ ಪ್ರಸ್ತಾವಿಸಿದಾಗ ಅವರು ಯಾವುದೇ ರೀತಿಯಲ್ಲಿ ಸ್ಪಂದಿಸದೇ 1ನೇ ಆರೋಪಿ ಗಂಡ ಪ್ರಜ್ವಲ್ ನೊಂದಿಗೆ ಸೇರಿಕೊಂಡು ಅವಾಚ್ಯ ಶಬ್ಧಗಳಿಂದ ನಿಂದಿಸಿ ಎಲ್ಲರೂ ಸೇರಿ ರಕ್ಷಾರವರ ಮೇಲೆ ಹಲ್ಲೆ ಮಾಡಿರುತ್ತಾರೆ ಎಂದಿದ್ದಾರೆ. ಆರೋಪಿತರುಗಳು ರಕ್ಷಾರವರಿಗೆ ಪದೇ ಪದೇ ಮನೆಬಿಟ್ಟು ಹೋಗುವಂತೆ ಹೆದರಿಸುತ್ತಿದ್ದು, ನೀನು ಈ ಮನೆಯಲ್ಲಿ ಇರಬೇಕಾದರೆ 16 ಲಕ್ಷ ರೂಪಾಯಿ ಹಣ ತಂದು ಕೊಡುವಂತೆ ಹಾಗೂ ಮನೆಗೆ ಬೇಕಾದ ಕಬಾಟು ಹಾಗೂ ರಕ್ಷಾರವರ ಮನೆಯಲ್ಲಿರುವ 1 ದ್ವಿಚಕ್ರ ವಾಹನವನ್ನು ತಂದು ಕೊಡಬೇಕೆಂದು ಪದೇ ಪದೇ ಪೀಡಿಸುತ್ತಿದ್ದರು ಎಂದು ದೂರಿದ್ದಾರೆ.

ಗಂಡ ಪ್ರಜ್ವಲ್ ನು ಹಲವಾರು ಬಾರಿ ರಕ್ಷಾರವರಿಗೆ ಬೆಲ್ಟ್‌‌ನಿಂದ ಹೊಡೆದಿದ್ದು, ಉಳಿದ ಆರೋಪಿತರುಗಳು ಗಂಡನಿಗೆ ಪ್ರೋತ್ಸಾಹಿಸುತ್ತಿದ್ದರು. ರಕ್ಷಾರವರಿಗೆ ಸರಿಯಾಗಿ ಊಟ ಉಪಚಾರವನ್ನು ನೀಡದೇ ಮೊಬೈಲ್‌ ಬಳಸಲು ನೀಡದೇ ಇದ್ದು, ರಕ್ಷಾರವರ ದುಡಿಮೆಯ ಸಂಬಳವನ್ನು  ಆರೋಪಿ ಗಂಡನಿಗೆ ನೀಡುವಂತೆ ಪೀಡಿಸಿ ಹಣವನ್ನು ತೆಗೆದುಕೊಳ್ಳುತ್ತಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.

ದಿನಾಂಕ 05/09/2024 ರಂದು ಗಂಡ ಹಾಗೂ ಗಂಡನ ಮನೆಯವರು ತೀವ್ರವಾದ ಬೆದರಿಕೆಯನ್ನು ನೀಡಿ ಬಲವಂತದಿಂದ ರಕ್ಷಾರವರನ್ನು ತಾಯಿ ಮನೆಯ ಹತ್ತಿರ ರಸ್ತೆಯಲ್ಲಿ ಬಿಟ್ಟು 16 ಲಕ್ಷ ರೂಪಾಯಿ, ಕಬಾಟು ಹಾಗೂ ವಾಹನವನ್ನುತೆಗೆದುಕೊಂಡು ಬಂದರೆ ನಿನ್ನನ್ನು ಕರೆದುಕೊಂಡು ಹೋಗುತ್ತೇವೆ ಎಂದು ರಸ್ತೆ ಮಧ್ಯದಲ್ಲಿ ಬಿಟ್ಟು ಹೋಗಿರುತ್ತಾರೆ ಎಂದಿದ್ದಾರೆ. ಆರೋಪಿಗಳು  ರಕ್ಷಾರವರನ್ನು ವಾಪಾಸು ಕರೆದುಕೊಂಡು ಹೋಗಲು ಬಾರದೇ ಇದ್ದುದರಿಂದ ದಿನಾಂಕ 16/03/2025 ರಂದು ರಕ್ಷಾರವರು ಅವರ ಗಂಡನ ಮನೆಗೆ ಹೋದಾಗ ರಕ್ಷಾರವರ ಗಂಡ ಬಾರದೇ ಇದ್ದು, ಆತನ ತಾಯಿ ಮತ್ತು ಸಹೋದರಿ ರಕ್ಷಾರವರನ್ನು ಮನೆಯ ಬಾಗಿಲಿನಲ್ಲೇ ತಡೆದು ನಿಲ್ಲಿಸಿ ಕುತ್ತಿಗೆಗೆ ಕೈ ಹಾಕಿ ಬಲವಾಗಿ ಹೊರಗೆ ದೂಡಿ ನೆಲಕ್ಕೆ ಬೀಳಿಸಿ ಇನ್ನೊಮ್ಮೆ ಕಾಲಿ ಕೈಯಲ್ಲಿ ಬಂದರೆ ಕೈ ಕಾಲು ಮುರಿದು ಕಳುಹಿಸುತ್ತೇವೆ ಜಾಗ್ರತೆ ಎಂದು ತುಳು ಭಾಷೆಯಲ್ಲಿ ಬೆದರಿಸಿ ನಿಂದಿಸಿ ಹಲ್ಲೆ ಮಾಡಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಬಗ್ಗೆ ಮಹಿಳಾ ಪೊಲೀಸ್‌ ಠಾಣೆಯಲ್ಲಿ  ಕಲಂ: 85, 118(1), 352, 351(2), ಜೊತೆಗೆ 3(5) BNS ರಂತೆ ಪ್ರಕರಣ ದಾಖಲಾಗಿದೆ.

error: No Copying!