
ಕೊಲ್ಲೂರು: ದಿನಾಂಕ:14-04-2025(ಹಾಯ್ ಉಡುಪಿ ನ್ಯೂಸ್) ಹೊಸೂರು ಗ್ರಾಮದ ನಿವಾಸಿ ಯೋರ್ವರ ಮನೆಯನ್ನು ಪೆಟ್ರೋಲ್ ಹಾಕಿ ಸುಡುವ ಪ್ರಯತ್ನ ಮಾಡಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಹೊಸೂರು ಗ್ರಾಮದ ನಿವಾಸಿ ಗಣಪು (62) ಎಂಬವರು ತಮ್ಮ ಸ್ವಾಧೀನದ ಸ್ಥಿರಾಸ್ತಿಯಲ್ಲಿ ವಾಸ್ತವ್ಯದಲ್ಲಿದ್ದು, ಬಾಳೆ, ತೆಂಗಿನ ಕೃಷಿ ಮಾಡಿಕೊಂಡಿದ್ದು, ರಕ್ಷಣಾ ತಡೆ ಬೇಲಿ ನಿರ್ಮಿಸಿ ಕೊಂಡಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ದಿನಾಂಕ:14-04-2025 ರಂದು ತಡರಾತ್ರಿ 01-00 ಗಂಟೆಗೆ ತಮ್ಮ ಮನೆಯಲ್ಲಿ ಮಲಗಿದವರು ಎಚ್ಚರಗೊಂಡು ನೋಡಿದಾಗ ಆರೋಪಿತರುಗಳಾದ 1)ನಾಗರತ್ನ , 2) ಸಿಂಗಾರಿ ಮತ್ತು ಇತರೆ 2-3 ಜನ ಗಂಡಸರು ಸ್ಥಳದಲ್ಲಿದ್ದು ಅವರು ಗಣಪುರವರ ಬೇಲಿ,ತೋಟದಲ್ಲಿದ್ದ ಕೃಷಿ, ಬಾಳೆ ಗಿಡಕ್ಕೆ ಮತ್ತು ಮನೆಗೆ ಪೆಟ್ರೋಲ್ ಹಾಕಿ ಬೆಂಕಿ ಹಾಕಿರುತ್ತಾರೆ ಎಂದಿದ್ದಾರೆ. ಆಗ ಗಣಪುರವರ ಬೊಬ್ಬೆಗೆ ಗಂಡಸರು ಓಡಿ ಹೋಗಿದ್ದು , ಸ್ಥಳದಲ್ಲಿದ್ದ ನಾಗರತ್ನ ತನ್ನ ಕೈಯಲ್ಲಿ ಪೆಟ್ರೋಲ್ ಹಾಗೂ ಸಿಂಗಾರಿ ತನ್ನ ಕೈಯಲ್ಲಿ ಕತ್ತಿ ಹಿಡಿದಿದ್ದು, ಸಿಂಗಾರಿ ಅಲ್ಲಿದ್ದ ಕೆಲ ಬಾಳೆ ಗಿಡಗಳನ್ನು ಕಡಿದು ಹಾಗೂ ಕಿತ್ತು ಹಾಕಿರುತ್ತಾರೆ. ಆ ಬಳಿಕ ಇಬ್ಬರು ನಿನಗೆ ಎಚ್ಚರವಾಗದೇ ಇದ್ದಿದ್ದರೇ ಸುಟ್ಟು ಕರಕಲಾಗುತ್ತಿದ್ದೆ. ಇನ್ನು ಮುಂದೆ ಕೂಡ ನಿನ್ನನ್ನು ಬೆಂಕಿ ಹಾಕಿ ಕೊಲೆ ಮಾಡದೇ ಬಿಡುವುದಿಲ್ಲ ಎಂಬುದಾಗಿ ಬೆದರಿಕೆ ಹಾಕಿ ಹೊರಟು ಹೋಗಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಇದರಿಂದ ಗಣಪುರವರಿಗೆ ಸುಮಾರು 60,000/- ರೂ ನಷ್ಟವಾಗಿರುತ್ತದೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಕಲಂ 326(f̧) 326(ģ) 329(3̧) 324(4̧) 352 . 351(3)̧ 109(1) R/w 3(5) BNS ಯಂತೆ ಪ್ರಕರಣ ದಾಖಲಾಗಿದೆ.