Spread the love

ಉಡುಪಿ: ದಿನಾಂಕ:13-04-2025(ಹಾಯ್ ಉಡುಪಿ ನ್ಯೂಸ್) ನಗರದ ಹರಿಶ್ಚಂದ್ರ ಮಾರ್ಗದ ನಿವಾಸಿ ಹೋಟೆಲ್ ಉದ್ಯಮಿ ಅಜಿತ್ ಕುಮಾರ್ (48)  ಎಂಬವರು ಕಾಣೆಯಾಗಿದ್ದಾರೆಂದು ದೂರು ದಾಖಲಾಗಿದೆ.

ಉಡುಪಿ ತಾಲ್ಲೂಕು ಶಿವಳ್ಳಿ ಗ್ರಾಮದ ತೆಂಕಪೇಟೆಯಲ್ಲಿ ಶ್ರೀರಾಮ ಭವನ ಎಂಬ ಹೆಸರಿನ ಹೋಟೆಲ್‌ ವ್ಯವಹಾರವನ್ನು ನಡೆಸಿಕೊಂಡಿದ್ದ  ಹೆಸರಾಂತ ಹೊಟೇಲ್ ಉದ್ಯಮಿ ಅಜಿತ್‌ ಕುಮಾರ್‌ ರವರು ದಿನಾಂಕ:12-04-2025 ರಂದು ಸಂಜೆ 3:45 ಗಂಟೆಗೆ  ತಿಂಡಿಯನ್ನು ಪಾರ್ಸೆಲ್‌ ಕೊಡಲು ಅವರ  ಆಕ್ಟೀವ ಹೋಂಡಾ ಸ್ಕೂಟರ್‌ ನಲ್ಲಿ ಹೋದವರು ಹೋಟೆಲ್‌ ಗೆ ವಾಪಸ್ಸು ಬಾರದೇ ಇದ್ದಾಗ ಅವರ ಪತ್ನಿ ಶ್ರೀಮತಿ ಲಕ್ಷ್ಮೀ ಅವರು ಅಜಿತ್‌ ಕುಮಾರ್‌ ರವರ ಮೊಬೈಲ್‌ ಗೆ ಕರೆಮಾಡಿದಾಗ ನಂಬರ್‌ ಸ್ವಿಚ್‌ ಆಫ್‌ ಬರುತ್ತಿದ್ದು, ನಂತರ ಸಂಬಂಧಿಕರೊಂದಿಗೆ ಎಲ್ಲಾ ಕಡೆಗಳಲ್ಲಿ ಹುಡುಕಾಟ ನಡೆಸಿದಾಗ ಸಿಕ್ಕಿರುವುದಿಲ್ಲ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ. ಅವರ ಸ್ಕೂಟರ್ ಉಡುಪಿ ಬಸ್ ನಿಲ್ದಾಣದ ಬಳಿಯಲ್ಲಿ ದೊರೆತಿದೆ ಎನ್ನಲಾಗಿದೆ.

ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ  ಕಲಂ: ಗಂಡಸು ಕಾಣೆಯಂತೆ ಪ್ರಕರಣ ದಾಖಲಾಗಿದೆ.

error: No Copying!