Spread the love

ಮಲ್ಪೆ: ದಿನಾಂಕ :11-04-2025 (ಹಾಯ್ ಉಡುಪಿ ನ್ಯೂಸ್)  ಹೊಸ ಮನೆ ರಚನೆ ಮಾಡುವ ವ್ಯವಹಾರದಲ್ಲಿ ಪಾಲುದಾರರಾಗಿ ಸುವುದಾಗಿ ನಂಬಿಸಿ ಕೆ ಎ ಮಲ್ಲಿಕಾರ್ಜುನಯ್ಯ ಎಂಬವರಿಗೆ ಮೂರು ಜನರು  ಸೇರಿ ಹದಿನೈದು ಲಕ್ಷ ರೂಪಾಯಿ ವಂಚಿಸಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

ವಿನಾಯಕ ನಗರ, ದಾವಣಗೆರೆ ನಿವಾಸಿ ಕೆ ಎ ಮಲ್ಲಿಕಾರ್ಜುನಯ್ಯ ಎಂಬವರು ಮಲ್ಪೆಯ  ತೊಟ್ಟಂ ಎಂಬಲ್ಲಿ ತನ್ನ ಹೆಂಡತಿ ಶ್ರೀಮತಿ ಸವಿತ ಮತ್ತು ಮಗಳೊಂದಿಗೆ ವಾಸವಾಗಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಆ ಸಮಯ ಅವರಿಗೆ ಆರೋಪಿತ 1.ಸದಾಕಾತುಲ್ಲಾ 2.ಹವ್ವಾ ಇಲಿಯಾಸ್‌ 3.ಸುನೈನಾ ಎಂಬವರ ಪರಿಚಯವಾಗಿದ್ದು,  ಆರೋಪಿತರು ಮಲ್ಲಿಕಾರ್ಜುನಯ್ಯ ರ ಹೆಂಡತಿಯ ಸ್ನೇಹ ಬೆಳೆಸಿ ಆರೋಪಿಗಳ ಹೊಸ ಮನೆ ರಚನೆಯ ವ್ಯವಹಾರಕ್ಕೆ  ಹಣ  ಹೂಡಿಕೆ ಮಾಡಿದರೆ ಬೇಗ ಶ್ರೀಮಂತರಾಗಬಹುದು ಎಂದು  ನಂಬಿಸಿ ಕಟ್ಟಡದ ಪ್ರೋಜೆಕ್ಟ್‌ ಪ್ಲಾನ್‌  ನಕ್ಷೆ ತೋರಿಸಿ ಮಲ್ಲಿಕಾರ್ಜುನಯ್ಯ ಮತ್ತು  ಅವರ  ಹೆಂಡತಿಗೆ  ನಂಬಿಕೆ ಬರುವಂತೆ ಮಾಡಿ ಅವರಿಂದ ಒಟ್ಟು ರೂ.15,00,000/- ಹಣವನ್ನು ಪಡೆದು ಹಣವನ್ನು  ವಾಪಾಸು ನೀಡದೇ ಇದ್ದು, ಮಲ್ಲಿಕಾರ್ಜುನಯ್ಯ ಮತ್ತು ಅವರ  ಹೆಂಡತಿ  ಹಣವನ್ನು ವಾಪಾಸು  ನೀಡುವಂತೆ ಕೇಳಿದಾಗ  1 ನೇ ಆರೋಪಿತ ಸದಾಕಾತುಲ್ಲಾನು  2 ಚೆಕ್‌ ಅನ್ನು ನೀಡಿದ್ದು, ಮಲ್ಲಿಕಾರ್ಜುನಯ್ಯ ರು ಬ್ಯಾಂಕಿಗೆ ನೀಡಿದಾಗ ಸಾಕಷ್ಟು ಬ್ಯಾಲೆನ್ಸ್‌ ಇಲ್ಲದೇ  ವಾಪಾಸು  ಬಂದಿರುತ್ತದೆ ಎಂದಿದ್ದಾರೆ. 

ಬಳಿಕ ಆರೋಪಿತರುಗಳು ಉಡುಪಿಯ ಮಾಂಡೊವಿ ಕೋರ್ಟ್‌  ಕಟ್ಟಡದ ಮುಂಭಾಗದಲ್ಲಿ ಕಾಣಸಿಕ್ಕಿದ್ದು, ಅವರಲ್ಲಿ ಮಲ್ಲಿಕಾರ್ಜುನಯ್ಯ  ಮತ್ತು ಅವರ  ಹೆಂಡತಿ  ಹಣವನ್ನು ವಾಪಾಸು  ನೀಡುವಂತೆ ಕೇಳಿದಾಗ  ಆರೋಪಿತರುಗಳು ಅವಾಚ್ಯವಾಗಿ ಬೈದು ಬೆದರಿಕೆ ಹಾಕಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಆರೋಪಿತರು  ಮಲ್ಲಿಕಾರ್ಜುನಯ್ಯ ಮತ್ತು ಅವರ  ಹೆಂಡತಿಯನ್ನು  ನಂಬಿಸಿ ಅವರಿಂದ  ಹಣವನ್ನು ಪಡೆದು ಈ ವರೆಗೆ ವಾಪಾಸು  ನೀಡದೇ  ನಂಬಿಕೆ  ದ್ರೋಹ  ಮತ್ತು  ವಂಚನೆ  ಮಾಡಿದ್ದಲ್ಲದೆ ಅವಾಚ್ಯವಾಗಿ ಬೈದು ಕೊಲ್ಲುವುದಾಗಿ ಜೀವ  ಬೆದರಿಕೆ ಹಾಕಿರುತ್ತಾರೆ ಎಂದು ದೂರು ನೀಡಿದ್ದಾರೆ.

ಈ ಬಗ್ಗೆ ನೀಡಿರುವ ಖಾಸಗಿ ದೂರಿನಂತೆ ಮಲ್ಪೆ ಪೊಲೀಸ್‌ ಠಾಣೆಯಲ್ಲಿ ಕಲಂ:74, 111(1), 111(3), 116(6), 112, 115(2), 131, 292, 308, 314, 316(2), 318(2), 318(3), 318(4), 324(5), 351(2), 352 ಜೊತೆಗೆ 3(5) BNS ನಂತೆ ಪ್ರಕರಣ ದಾಖಲಾಗಿದೆ.

error: No Copying!