Spread the love
  • ಉಡುಪಿ: ದಿನಾಂಕ : 10-04-2025 (ಹಾಯ್ ಉಡುಪಿ ನ್ಯೂಸ್) ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸಮಾಡಿ ಕೊಂಡಿರುವ ಮಹಿಳೆಯೋರ್ವರಿಗೆ ಸರ್ಕಾರಿ ಕೆಲಸ ತೆಗೆಸಿ ಕೊಡುವುದಾಗಿ ನಂಬಿಸಿ ವ್ಯಕ್ತಿಯೋರ್ವ 1,65000 ರೂಪಾಯಿ ವಂಚನೆ ನಡೆಸಿದ್ದಾನೆ ಎಂದು ವಂಚನೆಗೊಳಗಾದ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ.
  • ಹೆಬ್ರಿ ನಿವಾಸಿ ರೇವತಿ (31) ಎಂಬವರು ಉಡುಪಿಯ ಆದರ್ಶ ಆಸ್ಪತ್ರೆಯಲ್ಲಿ ನರ್ಸಿಂಗ್ ಕೆಲಸವನ್ನು ಮಾಡಿಕೊಂಡಿದ್ದು, ಹೀಗೆ ಕೆಲಸ ಮಾಡಿಕೊಂಡಿರುವಾಗ ಒಂದು ದಿವಸ ಪಡುಬಿದ್ರಿಯ ಸಚಿನ್ ಎಂಬಾತನು ಅವರ ಅಮ್ಮನನ್ನು ಚಿಕಿತ್ಸೆಗಾಗಿ ಆದರ್ಶ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲುಮಾಡಿದ್ದು, ಆ ಸಮಯ ರೇವತಿ ರವರಿಗೆ ಸಚಿನ್ ಎಂಬಾತನ ಪರಿಚಯವಾಗಿತ್ತು ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
  • ಸಚಿನ್ ನು ಸರ್ಕಾರಿ ಉದ್ಯೋಗ ಕೊಡಿಸುತ್ತೇನೆ ಎಂದು ರೇವತಿ ರವರನ್ನು ನಂಬಿಸಿ ಮೇಲಾಧಿಕಾರಿಯವರಿಗೆ ಹಣ ಕೊಡಬೇಕಾಗಿದೆ ಎಂದು ಹೇಳಿ ರೇವತಿ ರವರಿಂದ ಹಂತ-ಹಂತವಾಗಿ ದಿನಾಂಕ 11/04/2024 ರಿಂದ ದಿನಾಂಕ 20/05/2024 ರ ನಡುವೆ ಸುಮಾರು 1,65,000/-ಲಕ್ಷ ಹಣ ಹಾಗೂ ಅವರ ದಾಖಲಾತಿಗಳಾದ ಪಾನ್ ಕಾರ್ಡ್, ಆಧಾರ್ ಕಾರ್ಡ್, ಜಾತಿ ಆದಾಯ ಪ್ರಮಾಣಪತ್ರ, ಹತ್ತನೇ ತರಗತಿ, ದ್ವಿತಿಯ ಪಿಯುಸಿ ಅಂಕಪಟ್ಟಿ ಹಾಗೂ ನರ್ಸಿಂಗ್ ನ ಮೂಲದಾಖಲಾತಿಗಳನ್ನು ಪಡೆದುಕೊಂಡು ಈವರೆಗೂ ಯಾವುದೇ ಸರ್ಕಾರಿ ಉದ್ಯೋಗವನ್ನು ಕೊಡಿಸದೇ, ಹಣ ಮತ್ತು ದಾಖಲಾತಿಗಳನ್ನು ವಾಪಸ್ಸು ಹಿಂದಿರುಗಿಸದೇ ನಂಬಿಸಿ, ವಂಚನೆ ಹಾಗೂ ಮೋಸ ಮಾಡಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
  • ರೇವತಿ ರವರು ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ  ಕಲಂ: 406, 417,420 IPC ಯಂತೆ ಪ್ರಕರಣ ದಾಖಲಾಗಿದೆ.
error: No Copying!