Spread the love

ಕುಂದಾಪುರ: ದಿನಾಂಕ : 08/04/2025 (ಹಾಯ್ ಉಡುಪಿ ನ್ಯೂಸ್) ಕೋಣಿ ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ಆಟ ನಡೆಸುತ್ತಿದ್ದ ವ್ಯಕ್ತಿಯನ್ನು ಕುಂದಾಪುರ ಪೊಲೀಸ್‌ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ  ನಂಜಾನಾಯ್ಕ್‌ ಎನ್  ಅವರು ಬಂಧಿಸಿದ್ದಾರೆ.

ಕುಂದಾಪುರ ಪೊಲೀಸ್ ಠಾಣೆ ಪೊಲೀಸ್ ಉಪ ನಿರೀಕ್ಷಕರಾದ ನಂಜಾ ನಾಯ್ಕ್ ಎನ್ ಅವರಿಗೆ ದಿನಾಂಕ:07-04-2025 ರಂದು ಕುಂದಾಪುರ ಕೋಣಿ ಗ್ರಾಮದ ಪೂರ್ಣಿಮಾ ಬಾರ್‌ ಮತ್ತು ರೆಸ್ಟೋರೆಂಟ್ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಓರ್ವ ವ್ಯಕ್ತಿ ಮಟ್ಕಾ ಜುಗಾರಿ ಆಡುತ್ತಿರುವುದಾಗಿ ಬಂದ ಸಾರ್ವಜನಿಕ ಮಾಹಿತಿಯಂತೆ ಕೂಡಲೇ ಮಾಹಿತಿ ಬಂದ ಸ್ಥಳಕ್ಕೆ ದಾಳಿ ನಡೆಸಿದ್ದಾರೆ.

ದಾಳಿ ಮಾಡಿದಾಗ ಅಲ್ಲಿ ಮಟ್ಕಾ ಜುಗಾರಿ ಆಟ ನಡೆಸುತ್ತಿದ್ದ ವ್ಯಕ್ತಿಯನ್ನು ಸಿಬ್ಬಂದಿಯವರ ಸಹಾಯದಿಂದ ಹಿಡಿದು ಬಂಧಿಸಿ ಆತನ ಹೆಸರು ವಿಚಾರಣೆ ನಡೆಸಿದಾಗ ತನ್ನ ಹೆಸರು ರಮೇಶ ತನಗೆ ಮಟ್ಕಾ ಜುಗಾರಿ ಸಂಗ್ರಹಿಸಲು ಕೋಣಿಯ ಅಶೋಕ ಎಂಬಾತ ತಿಳಿಸಿದ್ದು,ಅಲ್ಲದೆ ಸಂಗ್ರಹಿದ ಹಣಕ್ಕೆ ತನಗೆ ಕಮಿಷನ್‌ ನೀಡುತ್ತಿರುವುದಾಗಿ ತಿಳಿಸಿದ್ದಾನೆ ಎನ್ನಲಾಗಿದೆ.  ಸ್ಥಳದಲ್ಲಿ ಜುಗಾರಿ ಆಟಕ್ಕೆ ಸಂಬಂದಿಸಿದ ನಗದು ರೂಪಾಯಿ 1780/- ರೂಪಾಯಿ ಹಾಗೂ ಮಟ್ಕಾ ಸಂಖ್ಯೆ ಬರೆದ ಚೀಟಿ, ಬಾಲ್‌ಪೆನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.

ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣೆಯಲ್ಲಿ  ಕಲಂ:112 BNS 78(I) (III) KP ACT ರಂತೆ ಪ್ರಕರಣ ದಾಖಲಾಗಿದೆ.

error: No Copying!