Spread the love

ಪಡುಬಿದ್ರಿ:  ದಿನಾಂಕ:13-04-2025(ಹಾಯ್ ಉಡುಪಿ ನ್ಯೂಸ್) ಹಳೆಯ ಸ್ನೇಹಿತನ ಸಹವಾಸ ಬಿಟ್ಟದ್ದಕ್ಕೆ ಸಿಟ್ಟು ಗೊಂಡು ಕೊಲೆಗೆ ಯತ್ನಿಸಿದ್ದಾನೆಂದು ಗಾಯಗೊಂಡ ಸ್ನೇಹಿತ ಪೊಲೀಸರಿಗೆ ದೂರು ನೀಡಿದ್ದಾರೆ.

ಶೇಖ್‌ ಮುನಾಫ್‌ ಸಾಹೇಬ್‌ ಎಂಬವರು ಹಾಗೂ ಆರೋಪಿ ಆರೀಪ್‌ ಈತನು ಈ ಹಿಂದೆ ಸ್ನೇಹಿತರಾಗಿದ್ದು, ನಂತರ ಇತ್ತೀಚೆಗೆ ಸುಮಾರು 5 ವರ್ಷಗಳಿಂದ ಶೇಖ್ ಮುನಾಫ್ ಸಾಹೇಬ್  ಮದುವೆಯಾಗಿ ಹೆಂಡತಿಯೊಂದಿಗೆ ವಾಸವಾಗಿದ್ದು ಆರೋಪಿ ಆರೀಪ್‌ ನ ಸಹವಾಸವನ್ನು ಬಿಟ್ಟು ಚಾಲಕ ಕೆಲಸ ಮಾಡಿಕೊಂಡಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಇದರಿಂದ ದ್ವೇಷಗೊಂಡ ಆರೋಪಿ ಆರೀಪ್‌ ನು ಶೇಖ್ ಮುನಾಫ್ ಸಾಹೇಬ್ ರಲ್ಲಿ ತನ್ನೊಂದಿಗೆ ಬಾರದಿದ್ದರೆ ಕೊಲ್ಲುವುದಾಗಿ ಹೆದರಿಸುತ್ತಿದ್ದು, ಅದಕ್ಕೆ ಶೇಖ್ ಮುನಾಫ್ ಸಾಹೇಬ್ ನು ಒಪ್ಪದೆ ಇದ್ದುದಕ್ಕೆ ಆರೋಪಿ ಆರೀಪ್‌ ನು ದ್ವೇಷಗೊಂಡು ಶೇಖ್ ಮುನಾಫ್ ಸಾಹೇಬ್ ರನ್ನು ಕೊಲ್ಲುವ ಉದ್ದೇಶದಿಂದ ದಿನಾಂಕ: 05.04.2025 ರಂದು ಶೇಖ್ ಮುನಾಫ್ ಸಾಹೇಬ್ ತನ್ನ ಮನೆಯ ಕಡೆಯಿಂದ ಕಾಂಜರಕಟ್ಟೆಗೆ ಟಿಪ್ಪರ್‌ ಅನ್ನು ಚಲಾಯಿಸಿಕೊಂಡು ಹೋಗುತ್ತಿರುವಾಗ ಹಿಂದಿನಿಂದ ಆರೋಪಿ ಆರೀಪ್‌ ಈತನು ಶೇಖ್ ಮುನಾಫ್ ಸಾಹೇಬ್ ರನ್ನು ಕೆ.ಎ.20.ಇ.ಹೆಚ್.8413 ನೇ ದ್ವಿಚಕ್ರ ವಾಹನದಲ್ಲಿ ಪಾಲೋ ಮಾಡಿಕೊಂಡು ಬಂದು ಸಂಜೆ 6 ಗಂಟೆಗೆ ಕಾಪು ತಾಲೂಕು ಎಲ್ಲೂರು ಗ್ರಾಮದ ಬೆಳ್ಳಿಬೆಟ್ಟು ಬಳಿ ಶೇಖ್ ಮುನಾಫ್ ಸಾಹೇಬ್ ರ ಲಾರಿಗೆ ದ್ವಿಚಕ್ರ ವಾಹನವನ್ನು ಅಡ್ಡಇಟ್ಟು, ತಡೆದುನಿಲ್ಲಿಸಿ, ಶೇಖ್ ಮುನಾಫ್ ಸಾಹೇಬ್ ರನ್ನು ಲಾರಿಯಿಂದ ಕೆಳಗೆ ಎಳೆದು ಹಾಕಿ ಆತನ ಕೈಯಲ್ಲಿದ್ದ ಚೂರಿಯಿಂದ ಶೇಖ್ ಮುನಾಫ್ ಸಾಹೇಬ್ ರನ್ನು ಕೊಲ್ಲುವ ಉದ್ದೇಶದಿಂದ ಕೈಯ್ಯಲ್ಲಿದ್ದ ಚೂರಿಯಿಂದ ಶೇಖ್ ಮುನಾಫ್ ಸಾಹೇಬ್ ರಿಗೆ ತಿವಿಯಲು ಮುಂದಾದಾಗ ಶೇಖ್ ಮುನಾಫ್ ಸಾಹೇಬ್ ತಪ್ಪಿಸಿಕೊಂಡಾಗ ಚೂರಿಯಿಂದ ಶೇಖ್ ಮುನಾಫ್ ರ ಎರಡೂ ಕೈಗಳಿಗೆ ಗೀಚಿದ ಗಾಯ ಆಗಿದ್ದು ನಂತರ ಆರೋಪಿ ಆರೀಫ್ ನು ಶೇಖ್ ಮುನಾಫ್ ರಿಗೆ ನಿನ್ನನ್ನು ಕೊಲ್ಲದೆ ಬಿಡುವುದಿಲ್ಲ ಎಂದು ಚೂರಿ ಬೀಸುತ್ತಾ ಬಂದಾಗ ಶೇಖ್ ಮುನಾಫ್ ರು ಓಡಿಹೋಗಿದ್ದು, ಆಗ ಆರೋಪಿ ಆರೀಪನು ಜೋರಾಗಿ ಕೂಗುತ್ತಾ ಶೇಖ್ ಮುನಾಫ್ ರಿಗೆ ನಿನ್ನ ಲಾರಿಯನ್ನು ಸುಟ್ಟು ಹಾಕುತ್ತೇನೆ ಎಂದು ಹೇಳುತ್ತಿದ್ದು, ಸ್ಥಳದಲ್ಲಿ ಜನ ಸೇರುವುದನ್ನು ಕಂಡು ಆರೋಪಿ ಆರೀಫ್ ನು ಅಲ್ಲಿಗೆ ಬಂದಿದ್ದ ದ್ವಿಚಕ್ರ ವಾಹನದಲ್ಲಿ ಅಲ್ಲಿಂದ ಹೊರಟು ಹೋಗಿದ್ದಾನೆ ಎನ್ನಲಾಗಿದೆ .

ಗಾಯಗೊಂಡ ಶೇಖ್ ಮುನಾಫ್ ಸಾಹೇಬ್ ರವರು ಉಡುಪಿ ಅಜ್ಜರಕಾಡು ಸರಕಾರಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಂಡಿರುವುದಾಗಿ ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಕಲಂ: 126(2), 115(2), 118(1), 352, 351(2), 109 BNS ನಂತೆ ಪ್ರಕರಣ ದಾಖಲಾಗಿದೆ.

error: No Copying!