
- ಕೋಟ: ದಿನಾಂಕ :05-04-2025(ಹಾಯ್ ಉಡುಪಿ ನ್ಯೂಸ್) ಮರಳು ಅಕ್ರಮ ದಂಧೆ ನಡೆಸುತ್ತಿರುವವರು ಜೈಲಿನಲ್ಲಿರುವ ಕ್ರಿಮಿನಲ್ ಗಳ ಹೆಸರಿನಲ್ಲಿ ಫೋನ್ ಕರೆ ಮಾಡಿಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಪ್ರವೀಣ್ ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ.
- ಬಾರ್ಕೂರು ಹೊಸಾಳ ನಿವಾಸಿ ಪ್ರವೀಣ್ ಎಂಬವರಿಗೆ ಕಳೆದ ಪೆಬ್ರವರಿ ತಿಂಗಳಲ್ಲಿ ರಾತ್ರಿ ಸಮಯದಲ್ಲಿ ಅವರ ಪೋನ್ ನಂಬ್ರ ಕ್ಕೆ ಕರೆ ಮಾಡಿದ ವ್ಯಕ್ತಿಯು ನಾನು ಹರೀಶ್ ರೆಡ್ಡಿ ಕಾರವಾರ ಜೈಲಿನಿಂದ ಮಾತಾಡುತ್ತಿದ್ದೇನೆ ,ನೀನು ಅರ್ಜುನ್ ನಾಯರಿ, ನಿತಿನ್ ರೈ, ಜೋಸೆಫ್ ರವರಿಗೆ ಮರಳುಗಾರಿಕೆ ಮತ್ತು ಮರಳು ಯಾರ್ಡ್ ಮಾಡುವಲ್ಲಿ ಸುಖಾ ಸುಮ್ಮನೆ ತೊಂದರೆ ನೀಡಿದಲ್ಲಿ ಸರಿ ಇರುವುದಿಲ್ಲ. ನೀನು ನಿನ್ನ ಕೆಲಸವನ್ನು ಮಾಡಿಕೊಂಡು ಹೋಗು ಊರು ಉದ್ಧಾರ ಮಾಡುವ ಉಸಾಬರಿ ನಿನಗೆ ಬೇಡ ಎಂದು ಹರೀಶ್ ರೆಡ್ಡಿ ಎಂಬ ಹೆಸರಲ್ಲಿ ಪೋನ್ ಮಾಡಿದ ವ್ಯಕ್ತಿ ಹೇಳಿದ್ದಾನೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
- ಹೀಗೆ ಅಧಿಕ ಪ್ರಸಂಗ ಮಾಡುತ್ತ ಇದ್ದರೆ ಪರಿಣಾಮ ನೆಟ್ಟಗಿರುವುದಿಲ್ಲ. ನಿನಗೆ ಜೀವದ ಮೇಲೆ ಆಸೆ ಇದೆಯಾ ಇಲ್ಲವಾ ಎಂದು ಹೇಳಿದಾಗ ಪ್ರವೀಣ್ ರವರು ಫೋನ್ ಕರೆಯನ್ನು ಡಿಸ್‌ಕನೆಕ್ಟ್ ಮಾಡಿರುತ್ತಾರೆ ಎಂದಿದ್ದಾರೆ. ಪ್ರವೀಣ್ ರವರಿಗೆ ದಿನಾಂಕ 06/03/2025 ರಂದು ಬೆಳಿಗ್ಗೆ ಪುನಃ ಪೋನ್ ಕಾಲ್ ಬಂದಿರುತ್ತದೆ ಹಾಗೂ ದಿನಾಂಕ 02/04/2025 ರಂದು ರಾತ್ರಿ 8.00 ಗಂಟೆಗೆ ಪುನಃ ಕರೆ ಮಾಡಿದ್ದು, ಪ್ರವೀಣ್ ರವರು ಕರೆಯನ್ನು ಸ್ವೀಕರಿಸಿದಾಗ ನಮ್ಮವರ ಎಲ್ಲ ಕೆಲಸ ಸುಸೂತ್ರವಾಗಿ ನಡೆಯುತ್ತಿದೆಯಲ್ಲ ಅಂತ ಕೇಳಿರೋದು ಅಲ್ಲದೆ ಹರೀಶ್ ರೆಡ್ಡಿ ಎಂದು ಫೋನ್ ಮಾಡಿದವನು ಹಾಗಿದ್ದರೆ ನಾವೆಲ್ಲ ಜೈಲಿನಿಂದ ನಿಮಗೆಲ್ಲ ಕರೆ ಮಾಡಿದರೆ ನಾವು ತೊಂದರೆಗೆ ಒಳಗಾಗುತ್ತೇವೆ ಎಂದು ಹೇಳಿ ಕರೆಯನ್ನು ಡಿಸ್ ಕನೆಕ್ಟ್ ಮಾಡಿರುತ್ತಾನೆ ಎಂದಿದ್ದಾರೆ. ಪುನಃ ಅದೇ ದಿನ ರಾತ್ರಿ ಪೋನ್ ಕರೆ ಮಾಡಿದ್ದು ಪ್ರವೀಣ್ ರವರು ಅದನ್ನು ರೀಸಿವ್ ಮಾಡಿ ಇನ್ನು ಮುಂದಕ್ಕೆ ಕರೆ ಮಾಡಬೇಡಿ ಎಂದು ಹೇಳಿರುತ್ತಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
- ಈ ಪ್ರಕರಣದಲ್ಲಿ ಪ್ರವೀಣ್ ರವರಿಗೆ ಅರ್ಜುನ್ ನಾಯರಿ ನಿತಿನ್ ರೈ ಮತ್ತು ಜೋಸೆಫ್ ರವರು ಹಲವಾರು ವ್ಯಕ್ತಿಗಳಿಂದ ಕರೆ ಮಾಡಿಸಿ ಜೀವ ಬೆದರಿಕೆ ಹಾಕಿಸಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
- ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಕಲಂ: 351(2)BNS ನಂತೆ ಪ್ರಕರಣ ದಾಖಲಾಗಿದೆ.
