Spread the love

ಮಲ್ಪೆ: ದಿನಾಂಕ: 04/04/2025 (ಹಾಯ್ ಉಡುಪಿ ನ್ಯೂಸ್) ಬಂದರಿನಲ್ಲಿ ಮೀನು ಕಳ್ಳತನ ನಡೆಸುತ್ತಿದ್ದ ಇಬ್ಬರು ಅಪರಿಚಿತ ವ್ಯಕ್ತಿಗಳನ್ನು ‌ ಮೀನುಗಾರರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಕೊಡವೂರು ಗ್ರಾಮದ ನಿವಾಸಿ ಸುಭಾಸ್ ಎಸ್.ಮೆಂಡನ್ (50) ಮತ್ತು ಕಿಶೋರ್ ಡಿ ಸುವರ್ಣ ಎಂಬವರು ದಿನಾಂಕ: 04-04-2025 ರಂದು ಮಧ್ಯಾಹ್ನ  ಮಲ್ಪೆ ಬಂದರಿನ ಮುಖ್ಯ ದ್ವಾರದ ಬಳಿ ಇಬ್ಬರು ಅಪರಿಚಿತ ವ್ಯಕ್ತಿಗಳು ಒಂದು ಬಿಳಿ ಪ್ಲಾಸ್ಟಿಕ್ ಗೋಣಿ ಚೀಲದಲ್ಲಿ ಏನೋ ವಸ್ತುಗಳನ್ನು ತುಂಬಿಸಿಕೊಂಡು ವೇಗವಾಗಿ ನಡೆದುಕೊಂಡು ಹೋಗುತ್ತಿರುವುದನ್ನು ಕಂಡು ಸಂಶಯಗೊಂಡು ಅವರನ್ನು ನಿಲ್ಲಿಸಿ ವಿಚಾರಿಸಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಅವರು ಚೀಲವನ್ನು ಪರಿಶೀಲಿಸಿದಾಗ ಅದರಲ್ಲಿ ಬಿಳಿ ಮತ್ತು ಕಪ್ಪು ಪಾಂಪ್ಲೇಟ್, ಅಂಜಲ್, ಸಿಗಡಿ, ಕಂಡಿಗೆ, ಬೊಂಡಾಸ್ ಸೇರಿ ಸುಮಾರು 10 ಕಿಲೋ ತೂಕದ ಮೀನು ಹಾಗೂ ಮೀನುಗಾರಿಕೆ ಬಲೆಗೆ ಉಪಯೋಗಿಸುವ ಸುಮಾರು 60 ಮೀಟರ್ ಉದ್ದದ ಹಳದಿ ಬಣ್ಣದ ರೋಪ್ ಇರುವುದು ಕಂಡುಬಂದಿರುತ್ತದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಅವರಿಬ್ಬರಲ್ಲಿ ಈ ಮೀನು ಮತ್ತು ರೋಪನ್ನು ಎಲ್ಲಿಂದ ತಂದಿದ್ದೀರಿ ಎಂದು ಕೇಳಿದ್ದು, ಅದಕ್ಕೆ ಅವರು ಮೀನು ಮತ್ತು ರೋಪನ್ನು ಬಂದರಿನಲ್ಲಿ ನಿಲ್ಲಿಸಿದ್ದ ತೊಟ್ಟಂ ನ ನಾಗೇಶ ಎಂಬವರಿಗೆ ಸೇರಿದ ಜಸ್ಮಿನ್ ಎಂಬ ಬೋಟಿನಿಂದ  ಕದ್ದುಕೊಂಡು ಬಂದಿರುವುದಾಗಿ ತಿಳಿಸಿರುತ್ತಾರೆ ಎನ್ನಲಾಗಿದೆ.

ಅವರು ಕದ್ದ 10 ಕಿಲೋ ತೂಕದ ಮೀನು ಅಂದಾಜು ಮೌಲ್ಯ ಸುಮಾರು 5,000/- ರೂ ಮತ್ತು 60 ಮೀ ರೋಪ್ ಮೌಲ್ಯ ಸುಮಾರು 4,000/- ರೂ ಆಗಿರುತ್ತದೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆಯಲ್ಲಿ ಕಲಂ:303(2) BNS ರಂತೆ ಪ್ರಕರಣ ದಾಖಲಾಗಿದೆ.

error: No Copying!