Spread the love

ಮಣಿಪಾಲ: ದಿನಾಂಕ:03-04-2025(ಹಾಯ್ ಉಡುಪಿ ನ್ಯೂಸ್) ಈಶ್ವರ ನಗರದ ಬಾರೊಂದಕ್ಕೆ ಬಂದ ಮೂವರು ಯುವಕರು ಅಲ್ಲಿ ಊಟ ಮಾಡುತ್ತಿದ್ದ ಯುವಕನೋರ್ವನಿಗೆ ಸೋಡಾ ಬಾಟಲಿಯಿಂದ ಹಲ್ಲೆ ನಡೆಸಿದ್ದಾರೆ ಎಂದು ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೆರ್ಗಾ ಗ್ರಾಮದ ನಿವಾಸಿ ದೀಕ್ಷಿತ್ (25) ಎಂಬವರು ದಿನಾಂಕ 02.04.2025 ರಂದು ರಾತ್ರಿ  ಮಣಿಪಾಲ ಈಶ್ವರ ನಗರದಲ್ಲಿರುವ ಸಾಯಿ ಸಾಗರ್‌ ಬಾರ್‌ಗೆ ಸ್ನೇಹಿತರಾದ ಸತೀಶ್‌ ಹಾಗೂ ಹಿತೇಶ್‌ರವರೊಂದಿಗೆ ಊಟಕ್ಕೆ ಹೋಗಿ ಬಾರ್‌ನ ಕ್ಯಾಬಿನ್‌ನಲ್ಲಿ ಊಟ ಮಾಡುತ್ತಿದ್ದಾಗ ಮಹಾನ್‌, ಸುಮಿತ್‌, ವರುಣ್‌ ಎಂಬವರು ಬಂದು ದೀಕ್ಷಿತ್ ರವರಿಗೆ ಕೈಯಿಂದ ಕೆನ್ನೆಗೆ ಹೊಡೆದು ಟೇಬಲ್‌ ಮೇಲೆ ಇದ್ದ ಸೋಡಾ ಬಾಟ್ಲಿಯನ್ನು ತೆಗೆದು ದೀಕ್ಷಿತ್ ರವರ ಬಲ ಭುಜದ ಬಳಿ ಹೊಡೆದಾಗ ದೀಕ್ಷಿತ್ ರವರು  ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ಸೋಡಾ ಬಾಟ್ಲಿಯಿಂದ ತಲೆಗೆ ಜೋರಾಗಿ ಹೊಡೆದು ಗಾಯವಾಗಿ ರಕ್ತ ಬಂದಿರುತ್ತದೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಹಾಗೂ  ಆಗ ಅಲ್ಲೇ ಇದ್ದ  ಸುಮಿತ್‌ ಹಾಗೂ ವರುಣ್‌ ರವರು ಕೂಡಾ ಕೈಯಿಂದ ದೀಕ್ಷಿತ್ ರವರಿಗೆ ಹೊಡೆದು  ಜೀವ ಬೆದರಿಕೆ ಹಾಕಿರುತ್ತಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆಯಲ್ಲಿ  ಕಲಂ: 115(2), 118(1), 351(1), 352 ಜೊತೆಗೆ 3(5)  BNS ನಂತೆ ಪ್ರಕರಣ ದಾಖಲಾಗಿದೆ.

error: No Copying!