Spread the love

ಗಂಗೊಳ್ಳಿ: ದಿನಾಂಕ :03-04-2025(ಹಾಯ್ ಉಡುಪಿ ನ್ಯೂಸ್) ಹಕ್ಲಾಡಿ ಗ್ರಾಮದ ನಿವಾಸಿ ಯುವಕನಿಗೆ ಹಳೆಯ ದ್ವೇಷ ಹೊಂದಿದ್ದವರು  ಅಪರಿಚಿತರಿಂದ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

ಕುಂದಾಪುರ ,ಹಕ್ಲಾಡಿ ಗ್ರಾಮದ ನಿವಾಸಿ ದೀಪಕ ಕುಮಾರ್ (27)  ಎಂಬವರು  ದಿನಾಂಕ 31/03/2025 ರಂದು ರಾತ್ರಿ  ಕುಂದಾಫುರ ತಾಲೂಕಿನ ಕುಂದಬಾರಂದಾಡಿ ವೈನ್‌ ಶಾಫ್‌ ನ ಹಿಂದುಗಡೆ ಹೋದ ಸಮಯ ಯಾರೋ ಇಬ್ಬರು ಅಪರಿಚಿತ ವ್ಯಕ್ತಿಗಳು ಮುಖಕ್ಕೆ ಮಾಸ್ಕ್‌ ಹಾಕಿಕೊಂಡು ಬಂದು ದೀಪಕ ಕುಮಾರ್ ರವರ ತಲೆಯ ಹಿಂಬದಿಯ ಬಲಭಾಗಕ್ಕೆ ಪಂಚ್ ಮಾಡಿ, ದೀಪಕ ಕುಮಾರ್ ರವರನ್ನು ಕೆಳಕ್ಕೆ ದೂಡಿ ಕಬ್ಬಿಣದ ಸ್ಟೀಲ್‌ ರಾಡ್‌ ನಿಂದ ಎಡಕಾಲಿನ ಮೊಣಗಂಟಿಗೆ ಬಲವಾಗಿ ಹೊಡೆದು, ಕಣ್ಣಿಗೆ ಖಾರದ ಪುಡಿ ಹಾಕಿ ದೀಪಕ ಕುಮಾರ್ ರವರನ್ನು ಉದ್ದೇಶಿಸಿ ಕೊಲೆ ಮಾಡುತ್ತೇವೆ” ಎಂದು ಬೈದು ಹೋಗಿರುತ್ತಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಈ  ಘಟನೆಯಲ್ಲಿ ದೀಪಕ ಕುಮಾರ್ ರವರ ಎಡಕಾಲಿನ ಮೊಣಗಂಟಿಗೆ ಹಾಗೂ ತಲೆಯ ಬಲಬದಿಗೆ ಗಂಭೀರ ಗಾಯ ಉಂಟಾಗಿ ಚಿಕಿತ್ಸೆ ಬಗ್ಗೆ ಕುಂದಾಪುರ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಘಟನೆಗೆ ದೀಪಕ ಕುಮಾರ್ ರವರು ಮತ್ತು ರಮೇಶ್‌, ನಿಖಿಲ್‌, ಚಿನ್ಮಯ್‌ ಎಂಬವರಿಗೆ ಇರುವ ಹಳೆಯ ದ್ವೇಷದ ಹಿನ್ನೆಲೆಯಿಂದ ಅಪರಿಚಿತರಿಂದ ದೀಪಕ ಕುಮಾರ್ ರವರ ಮೇಲೆ ಹಲ್ಲೆ ಮಾಡಿಸಿ ಜೀವ ಬೆದರಿಕೆ ಹಾಕಿಸಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣೆಯಲ್ಲಿ ಕಲಂ: 118(1), 352, 351(2), 49  ಜೊತೆಗೆ 3(5) BNS ನಂತೆ ಪ್ರಕರಣ ದಾಖಲಾಗಿದೆ.

error: No Copying!